Karnataka Times
Trending Stories, Viral News, Gossips & Everything in Kannada

Maruti Alto K10: 33 Km ಮೈಲೇಜ್ ನೀಡುವ ಮಾರುತಿ ಆಲ್ಟೊ K10 ಕಾರಿನ ದರ ಇಳಿಕೆ, ಹೊಸ ಬೆಲೆ ಇಲ್ಲಿದೆ!

advertisement

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಜನಪ್ರಿಯ ಮಾದರಿ ಮಾರುತಿ ಆಲ್ಟೋ K10 ಕಾರಿನ ಬೆಲೆಯನ್ನು ಪರಿಷ್ಕರಿಸಿದೆ ಹೌದು ಅದರೊಂದಿಗೆ ಸಂತೋಷದ ಸುದ್ದಿಯನ್ನು ಸಹ ನೀಡಿದ್ದು ಬೆಲೆ ಕೇಳಿ ಎಲ್ಲರೂ ಸಂತಸ ಪಡುಹಾಗಾಗಿದೆ. ಮಾರುತಿ ಸುಜುಕಿ ಆಲ್ಟೋ K10 (Maruti Suzuki Alto K10) ಕಾರಿನ ರೂಪಾಂತರದ ಆಯ್ಕೆಯ ಆಧಾರದ ಮೇಲೆ ಬೆಲೆಗಳ ಪರಿಷ್ಕರಣೆಯಾಗಿದೆ.

ಯಾವ ಕಾರಿನ ಬೆಲೆ ಎಷ್ಟು?

ಮಾರುತಿ ಆಲ್ಟೋ K10 ಕಾರಿನ VXi AGS ಮತ್ತು VXi+ AGS ರೂಪಾಂತರಗಳ ಬೆಲೆಗಳು ರೂ.5,000 ಕಡಿತಗೊಳಿಸಿದೆ. ಇದಿಗ ಆಲ್ಟೋ K10 ಕಾರಿನ VXi AGS ರೂಪಾಂತರದ ಬೆಲೆಯು ರೂ.5.56 ಲಕ್ಷವಾದರೆ, VXi+ AGS ರೂಪಾಂತರದ ಬೆಲೆಯು ರೂ.5.85 ಲಕ್ಷವಾಗಿದೆ. ಮಾರುತಿ ಆಲ್ಟೊ K10 ಕಾರಿನ ಎಲ್ಲಾ ಇತರ ರೂಪಾಂತರಗಳ ಬೆಲೆಗಳು ಬದಲಾಗದೆ ಇರುವುದರಿಂದ, ಅದರ Std, LXi, VXi, ಮತ್ತು VXi+. ರೂಪಾಂತರಗಳಿಗೆ ಅದೇ ಬೆಲೆಯಲ್ಲಿ ಲಭ್ಯವಿರುತ್ತದೆ.

ಈ ಮಾರುತಿ ಆಲ್ಟೋ ಕಾರು ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ ಪ್ಲಸ್ ಸೇರಿದಂತೆ 4 ರೂಪಾಂತರ, ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ ಒಳಗೊಂಡಂತೆ 7 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಆಲ್ಟೊ ಕೆ10 ವಿನ್ಯಾಸ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, 4 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

advertisement

Maruti Alto K10 ಕಾರಿನ ವಿಶೇಷತೆಗಳೇನು ?

ಇನ್ನು ಮಾರುತಿ ಸುಜುಕಿ ಆಲ್ಟೊ ಕೆ10 ಕಾರು ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್ ಟ್ರೈನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1 – ಲೀಟರ್ ಡುಯಲ್ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 67 PS ಪವರ್, 89 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5 – ಸ್ವೀಡ್ ಮ್ಯಾನುವಲ್, 5 – ಸ್ವೀಡ್ ಎಎಂಟಿ (ಆಟೋಮೆಟಿಕ್) ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.

ಈ ಸಿಎನ್‌ಜಿ ಕಾರು ಸಹ ಇದೇ ಎಂಜಿನ್ ಒಳಗೊಂಡಿದೆ. ಆದರೆ, 57 PS ಪವರ್, 82 Nm ಪೀಕ್ ಟಾರ್ಕ್ ಮಾತ್ರ ಉತ್ಪಾದಿಸುತ್ತದೆ. ಕೇವಲ 5 – ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. ಮೈಲೇಜ್ ವಿಚಾರಕ್ಕೆ ಬರುವುದಾದರೆ, ಪೆಟ್ರೋಲ್ ರೂಪಾಂತರಗಳು 24.39 kmpl – 24.90 kmpl, ಸಿಎನ್‌ಜಿ ರೂಪಾಂತರಗಳು 33.40 km/kg – 33.85 km/kg ಮೈಲೇಜ್ ಅನ್ನು ನೀಡುತ್ತದೆ.

ಇನ್ನು ಈ ಮಾರುತಿ ಸುಜುಕಿ ಆಲ್ಟೊ ಕೆ10 ಕಾರು, 7 – ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಕೀಲೆಸ್ ಎಂಟ್ರಿ, ಸೆಮಿ – ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ – ಮೌಂಟೆಡ್ ಕಂಟ್ರೋಲ್‌, ಐಡಲ್ ಸ್ಟಾರ್ಟ್/ ಸ್ಟಾಪ್ ಬಟನ್ ಪಡೆದಿದೆ. ಜೊತೆಗೆ 214 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಒಳಗೊಂಡಿದೆ.ಈ ಮಾರುತಿ ಸುಜುಕಿ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್‌ ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಫ್ರಂಟ್ ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರಿವರ್ಸಿಂಗ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ.

advertisement

Leave A Reply

Your email address will not be published.