Karnataka Times
Trending Stories, Viral News, Gossips & Everything in Kannada

Insurance: ನಿಮ್ಮ ಮನೆಯಲ್ಲಿ ಹಿರಿಯ ನಾಗರಿಕರಿದ್ದರೆ ಈ ವಿಮೆ ಮರೆಯಬೇಡಿ.

advertisement

ಹಿರಿಯ ನಾಗರಿಕರಾಗಿರುವ ತಮ್ಮ ಪೋಷಕರಿಗಾಗಿ ಒಂದು ಒಳ್ಳೆಯ ವಿಮಾ ಪಾಲಿಸಿ (Insurance Policy) ಯನ್ನು ಹುಡುಕಿ-ಹುಡುಕಿ ನೀವೂ ಕೂಡ ಸುಸ್ತಾಗಿ ಹೋಗಿದ್ದೀರಾ. ಕೆಲ ವಿಮಾ ಕಂಪನಿಗಳು ಮೊದಲಿಂದಲೇ ಇರುವ ಕಾಯಿಲೆಗಳಿಗೆ 30 ದಿನಗಳ ನಂತರ ಕವರೇಜ್ (ರಕ್ಷಣೆ) ನೀಡುತ್ತಿದ್ದರೆ ಕೆಲ ಕಂಪನಿಗಳು 3 ವರ್ಷಗಳ ಕಾಯುವಿಕೆಯ ಅವಧಿಯನ್ನು ಕೇಳುತ್ತಿದ್ದವು. ತಮ್ಮ ಪೋಷಕರಿಗೆ ಅತ್ಯುತ್ತಮ ವಿಮಾ ಯೋಜನೆ (Insurance Scheme) ಯನ್ನು ಹೇಗೆ ಆರಿಸಿಕೊಳ್ಳೋದು? ವಯಸ್ಸಾಗಿರುವ ತಮ್ಮ ಪೋಷಕರಿಗೆ ಒಳ್ಳೆಯದೊಂದು ವಿಮಾ ಪಾಲಿಸಿಯ ರಕ್ಷಣೆ (Insurance Policy Protection) ನೀಡಲು ಅದರಲ್ಲಿ ಯಾವೆಲ್ಲಾ ಅಂಶಗಳನ್ನು ಪರಿಗಣಿಸಬೇಕು? ಎನ್ನವುದನ್ನು ನಾವು ನೋಡೋಣ.

ವಿಮಾ ಯೋಜನೆ ಏಕೆ ಮಾಡಿಸಬೇಕು?

 

 

ವಯಸ್ಸಾದಂತೆ ಹೋದಂತೆ ರಕ್ತದೊತ್ತಡ (Blood Pressure) ಹಾಗೂ ಮಧುಮೇಹ (Diabetes) ಗಳಂತಹ ಸ್ಥಿತಿಗಳ ಸರ್ವೇಸಾಮಾನ್ಯವಾಗಿದೆ. ಹೆಚ್ಚಿನ ಸಮಯಗಳಲ್ಲಿ, ವಿಮಾ ಕಂಪನಿಗಳು (Insurance Companies) ಮೊದಲಿಂದಲೇ ಇರುವ ಕಾಯಿಲೆಗಳಿಗೆ ತಕ್ಷಣದ ರಕ್ಷಣೆ ನೀಡುವುದಿಲ್ಲ. ಅಂತಹ ಸ್ಥಿತಿಗಳಿಗೆ ರಕ್ಷಣೆ ನೀಡಲು ಒಂದು ಕಾಯುವಿಕೆಯ ಅವಧಿ ಇರುತ್ತೆ. ಈ ಅವಧಿ 2 ರಿಂದ 3 ವರ್ಷಗಳವರೆಗೆ ಇರಬಹುದು. ಈ ಅವಧಿ ಮುಗಿದ ನಂತರವಷ್ಟೇ ಮೊದಲಿನಿಂದಲೇ ಇರುವ ಕಾಯಿಲೆಗಳಿಗೆ ರಕ್ಷಣೆ ಸಿಗುತ್ತದೆ. ಪಾಲಿಸಿಯನ್ನು ಕೊಳ್ಳುವ ಸಮಯಕ್ಕಿಂತಲೂ ಮುಂಚಿತವಾಗಿಯೇ ಇರೋ ಗಂಭೀರ ಕಾಯಿಲೆಗಳಿಗೆ ರಕ್ಷಣೆ ನೀಡೊ ಹೊಣೆಗಾರಿಗೆ ಕಂಪನಿಗಳಿಗೆ ಇರೋದಿಲ್ಲ. ಹೀಗಾಗಿ, ಹಿರಿಯ ನಾಗರಿಕರಿಗಾಗಿ ಪಾಲಿಸಿಯೊಂದನ್ನು ಕೊಳ್ಳುವಾಗ ಮೊದಲಿನಿಂದಲೇ ಇರೋ ಕಾಯಿಲೆಗಳಿಗೆ ಕವರೇಜ್ ಇದೆಯೋ ಇಲ್ಲವೋ ಎಂಬುದನ್ನು ಗಮನಿಸಬೇಕು.

