Karnataka Times
Trending Stories, Viral News, Gossips & Everything in Kannada

Debit Card: ನಿಮ್ಮ ಬಳಿ ಡೆಬಿಟ್ ಕಾರ್ಡ್ ಇದ್ರೆ ಸಿಗಲಿದೆ 10 ಲಕ್ಷ ರೂಪಾಯಿ, ಹೀಗೆ ಪಡೆಯಿರಿ!

advertisement

ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ನೀವು ಖಾತೆಯನ್ನು ಆರಂಭಿಸಿದರೆ ನಿಮಗೆ ಡೆಬಿಟ್ ಕಾರ್ಡ್ (Debit Card) ಕೊಡಲಾಗುತ್ತದೆ. ನಿಮ್ಮ ಹಣಕಾಸಿನ ವ್ಯವಹಾರ ವ್ಯವಹಾರ ಹಾಗೂ ನೀವು ಪಡೆದುಕೊಳ್ಳುವ ಮಾಸಿಕ ವೇತನದ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಕ್ರೆಡಿಟ್ ಕಾರ್ಡ್ ಪಡೆದುಕೊಂಡರೆ ಅದರಲ್ಲಿ ಸಾಕಷ್ಟು ಬೆನಿಫಿಟ್ ಇದೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಡೆಬಿಟ್ ಕಾರ್ಡ್ ಮೂಲಕ 10 ಲಕ್ಷ ರೂಪಾಯಿಗಳವರೆಗಿನ ಪ್ರಯೋಜನ ಪಡೆದುಕೊಳ್ಳಬಹುದು ಎಂಬುದು ನಿಮಗೆ ಗೊತ್ತಾ?

ಡೆಬಿಟ್ ಕಾರ್ಡ್ ನಿಂದ ಸಿಗಲಿದೆ 10 ಲಕ್ಷ ರೂಪಾಯಿ!

 

 

ಬೇರೆ ಬೇರೆ ಬ್ಯಾಂಕುಗಳು ಡೆಬಿಟ್ ಕಾರ್ಡ್ (Debit Card) ಅನ್ನು ಖಾತೆದಾರರಿಗೆ ಒದಗಿಸುತ್ತವೆ. ಬ್ಯಾಂಕಿನಲ್ಲಿ ಒಂದರಿಂದ ಹತ್ತು ಲಕ್ಷ ರೂಪಾಯಿಗಳವರೆಗಿನ ವಿಮಾ ಕವರೇಜ್ (Insurance Coverage) ನೀಡಲಾಗುತ್ತದೆ. ಹೌದು, ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಅಥವಾ ಎಟಿಎಂ ಕಾರ್ಡ್ ಹೊಂದಿರುವವರಿಗೆ ಇದು ಬಹಳ ದೊಡ್ಡ ಪ್ರಯೋಜನವಾಗಲಿದೆ ಯಾಕಂದ್ರೆ ಒಂದೇ ಒಂದು ರೂಪಾಯಿಗಳ ಪ್ರೀಮಿಯಂ ಕೂಡ ಪಾವತಿ ಮಾಡದೆ ಎಟಿಎಂ ಕಾರ್ಡ್ ಮೂಲಕ ಅಪಘಾತ ವಿಮೆ ರಕ್ಷಣೆ ನೀಡಲಾಗುವುದು.

ರಸ್ತೆ ಅಪಘಾತದಲ್ಲಿ ಎಟಿಎಂ ಕಾರ್ಡ್ (ATM Card) ಹೊಂದಿರುವ ವ್ಯಕ್ತಿ ಸಾವನ್ನಪ್ಪಿದರೆ ಒಂದು ಲಕ್ಷದಿಂದ 10 ಲಕ್ಷ ರೂಪಾಯಿಗಳವರೆಗೆ ಬ್ಯಾಂಕ್ ಒದಗಿಸುತ್ತದೆ. ಅಪಘಾತ ನಡೆದು ವ್ಯಕ್ತಿ ಮರಣ ಹೊಂದಿದರೆ ಆತನ ಮನೆಯವರು ಅಪಘಾತ ವಿಮೆಯನ್ನು ಕ್ಲೈಮ್ ಮಾಡಬಹುದು.

advertisement

ಯಾವ ಡೆಬಿಟ್ ಕಾರ್ಡ್ ನಲ್ಲಿ ಸಿಗಲಿದೆ ಉಚಿತ ವಿಮೆ?

