Karnataka Times
Trending Stories, Viral News, Gossips & Everything in Kannada

Debit Card: ಡೆಬಿಟ್ ಕಾರ್ಡ್ ನಿಂದ ಪಡೆಯಬಹುದು ಮೂರು ಕೋಟಿ ವಿಮೆ! ಹೇಗೆ ಗೊತ್ತಾ?

advertisement

ಈಗಿನ ಝಮಾನದಲ್ಲಿ, ಇನ್ಸೂರೆನ್ಸ್ (Insurance) ಅಥವಾ ಜೀವ ವಿಮೆ (Life Insurance) ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಸಾಕಷ್ಟು ಜನ ವಿಮಾ ಪಾಲಿಸಿಯನ್ನು ಕೂಡ ಮಾಡಿಸಿಕೊಳ್ಳುತ್ತಾರೆ. ಜೀವ ವಿಮಾ ಪಾಲಿಸಿ ಅಥವಾ ಅಪಘಾತ ವಿಮೆ ತುಸು ದುಬಾರಿ ಆಗಿರುವ ಪಾಲಿಸಿ ಆಗಿರುವುದರಿಂದ, ಸಾಕಷ್ಟು ಜನ ಈ ರೀತಿ ವಿಮೆ ಮಾಡಿಸಲು ಹಿಂದೇಟು ಹಾಕುವುದು ಉಂಟು. ಆದರೆ ನಿಮಗೆ ಗೊತ್ತಾ? ನೀವು ಒಂದೇ ಒಂದು ರೂಪಾಯಿಗಳ ಪ್ರೀಮಿಯಂ ಪಾವತಿ ಮಾಡದೆ ಮೂರು ಕೋಟಿ ರೂಪಾಯಿಗಳವರೆಗಿನ ವಿಮೆ ಸೌಲಭ್ಯವನ್ನು ಕೂಡ ಪಡೆಯಬಹುದು!

Get Free Insurance Through ATM Card:

 

 

ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬರು ಎಟಿಎಂ ಕಾರ್ಡ್ (ATM Card) ಹೊಂದಿರುತ್ತಾರೆ ಹಾಗೂ ನೀವು ಡೆಬಿಟ್ ಕಾರ್ಡ್ (Debit Card) ಅಥವಾ ಎಟಿಎಂ ಕಾರ್ಡ್ ಹೊಂದಿದ್ದರೆ ಅದಕ್ಕೆ ವಿಮೆ (Insurance) ಸೌಲಭ್ಯವು ಇರುತ್ತದೆ. ಹಾಗಾದ್ರೆ ಡೆಬಿಟ್ ಕಾರ್ಡ್ ಮೂಲಕ ಉಚಿತ ವಿಮೆ ಪಡೆದುಕೊಳ್ಳುವುದು ಹೇಗೆ ತಿಳಿದುಕೊಳ್ಳೋಣ.

Debit Card’s Free Accident Insurance:

advertisement

ನೀವು ನಿರ್ದಿಷ್ಟ ಸಮಯದ ಒಳಗೆ ನಿರ್ದಿಷ್ಟ ಮಿತಿಯ ಹಣಕಾಸಿನ ವಹಿವಾಟು ಮಾಡಿದಾಗ ಬ್ಯಾಂಕ್ ಮೂಲಕ ನೀಡಲ್ಪಟ್ಟ ಡೆಬಿಟ್ ಕಾರ್ಡ್ ನಿಂದ ಅಪಘಾತ ವಿಮೆ ಸೌಲಭ್ಯ ಪಡೆಯಬಹುದು. ಇಂತಹ ವಿಮೆ ಪಡೆದುಕೊಳ್ಳಲು ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ನೀತಿ ನಿಯಮಗಳನ್ನು ಅಥವಾ ಷರತ್ತುಗಳನ್ನು ವಿಧಿಸಿರುತ್ತಾರೆ.

Bank Insurance Rules:

ಉಚಿತ ಅಪಘಾತ ವಿಮೆಗಳು ಬೇರೆ ಬೇರೆ ಬ್ಯಾಂಕ್ ನಲ್ಲಿ ಬೇರೆ ಬೇರೆ ರೀತಿಯಲ್ಲಿ ನೀಡಲ್ಪಡುತ್ತವೆ. ಉದಾಹರಣೆಗೆ ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಗ್ರಾಹಕರು ನೀವಾಗಿದ್ದರೆ, ಮಿಲೇನಿಯ ಕ್ರೆಡಿಟ್ ಕಾರ್ಡ್ ಮೂಲಕ ಹಣಕಾಸಿನ ವ್ಯವಹಾರ ಮಾಡಿದರೆ ದೇಶಿಯ ಪ್ರಯಾಣದಲ್ಲಿ 5 ಲಕ್ಷ ಹಾಗೂ ವಿದೇಶಿ ಪ್ರಯಾಣಕ್ಕೆ ಒಂದು ಕೋಟಿ ರೂಪಾಯಿಗಳವರೆಗೆ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಬಹುದು. ಈ ಸೌಲಭ್ಯವನ್ನು ಪಡೆದುಕೊಳ್ಳಲು ನೀವು ಒಂದು ತಿಂಗಳಿನಲ್ಲಿ ಕನಿಷ್ಠ ಒಮ್ಮೆಯಾದರೂ ವಹಿವಾಟು ನಡೆಸಬೇಕು.

ಅದೇ ರೀತಿ ಡೆಬಿಟ್ ಕಾರ್ಡ್ ಹೊಂದಿದ್ದರೆ 500 ರೂಪಾಯಿಗಳ ಎರಡು ವಹಿವಾಟನ್ನು ಪ್ರತಿ ತಿಂಗಳು ನಡೆಸಬೇಕಾಗುತ್ತದೆ. ಇನ್ಫಿನಿಟಿ ಡೆಬಿಟ್ ಕಾರ್ಡ್ ನಿಮ್ಮ ಬಳಿ ಇದ್ದರೆ ಕನಿಷ್ಠ 90 ದಿನಗಳ ಒಳಗೆ ಒಂದು ವಹಿವಾಟು ನಡೆಸಿದರೆ ಈ ವಿಮಾನ ರಕ್ಷಣೆ ಪಡೆಯಬಹುದು.

UPI Transactions are not Eligible for Insurance:

ಸಾಮಾನ್ಯವಾಗಿ ಯುಪಿಐ ಮೂಲಕ ಪೇಮೆಂಟ್ ಮಾಡಿದರೆ ಯಾವುದೇ ರೀತಿಯ ವಿಮಾ ರಕ್ಷಣೆ ಸಿಗುವುದಿಲ್ಲ. ಆದಾಗ್ಯೂ ಇ – ಕಾಮರ್ಸ್ ಪ್ಲಾಟ್ ಫಾರ್ಮ್ ನಲ್ಲಿ ಖರೀದಿ ಮಾಡಿದಾಗ, ಅಥವಾ POS ಅಡಿಯಲ್ಲಿ ನಡೆಸುವ ವ್ಯವಹಾರಕ್ಕೆ ವಿಮಾ ರಕ್ಷಣೆ ಸಿಗುತ್ತದೆ.

advertisement

Leave A Reply

Your email address will not be published.