ವಿಮೆ ಯೋಜನೆ ಅಡಿಯಲ್ಲಿ ಬರುವ ಸೌಲಭ್ಯಗಳು ಯಾವವು?

ವ್ಯಕ್ತಿಯೊಬ್ಬನು ಗಂಭೀರ ಅನಾರೋಗ್ಯಕ್ಕೆ ಒಳಗಾದರೆ, ಆತನಿಗೆ ತಕ್ಷಣದ ಆಸ್ಪತ್ರೆಯ ದಾಖಲಾತಿ ಮತ್ತು ವೈದ್ಯಕೀಯ ನೆರವಿನ ಅವಶ್ಯಕತೆ ಉಂಟಾಗಬಹುದು. ಇದೇ ಕಾರಣದಿಂದಾಗಿ, ಆರೋಗ್ಯ ವಿಮಾ ಯೋಜನೆ (Health Insurance Scheme) ಯೊಂದನ್ನು ಕೊಳ್ಳುವ ಮೊದಲು, ಅದರ ಅಡಿಯಲ್ಲಿ ಬರುವ ನಗದುರಹಿತ ಆಸ್ಪತ್ರೆಗಳ ಜಾಲವನ್ನು ಪರಿಶೀಲಿಸಿ. ಆ ಜಾಲದಲ್ಲಿ ಅಡಿಯಲ್ಲಿರುವ ಹಾಗೂ ನಿಮ್ಮ ವಾಸಸ್ಥಳಕ್ಕೆ ಸಮೀಪದಲ್ಲಿರುವ ಉತ್ತಮ ಆಸ್ಪತ್ರೆಯೊಂದನ್ನು ನೋಡಿಕೊಳ್ಳಿ. ಯೋಜನೆಯ ನಗದುರಹಿತ ಆಸ್ಪತ್ರೆಗಳ ಜಾಲವು ದೊಡ್ಡದಾಗಿದ್ದಷ್ಟೂ ನಿಮಗೆ ಒಳ್ಳೆಯದು.

advertisement

ಅತಿ ಹೆಚ್ಚಿನ ಸಂಖ್ಯೆಯ ಪಾಲಿಸಿಗಳು ಸಹಪಾವತಿ (Co-Payment) ನಿಯಮದೊಂದಿಗೆ ಬರುತ್ತವೆ. ಇದರ ಅಡಿಯಲ್ಲಿ, ಕ್ಲೈಮ್ ಮೊತ್ತದ ಒಂದು ಶೇಕಡಾವಾರು ಮೊತ್ತವನ್ನು ನಿಮ್ಮ ಜೇಬಿನಿಂದಲೇ ತೆರಬೇಕಾಗುತ್ತದೆ. ವಿಮಾ ಕಂಪನಿಯಿಂದ ಪಾವತಿಸಲಾಗುವ ಕ್ಲೈಮ್ ಮೊತ್ತದ ಗರಿಷ್ಠ ಶೇಕಡಾವಾರು ಪ್ರಮಾಣವನ್ನು ಮೊದಲೇ ಪಾಲಿಸಿಯ ದಾಖಲೆಪತ್ರದಲ್ಲಿ ನೀಡಲಾಗಿರುತ್ತದೆ. ನಿಮ್ಮ ಪಾಲಿಸಿಯು ಶೇ 20ರ ಸಹಪಾವತಿ ನಿಯಮವನ್ನು ಹೊಂದಿದೆ ಅಂತ ನಾವೀಗ ಅಂದ್ಕೊಳ್ಳೋಣ. ಹಾಗೆಯೇ, ನಿಮ್ಮ ಆಸ್ಪತ್ರೆಯ ಬಿಲ್ 1 ಲಕ್ಷ ರೂಪಾಯಿ ಬಂದಿದೆ ಅಂತ ಅಂದ್ಕೊಳ್ಳೋಣ. ಈ ಪ್ರಕರಣದಲ್ಲಿ, 20,000ವನ್ನು ನೀವು ನಿಮ್ಮ ಜೇಬಿನಿಂದಲೇ ತೆರಬೇಕಾಗುತ್ತದೆ. ಇದೇ ಕಾರಣಕ್ಕಾಗಿ, ನೀವು ಯಾವಾಗಲೂ ಸಹಪಾವತಿಯ ನಿಯಮ ಇರದಂತಹ ಒಂದು ಯೋಜನೆಯನ್ನು ಕೊಳ್ಳಬೇಕು.

