Karnataka Times
Trending Stories, Viral News, Gossips & Everything in Kannada

Ujjwala Yojana: ಮಾರ್ಚ್ 31ರ ಒಳಗೆ ಉಜ್ವಲ್ ಯೋಜನೆ ಫಲಾನುಭವಿಗಳು ಈ ಕೆಲಸ ಮಾಡಲೇ ಬೇಕು

advertisement

ಭಾರತೀಯರ ಸ್ಥಾನ ಮಾನ ಮಾನ ಉನ್ನತಿಕರಿಸಲು ಬಡತನ ಬುಡ ಸಮೇತ ನಿರ್ಮೂಲನೆ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ವರ್ಷಗಳಿಂದ ಪ್ರಯತ್ನ ಪಡುತ್ತಲೇ ಇದೆ. ರಾಜ್ಯದಲ್ಲಿ ಬಡತನ ಸಂಕೇತಿಸುವ ಅನೇಕ ಅಂಶಗಳು ಈಗಾಗಲೇ ಸುಧಾರಣೆ ಆಗುತ್ತಿದೆ ಅಂತವುಗಳಲ್ಲಿ ಸೌದೆ ಒಲೆ ತೊರೆದು ಎಲ್ ಪಿಜಿ ಸಿಲಿಂಡರ್ (LPG Cylinder) ಬಳಸುವುದನ್ನು ಸಹ ನಾವು ಕಾಣಬಹುದು. ಇದು ಆರೋಗ್ಯಕ್ಕೆ ಉತ್ತಮವಾಗಿರುವ ಸೌಲಭ್ಯ ಮಾತ್ರವಲ್ಲದೆ ಅಡುಗೆ ಕೆಲಸವು ಬೇಗನೆ ಆಗಲಿದೆ. ಹಾಗಾಗಿ ಕೇಂದ್ರ ಸರಕಾರ ರಾಷ್ಟ್ರೀಯ ಮಟ್ಟದಲ್ಲಿ ಉಜ್ವಲ್ ಯೋಜನೆ (Ujjwala Yojana) ಪರಿಚಯಿದ್ದು ಈಗ ಅದರ ಬಗ್ಗೆ ಅಪ್ಡೇಟ್ ಮಾಹಿತಿಯೊಂದು ತಿಳಿದು ಬಂದಿದೆ.

ಕೇಂದ್ರ ಸರಕಾರದ ಅವಧಿಯಲ್ಲಿ ಬಂದ ಉಜ್ವಲ್ ಯೋಜನೆ (Ujjwala Yojana) ಮೂಲಕ ಮಧ್ಯಮ ವರ್ಗದ ಹಾಗೂ ಬಡವರಿಗೆ ಕೂಡ ಎಲ್ ಪಿಜಿ ಸಿಲಿಂಡರ್ (LPG Cylinder) ಬಳಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಖಾಸಗಿ ಸಿಲಿಂಡರ್ ಗೆ ಹೋಲಿಸಿದರೆ ಕಡಿಮೆ ಮೊತ್ತದ ಮತ್ತು ಸರಕಾರದಿಂದ ಕೂಡ ಸಹಾಯಧನ ನೀಡಲಾಗುತ್ತಿದೆ. ಹೀಗಾಗಿ ಕೆಲಸವೂ ಸುಲಭ ಜೊತೆಗೆ ಸಬ್ಸಿಡಿ ಸಹ ದೊರೆಯುತ್ತಿದೆ ಎಂದರೆ ಯಾರಿಗೂ ಈ ಯೋಜನೆ ಬೇಡ ಅನ್ನೊ ಮನಸ್ಸು ಬಾರದು. ಈಗ ಕೇಂದ್ರ ಸರಕಾರವು ಮತ್ತೊಂದು ಅಪ್ಡೇಟ್ ಮಾಹಿತಿ ನೀಡಿದ್ದು ನೀವು ಈ ಒಂದು ಕೆಲಸ ಮಾಡಿಸದೇ ಇದ್ದರೆ ಸಬ್ಸಿಡಿ ಹಣ ನಿಲ್ಲುವ ಸಾಧ್ಯತೆ ಇದೆ.

