Karnataka Times
Trending Stories, Viral News, Gossips & Everything in Kannada

CM Siddaramaiah: ರೈತರಿಗೆ ಗುಡ್ ನ್ಯೂಸ್, ಸಾಲ ಮನ್ನಾ ಘೋಷಣೆ ಮಾಡಿದ ಸಿದ್ದರಾಮಯ್ಯ

advertisement

ರೈತರು ಈ ದೇಶದ ಅಭಿವೃದ್ಧಿ ಗೆ ಮುಖ್ಯ ಕಾರಣ ಕರ್ತರು. ಹಾಗಾಗಿ ಸರಕಾರ ಹಲವು ರೀತಿಯ ಪ್ರಯೋಜಗಳನ್ನು ರೈತರಿಗಾಗಿ ನೀಡುತ್ತಿದೆ. ಈಗಾಗಲೇ ಕೇಂದ್ರ ಸರಕಾರ ಕಿಸಾನ್ ಹಣ ನೀಡಿದ್ರೆ ಮೊನ್ನೆ ಯಷ್ಟೆ ರಾಜ್ಯ ಸರಕಾರ ಬರ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಿದೆ. ಹೀಗೆ ರೈತರ ಅನುಕೂಲ ಕ್ಕಾಗಿ ಹಲವು ಸೌಲಭ್ಯ ಗಳನ್ನು ‌ನೀಡುತ್ತಲೆ ಬಂದಿದೆ.ಅದೇ ರೀತಿ ಬಜೆಟ್ ನಲ್ಲಿಯು ಕೃಷಿಕರಿಗೆ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ‌

ಈಗಾಗಲೇ ಕೃಷಿ ಯಂತ್ರೋಪಕರಣ ಮತ್ತು ರಸಗೊಬ್ಬರದ ಸಬ್ಸಿಡಿ ಹೆಚ್ಚಳ ಮಾಡಬೇಕು ಎಂಬುದು ರೈತರ ಬೇಡಿಕೆ ಯಾಗಿದ್ದು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲವಾಗುವ ಯೋಜನೆ ಆಗಬೇಕು ಎಂದು ರೈತರ ಒತ್ತಾಯವಾಗಿತ್ತು.

ಸಾಲ ಮನ್ನಾ ಪ್ರಸ್ತಾಪ:

 

 

ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಈ ಭಾರಿಯ ಬಜೆಟ್‌ನಲ್ಲಿ ರೈತಾಪಿ ವರ್ಗದವರಿಗೂ ಸಿಹಿಸುದ್ದಿಯನ್ನು ನೀಡಿದ್ದು ರೈತರ ಹೊರೆಯನ್ನು ತಪ್ಪಿಸಲು ಡಿಸಿಸಿ ಹಾಗೂ ಪಿಕಾರ್ಡ್ ಬ್ಯಾಂಕ್‌ಗಳ ಸಾಲದ ಮೇಲಿನ ಬಡ್ಡಿ ಮನ್ನಾ ಘೋಷಣೆ ಮಾಡಿದ್ದಾರೆ. ಇದರಿಂದ ಸುಮಾರು 57 ಸಾವಿರ ರೈತರಿಗೆ ಅನುಕೂಲವಾಗಲಿದ್ದು ಈ ಬಗ್ಗೆ ಸೂಕ್ತವಾದ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ಅದೇ ರೀತಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಲಿದ್ದು ಇದಕ್ಕಾಗಿ 496 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಬಜೆಟ್ ನಲ್ಲಿ ಮಾಹಿತಿ ನೀಡಿದ್ರು.

advertisement

ಹಲವು ಯೋಜನೆಯ ಘೋಷಣೆ:

ಈ ಭಾರಿ ಕೃಷಿಗೆ ಹೆಚ್ಚಿನ ಮಹತ್ವ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು, ಸಾಲದ ಬಡ್ಡಿಮನ್ನಾ, ಸ್ಪೈಸ್ ಪಾರ್ಕ್‌ ಕುರಿತಂತೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ರು.ಕೃಷಿ ಭಾಗ್ಯ ಯೋಜನೆಯನ್ನು ಮರುಜಾರಿಗೊಳಿಸಲಾಗುತ್ತದೆ ಎಂದು ಎಂದು ಬಜೆಟ್ ಮೂಲಕ ತಿಳಿಸಿದರು. 2023-24ನೇ ಸಾಲಿನಲ್ಲಿ ಸುಮಾರು 200 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದ್ದು, ಈ ವರ್ಷದಲ್ಲಿ ಈ ಯೋಜನೆಯನ್ನು ಮುಂದುವರೆಸಲಾಗುವುದು ಎಂದರು.

ತರಭೇತಿ ನೀಡಲಾಗುವುದು:

ರೈತ ಉತ್ಪಾದಕ ಸಂಸ್ಥೆಗಳನ್ನು ಹೆಚ್ಚಿಸಲು ,ರೈತರನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸಲು, ಕೃಷಿಯ ಬಗ್ಗೆ ತರಭೇತಿ ನೀಡಲು ಇನ್ನಷ್ಟು ಸದೃಢ ಮತ್ತು ಸುಸ್ಥಿವಾಗಿ ಕಾರ್ಯನಿರ್ವಹಿಸಲು ತರಬೇತಿ, ಮಾರ್ಗದರ್ಶನ ನೀಡುವ Agri Accelerator Platform ಮೂಲಕ ಕೃಷಿ ವಲಯದ Start-up ಗಳನ್ನು ಉತ್ತೇಜನ ಮಾಡಲಾಗುವುದು ಎಂದರು.

ಸಾಲದ ಮೊತ್ತ ಏರಿಕೆ:

ಸಹಕಾರಿ ಬ್ಯಾಂಕ್ಗಳ ಆರ್ಥಿಕ ಸದೃಡತೆಯನ್ನು ಕಾಪಾಡಲು 2023-24ನೇ ಸಾಲಿನಲ್ಲಿ ಬಡ್ಡಿ ರಹಿತ ಅಲ್ಪಾವಧಿ ಸಾಲವನ್ನು 3 ಲಕ್ಷ ರೂ. ನಿಂದ 5 ಲಕ್ಷ ರೂ.ಗಳಿಗೆ ಏರಿಸಲಾಗುವುದು ಮತ್ತು ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲವನ್ನು ಶೇ.3ರ ಬಡ್ಡಿ ದರದಲ್ಲಿ 10 ಲಕ್ಷ ರೂ.ನಿಂದ 15 ಲಕ್ಷ ರೂ.ಗಳಿಗೆ ಏರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

advertisement

Leave A Reply

Your email address will not be published.