ವಿಮೆ ಯೋಜನೆ ಮಾಡುವಾಗ ಇವುಗಳನ್ನು ಗಮನಿಸಿ:

ಹಿರಿಯ ವಯಸ್ಸಿನ ವ್ಯಕ್ತಿಗಳು ಪದೇ-ಪದೇ ಹೆಚ್ಚಿನ ಮೊತ್ತದ ಕ್ಲೈಮ್ಗಳನ್ನು ಮಾಡೋ ಸಾಧ್ಯತೆ ಇರುವುದರಿಂದ ವಿಮಾ ಕಂಪನಿಗಳು ಹೆಚ್ಚಿನ ವೇಳೆ ಅವರಿಗೆ ರಕ್ಷಣೆ ನೀಡುವುದರಿಂದ ದೂರ ಉಳಿಯುತ್ತವೆ. ವಿಮಾ ರಕ್ಷಣೆ ಒದಗಿಸೋ ಕಂಪನಿಗಳ ಅನೇಕ ನಿಬಂಧನೆಗಳನ್ನು ಹೇರತ್ತವೆ. ಅಂತಹ ಒಂದು ನಿಬಂಧನೆ ಅಂದರೆ ಕಳೆಯಬಲ್ಲ ಮೊತ್ತದ್ದು. ಇದರ ಅರ್ಥ ಏನೆಂದರೆ ಚಿಕಿತ್ಸೆಯ ಒಂದು ನಿಗದಿತ ಮಟ್ಟದವರೆಗಿನ ಚಿಕಿತ್ಸೆಯ ವೆಚ್ಚವನ್ನು ನೀವೇ ಭರಿಸಬೇಕು. ಒಮ್ಮೆ ನಿಮ್ಮ ಚಿಕಿತ್ಸೆಯ ವೆಚ್ಚವು ಈ ನಿಗದಿತ ಮಟ್ಟವನ್ನು ದಾಟಿದ ನಂತರ, ವಿಮಾ ಕಂಪನಿಯು ನಿಮ್ಮ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಆರಂಭಿಸುತ್ತೆ. ಉದಾಹರಣೆಗೆ, ನಿಮ್ಮ ಪಾಲಿಸಿಯಲ್ಲಿ ಕಳೆಯಬಲ್ಲ ಮೊತ್ತವು 10,000 ಆಗಿದ್ದು, ಆಸ್ಪತ್ರೆಯ ಬಿಲ್ಲ 50,000 ಆಗಿದೆ ಅಂತ ಇಟ್ಕೊಳ್ಳೋಣ. ಆಗ, ಆಗ, ವಿಮಾ ಕಂಪನಿಯು ಕೇವಲ 40,000 ಮಾತ್ರ ನೀಡುತ್ತದೆ.ಕಳೆಯಬಲ್ಲ ಮೊತ್ತದಷ್ಟು ಹಣ ವೆಚ್ಚವಾಗುವವರೆಗೂ ಅದು ಹಣ ಪಾವತಿ ಮಾಡೋದಿಲ್ಲ.