ಬ್ಯಾಂಕ್ ನಲ್ಲಿ ಕೊಡಲಾಗುವ ಎಟಿಎಂ ಕಾರ್ಡ್ (ATM Card) ಗಳಲ್ಲಿ ಈ ವಿಮಾ ಸೌಲಭ್ಯ ಲಭ್ಯವಿರುತ್ತದೆ. ಈ ವಿಮೆಯನ್ನು ಪ್ರತ್ಯೇಕವಾಗಿ ನೀವು ಮಾಡಿಸುವ ಅಗತ್ಯವಿಲ್ಲ. ಇದಕ್ಕಾಗಿ ಒಂದು ರೂಪಾಯಿಗಳನ್ನು ಕೂಡ ಬ್ಯಾಂಕ್ ನಿಮಗೆ ವಿಧಿಸುವುದಿಲ್ಲ. ನೀವು ಬ್ಯಾಂಕಿನಿಂದ ಡೆಬಿಟ್ ಕಾರ್ಡ್ (Debit Card) ಅನ್ನು ಪಡೆದ ತಕ್ಷಣ ಆಟೋಮೆಟಿಕ್ ಆಗಿ ಅದು ವಿಮೆಯನ್ನು ಒಳಗೊಂಡಿರುತ್ತದೆ.

ಡೆಬಿಟ್ ಕಾರ್ಡ್ ವಿಮೆಯನ್ನು ಕ್ಲೈಮ್ ಮಾಡುವುದು ಹೇಗೆ?

ಯಾವುದೇ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು ಆ ವ್ಯಕ್ತಿಗೆ ಡೆಬಿಟ್ ಕಾರ್ಡ್ ನೀಡಲಾಗಿದ್ದರೆ ಆತನಿಗೆ ಅಪಘಾತ ವಿಮೆ ಸೌಲಭ್ಯ ಇರುತ್ತದೆ. ಡೆಬಿಟ್ ಕಾರ್ಡ್ ಪಡೆದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಮರಣ ಹೊಂದಿದಾಗ ನಾಮಿನಿ ಆಗಿರುವವರು ರಸ್ತೆ ಅಪಘಾತ ವಿಮೆಯನ್ನು ಕ್ಲೈಮ್ ಮಾಡಬಹುದು.

ಈ ವಿಮೆಯನ್ನು ಪಡೆದುಕೊಳ್ಳಲು ಮೊದಲು ಬ್ಯಾಂಕಿಗೆ ಹೋಗಬೇಕು. ನಂತರ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಖಾತೆದಾರನ ಬಗ್ಗೆ ಮಾಹಿತಿ ನೀಡಬೇಕು. ಮರಣ ಪ್ರಮಾಣ ಪತ್ರ ಎಫ್ಐಆರ್ ದಾಖಲೆ ಅಥವಾ ಪೊಲೀಸ್ ನೀಡಿದ ಪ್ರಮಾಣ ಪತ್ರವನ್ನು ಒದಗಿಸಬೇಕು. ವ್ಯಕ್ತಿ ಮೃತಪಟ್ಟ ಕೇವಲ 60 ದಿನಗಳ ಒಳಗೆ ಬ್ಯಾಂಕ್ ಗೆ ಈ ಮಾಹಿತಿಗಳನ್ನು ನೀಡಿದರೆ ಮಾತ್ರ ವಿಮಾ ಮೊತ್ತ ನಾಮಿನಿ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಇದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡರೆ ವಿಮೆ ಸಿಗುವುದಿಲ್ಲ. ಎಲ್ಲಾ ದಾಖಲೆ ಮತ್ತು ಮಾಹಿತಿ ನೀಡಿದ ನಂತರ ಬ್ಯಾಂಕ್ ಸರಿಯಾಗಿ ಪರಿಶೀಲನೆ ಮಾಡಿ ಕ್ಲೈಮ್ ಮಾಡಿರುವ ನಾಮಿನಿ ಹೇಳುತ್ತಿರುವ ವಿಚಾರ ಸರಿ ಇದೆ ಎಂಬುದು ಕನ್ಫರ್ಮ್ ಆದ ಮೇಲೆ ಅಷ್ಟೇ ಅಪಘಾತ ವಿಮೆ ಹಣವನ್ನು ನೀಡಲಾಗುವುದು.

advertisement

Leave A Reply

Your email address will not be published.