ಕೆವೈಸಿ ಕಡ್ಡಾಯ:

 

 

advertisement

ಬಹುತೇಕ ಕ್ಷೇತ್ರದಲ್ಲಿ ಆಧಾರ್ ಜೋಡಣೆ ಕಡ್ಡಾಯ ಮಾಡಿರುವ ಬಿಚಾರ ನಮಗೆಲ್ಲ ತಿಳಿದೆ ಇದೆ. ಅದೇ ರೀತಿ ಉಜ್ವಲ್ ಯೋಜನೆ (Ujjwala Yojana) ಗೆ ಕೂಡ ಆಧಾರ್ ಕಾರ್ಡ್ (Aadhaar Card) ಲಿಂಕ್ ಮಾಡಿ ಕೆವೈಸಿ ಅಪ್ಡೇಟ್ ಮಾಡುವುದನ್ನು ಕಡ್ಡಾಯ ಮಾಡಲಾಗುತ್ತಿದೆ. ಮಾರ್ಚ್ 31ರ ಒಳಗೆ KYC ಮಾಡಿಸದೆ ಇದ್ದರೆ ನಿಮಗೆ ಮಾರ್ಚ್ ನಂತರ ಸಬ್ಸಿಡಿ ಹಣ ಬರಲಾರದು. ಹಾಗಾದರೆ ಆಧಾರ್ ಅನ್ನು ಇದರ ಜೊತೆಗೆ ಲಿಂಕ್ ಮಾಡುವುದು ಹೇಗೆ ಎಂಬ ಗೊಂದಲ ನಿಮಗೂ ಇರಬಹುದು. ಅದಕ್ಕೆ ಈ ಕೆಳಗಿನ ಕ್ರಮ ಅನುಸರಿಸಿ.

ಹೀಗೆ ಮಾಡಿ:

ಇದಕ್ಕಾಗಿ ಸರಕಾರದಿಂದಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ. ಅದಕ್ಕೆ ಭೇಟಿ ನೀಡಿ ಬಳಿಕ ಎಲ್ ಪಿಜಿ ಸಿಲಿಂಡರ್ (LPG Cylinder) ಲಿಂಕ್ ಎಂಬ ಆಪ್ಶನ್ ಅದರಲ್ಲಿ ನಿಮಗೆ ಸಿಗಲಿದೆ.ಬಳಿಕ ಯೋಜನೆಯ ಹೆಸರನ್ನು ಸಹ ನಮೋದಿಸಬೇಕು. ಅದಾದ ಬಳಿಕ ವಿತರಕರ ಹೆಸರು, ಗ್ರಾಹಕರ ಸಂಖ್ಯೆ ನಮೋದಿಸಿ ಈ ಎಲ್ಲ ಪ್ರಕ್ರಿಯೆ ಆದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಹಾಗೂ ಆಧಾರ್ ಸಂಖ್ಯೆ ಕೂಡ ಫಿಡಿಂಗ್ ಮಾಡಿ. ಎಲ್ಲ ಪ್ರಕ್ರಿಯೆ ನಂತರ ಸಬ್ಮಿಟ್ ಎಂದು ಕ್ಲಿಕ್ ಮಾಡಿ ಆಗ ನಿಮ್ಮ ಮೇಲ್ ಅಥವಾ ಮೊಬೈಲ್ ಗೆ OTP ಬರಲಿದೆ. ಬಳಿಕ ಆ OTP ಕೂಡ ನಮೋದಿಸಬೇಕು.

ಪರಿಶೀಲನೆ ಕಾರ್ಯ:

ಈ ಎಲ್ಲ ಪ್ರಕ್ರಿಯೆ ಆದ ಬಳಿಕ ನಿಮ್ಮ ಮೊಬೈಲ್ ಆಧಾರ್, ವಿಳಾಸ ಎಲ್ಲ ಪರಿಶೀಲನೆ ಮಾಡಿ KYC ಲಿಂಕ್ ಮಾಡಲಾಗುತ್ತದೆ. ಈ ಮೂಲಕ ಆಧಾರ್ ಅನ್ನು ಉಜ್ವಲ್ ಯೋಜನೆ ಅಡಿಯಲ್ಲಿ ಲಿಂಕ್ ಮಾಡಿದರೆ ಸರಕಾರದ ಸಬ್ಸಿಡಿ ಸಹ ದೊರೆಯುತ್ತದೆ. ಆಧಾರ್ ಲಿಂಕ್ ಮಾಡುವಂತೆ ಹೇಳಿದ್ದೇ ಅಕ್ರಮ ಜಾಲ ಪತ್ತೆ ಹಚ್ಚಬೇಕು, ಮೋಸ ತಡೆಯಬೇಕು ಆಡಳಿತದಲ್ಲಿ ಪಾರದರ್ಶಕತೆ ಬರಬೇಕು ಎಂಬ ಉದ್ದೇಶಕ್ಕಾಗಿದ್ದು ಇದೊಂದು ಉತ್ತಮ ಯೋಚನೆ ಎನ್ನಬಹುದು.

advertisement

Leave A Reply

Your email address will not be published.