ಇನ್ನು ವಿಮಾ ಕಂಪನಿಗಳು ಉಪಮಿತಿಗಳ ಬಗ್ಗೆಯೂ ಸ್ಪಷ್ಟವಾಗಿ ಮಾತನಾಡೋದಿಲ್ಲ. ಈ ನಿಯಮದ ಅಡಿಯಲ್ಲಿ, ವಿಮಾ ಕಂಪನಿಯು ಕೆಲವು ವೈದ್ಯಕೀಯ ಚಿಕಿತ್ಸಾ ಕಾರ್ಯವಿಧಾನಗಳಿಗೆ ಅದು ನೀಡುವ ಗರಿಷ್ಠ ಮೊತ್ತವನ್ನು ನಿರ್ಧರಿಸುತ್ತದೆ. ಈ ಮೊತ್ತವು ಕೊಠಡಿಯ ಬಾಡಿಗೆ, ವೈದ್ಯಕೀಯ ಸಲಹಾ ಶುಲ್ಕಗಳು, ಅಥವಾ ಮೊದಲೇ ನಿರ್ಧರಿಸಲಾದ ಶಸ್ತ್ರಚಿಕಿತ್ಸೆಗಳ ಶುಲ್ಕಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ವಿಮಾ ಕಂಪನಿಯು ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ 30,000ದ ಉಪಮಿತಿಯನ್ನು ನಿಗದಿಪಡಿಸಿದ್ದು ಆಸ್ಪತ್ರೆಯ ಬಿಲ್‌ನ ಮೊತ್ತ 50,000 ಆಗಿದೆ ಅಂತ ಅಂದ್ಕೊಳ್ಳೋಣ. ಆಗ, ನೀವು 20,000ವನ್ನು ನಿಮ್ಮ ಜೇಬಿನಿಂದಲೇ ಪಾವತಿ ಮಾಡಬೇಕಾಗುತ್ತದೆ.

ಯೋಚಿಸಿ ವಿಮೆ ಯೋಜನೆ ಮಾಡಿಸಿ:

ವೃದ್ಧಾಪ್ಯದಲ್ಲಿ, ಕಾಯಿಲೆಗಳು ಹೆಚ್ಚು ಮಾರಣಾಂತಿಕವಾಗಬಹುದು ಹಾಗೂ ವ್ಯಕ್ತಿಯನ್ನು ಪದೇ-ಪದೇ ಆಸ್ಪತ್ರೆ ಸೇರುವಂತೆ ಮಾಡಬಹುದು. ವಿಮಾ ಕಂಪನಿಗಳು ತಾವು ಭರಿಸಬೇಕಾಗುವ ಕ್ಲೈಮ್‌ಗಳ ಹೊಣೆಗಾರಿಕೆಯನ್ನು ಕಡಿಮೆ ಮಾಡಿಕೊಳ್ಳಲು ಅನೇಕ ನಿಬಂಧನೆಗಳನ್ನು ಹಾಕುತ್ತವೆ. ಆದ್ದರಿಂದ, ಯಾವಾಗಲೂ ಸಹಪಾವತಿ, ಕಳೆಯಬಲ್ಲ ಮೊತ್ತ, ಮತ್ತು ಉಪಮಿತಿಗಳಂತಹ ಕನಿಷ್ಠ ನಿಯಮಗಳನ್ನು ಹೊಂದಿರುವ ಯೋಜನೆಯನ್ನು ಆರಿಸಿಕೊಳ್ಳಿ. ನೀವೇನಾದರೂ ಹಿರಿಯ ವಯಸ್ಸಿನ ಪೋಷಕರನ್ನು ಹೊಂದಿದ್ದರೆ, ಸಾಕಾಗುವಷ್ಟು ಹಣಕಾಸಿನ ರಕ್ಷಣೆ ನೀಡುವಂತಹ ಪಾಲಿಯೊಂದನ್ನು ಕೊಂಡುಕೊಳ್ಳಿ. ನೀವು ಕೊಳ್ಳಲಿರುವ ಪಾಲಿಸಿಯ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಮೊದಲು, ಅದರ ನಿಯಮ-ನಿಬಂಧನೆಗಳನ್ನು ಕೂಲಂಕಷವಾಗಿ ಓದಿಕೊಳ್ಳಿ ಮತ್ತು ಇತರ ಅನೇಕ ಯೋಜನೆಗಳೊಂದಿಗೆ ಹೋಲಿಸಿ ನೋಡಿ ಎಂದು ತೆರಿಗೆ ಮತ್ತು ಹೂಡಿಕೆಗಳ ಎಕ್ಸ್‌ಪರ್ಟ್‌ ಹೇಳುತ್ತಾರೆ.

advertisement

Leave A Reply

Your email address will not be published.