Karnataka Times
Trending Stories, Viral News, Gossips & Everything in Kannada

Aadhaar-PAN Card: ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಆಗದೆ ಇದ್ದರೆ ಎಷ್ಟು ದಂಡ ಪಾವತಿಸಬೇಕು?

advertisement

ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟ ಎಲ್ಲಾ ವಂಚನೆಗಳನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ (Aadhaar-PAN Card) ಲಿಂಕ್ ಆಗಿರುವುದು ಕಡ್ಡಾಯ ಎಂದು ಈ ಹಿಂದೆಯೇ ಘೋಷಿಸಿತ್ತು. ಆದರೆ ಇಲ್ಲಿಯವರೆಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳದೆ ಇರುವವರು ಇದ್ದಾರೆ ಹಾಗೂ ಅಂತವರ ಪಾನ್ ಕಾರ್ಡ್ ನಿಷ್ಕ್ರಿಯಗೊಳಿಸಲಾಗಿದೆ.

ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ (Aadhaar-PAN Card) ಲಿಂಕ್ ಮಾಡಿಕೊಳ್ಳಲು ಸರ್ಕಾರ ಸಾಕಷ್ಟು ಬಾರಿ ಗಡುವು ವಿಸ್ತರಣೆ ಮಾಡಿದೆ. ಈಗ ಈ ಎಲ್ಲಾ ಗಡುವು ಮುಗಿದು, ಆಧಾರ್ ಕಾರ್ಡ್ ಹಾಗೂ PAN Card ಲಿಂಕ್ ಮಾಡಿಕೊಳ್ಳದೆ ಇರುವವರ ಪ್ಯಾನ್ ಕಾರ್ಡ್ ರದ್ದುಪಡಿಸಲಾಗುತ್ತಿದೆ. ಒಂದು ವೇಳೆ ನೀವಿನ್ನು ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳದೆ ಇದ್ರೆ, ಹೇಗೆ ಮಾಡಿಕೊಳ್ಳಬಹುದು ಎನ್ನುವುದನ್ನು ತಿಳಿಯಿರಿ.

Aadhaar Card ಮತ್ತು PAN Card ಲಿಂಕ್ ಮಾಡಬಹುದೇ?

 

advertisement

 

ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ (Aadhaar-PAN Card Link)  ಮಾಡಿಕೊಳ್ಳಲು ಸರ್ಕಾರ ಸಾಕಷ್ಟು ಬಾರಿ ಅವಕಾಶ ಮಾಡಿ ಕೊಟ್ಟಿದ್ದು, ನಂತರ ಕೊನೆಯ ಗಡುವು, ಜೂನ್ 30, 2023 ಎಂದು ತಿಳಿಸಲಾಗಿತ್ತು. ಆರಂಭದಲ್ಲಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಯಾವುದೇ ಶುಲ್ಕ ಪಾವತಿಸಬೇಕಾಗಿರಲಿಲ್ಲ. ಉಚಿತವಾಗಿ ಲಿಂಕ್ ಮಾಡಿಕೊಳ್ಳಬಹುದಿತ್ತು. ಅಂತರದ ದಿನಗಳಲ್ಲಿ ಶುಲ್ಕ ಪಾವತಿ ಮಾಡಿ ಲಿಂಕ್ ಮಾಡಿಕೊಳ್ಳಲು ಅವಕಾಶವಿತ್ತು. ಈಗ ಈ ಎಲ್ಲಾ ಅವಕಾಶಗಳನ್ನು ಕೂಡ ಸರ್ಕಾರ ನಿಲ್ಲಿಸಿದೆ.

ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳದೆ ಇದ್ದರೆ ಪ್ಯಾನ್ ಕಾರ್ಡ್ (PAN Card) ನಿಷ್ಕ್ರಿಯಗೊಳಿಸಲಾಗುವುದು ಎಂದು ಸರ್ಕಾರ ಈ ಹಿಂದೆಯೇ ತಿಳಿಸಿದೆ. ಒಂದು ವೇಳೆ ಈ ರೀತಿ ನಿಷ್ಕ್ರಿಯಗೊಂಡರೆ ಯಾವುದೇ ಹಣಕಾಸಿನ ವ್ಯವಹಾರ ಮಾಡಲು ಸಾಧ್ಯವಿಲ್ಲ ಜೊತೆಗೆ ಆದಾಯ ತೆರಿಗೆ (Income Tax) ಪಾವತಿ ಮಾಡುವಲ್ಲಿ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇನ್ನು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಮತ್ತೆ ಅವಕಾಶ ಇದೆಯೇ ಎನ್ನುವ ಪ್ರಶ್ನೆ ನಿಮ್ಮದಾಗಿದ್ದರೆ, ಹೌದು ಈಗಲೂ ಲಿಂಕ್ ಮಾಡಿಕೊಳ್ಳಬಹುದು.

ಆದಾಯ ತೆರಿಗೆಯ ವೆಬ್ಸೈಟ್ಗೆ ಹೋಗಿ ಸಾವಿರ ರೂಪಾಯಿಗಳ ದಂಡ ಪಾವತಿಸಿ ಲಿಂಕ್ ಮಾಡಿಕೊಳ್ಳಬಹುದು. ಹಾಗೂ ನಿಷ್ಕ್ರಿಯಗೊಂಡಿರುವ ಪ್ಯಾನ್ ಕಾರ್ಡ್ ಅನ್ನು ಮತ್ತೆ ಆಕ್ಟಿವ್ ಗೊಳಿಸಬಹುದು. ಸರಿಯಾದ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ದಂಡ ಪಾವತಿಸಿ ನಿಮ್ಮ ನಿಷ್ಕ್ರಿಯಗೊಂಡಿರುವ ಪ್ಯಾನ್ ಕಾರ್ಡ್ ಆಕ್ಟಿವ್ ಮಾಡಿಕೊಳ್ಳಿ.

advertisement

Leave A Reply

Your email address will not be published.