Karnataka Times
Trending Stories, Viral News, Gossips & Everything in Kannada

Income Tax: 8 ಲಕ್ಷ ವಾರ್ಷಿಕ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇಲ್ಲ, ಹೊಸ ನಿಯಮ!

advertisement

ದೇಶದಲ್ಲಿ ಆದಾಯ ತೆರಿಗೆ (Income Tax) ಪಾವತಿ ಮಾಡಲು ಎರಡು ವಿಧಾನಗಳು ಇವೆ. ಈ ಹಿಂದೆ ಒಂದು ವಿಧಾನದಲ್ಲಿ ಮಾತ್ರ ತೆರಿಗೆ ಪಾವತಿ ಮಾಡಬಹುದಿತ್ತು. ಆದರೆ ಕಳೆದ ಕೇಂದ್ರ ಬಜೆಟ್ ನಲ್ಲಿ ಹೊಸ ಆದಾಯ ತೆರಿಗೆ ಪದ್ಧತಿಯನ್ನು ಸೇರಿಸಿರುವ ಹಿನ್ನೆಲೆಯಲ್ಲಿ ಎರಡು ರೀತಿಯ ತೆರಿಗೆ ಪದ್ಧತಿಯಲ್ಲಿ ಒಂದನ್ನು ಆಯ್ದುಕೊಂಡು ತೆರಿಗೆ ಪಾವತಿ ಮಾಡಬಹುದು.

ತೆರಿಗೆ ಪಾವತಿಯಲ್ಲಿ ಎರಡು ವಿಧಾನ:

 

 

ನೀವು ಹಳೆಯ ತೆರಿಗೆ (Old Tax) ಪಾವತಿಯನ್ನು ಆಯ್ದುಕೊಂಡರೆ ಕೆಲವು ತೆರಿಗೆ ವಿನಾಯಿತಿ ಹಾಗೂ ಕಡಿತದ ಪ್ರಯೋಜನ ಪಡೆದುಕೊಳ್ಳಬಹುದು. ಅದೇ ರೀತಿ ಹೊಸ ತೆರಿಗೆ ಪದ್ಧತಿಯನ್ನು ಆಯ್ದುಕೊಂಡರೆ ಇದರಲ್ಲಿಯೂ ಹೆಚ್ಚಿನ ಪ್ರಯೋಜನವನ್ನು ನೀಡಲಾಗಿದ್ದು ಮಧ್ಯಮ ವರ್ಗದ ಕುಟುಂಬದವರು ತೆರಿಗೆ ಪಾವತಿಸುವಾಗ ಹೆಚ್ಚು ವಿನಾಯಿತಿ ಪಡೆದುಕೊಳ್ಳುತ್ತಾರೆ.

ಹಳೆಯ ತೆರಿಗೆ ಪದ್ಧತಿಯಲ್ಲಿ ವಾರ್ಷಿಕ ಆದಾಯದ ಮಿತಿ 5 ಲಕ್ಷ ರೂಪಾಯಿಗಳು ಆಗಿದ್ದವು 5 ಲಕ್ಷ ಗಳಿಗಿಂತ ಹೆಚ್ಚಿನ ವಾರ್ಷಿಕ ಆದಾಯ ಪಡೆಯುವವರು ತೆರಿಗೆ ಪಾವತಿ ಮಾಡಬೇಕು. ಆದರೆ ಹೊಸ ತೆರಿಗೆ ಪದ್ಧತಿಯಲ್ಲಿ ಇದನ್ನ ಏಳು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಜೊತೆಗೆ ಉದ್ಯೋಗಸ್ಥರು ಅಥವಾ ತಿಂಗಳ ಸಂಬಳ ಪಡೆಯುವವರೆಗೂ ಕೂಡ ಕೆಲವು ವಿನಾಯಿತಿಗಳನ್ನು ಹೊಸ ತೆರಿಗೆ ಪದ್ಧತಿಯಲ್ಲಿ ಘೋಷಿಸಲಾಗಿದೆ.

advertisement

ಹೊಸ ತೆರಿಗೆ ಪದ್ಧತಿಯಲ್ಲಿ ಮುಖ್ಯವಾಗಿ ಸ್ಟ್ಯಾಂಡರ್ಡ್ ಡಿಡಕ್ಷನ್ (Standard Deduction) ಹಾಗೂ ಉದ್ಯೋಗಿಗಳಿಗೆ NPS ಕಡಿತ ನೀಡಲಾಗುವುದು. ಈ ಎರಡು ತೆರಿಗೆ ವಿನಾಯಿತಿಯಿಂದಾಗಿ ಹೊಸ ತೆರಿಗೆ ಪದ್ಧತಿಯಲ್ಲಿ ನೌಕರಸ್ಥರು 8 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ಒಂದೇ ಒಂದು ರೂಪಾಯಿ ತೆರಿಗೆ (Income Tax) ಪಾವತಿ ಮಾಡುವ ಅಗತ್ಯ ಇರುವುದಿಲ್ಲ.

Standard Deduction ಅಂದ್ರೆ ಏನು?

ಸ್ಟ್ಯಾಂಡರ್ಡ್ ಡಿಡಕ್ಷನ್ ಅಥವಾ ಪ್ರಮಾಣಿತ ಕಡಿತ ಇದರ ಪ್ರಯೋಜನವನ್ನು ಇಂದು ಉದ್ಯೋಗ ಮಾಡುವ ಅಥವಾ ನೌಕರಿಯಲ್ಲಿ ಇರುವವರು ಪಡೆದುಕೊಳ್ಳಬಹುದು. ಉದ್ಯೋಗಸ್ಥರಿಗೆ 50,000 ಗಳ ವರೆಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಸಿಗುತ್ತದೆ. ಹಾಗೂ ಕುಟುಂಬ ಪಿಂಚಣಿ (Pension) ದಾರರಿಗೆ 15,000 ರೂಪಾಯಿಗಳವರೆಗೆ ಪ್ರಮಾಣಿತ ಕಡಿತ ಪ್ರಯೋಜನ ಸಿಗುತ್ತದೆ. ವ್ಯಕ್ತಿಯ ವಾರ್ಷಿಕ ಆದಾಯ 8 ಲಕ್ಷ ರೂಪಾಯಿ ಅಂದ್ರೆ ಪ್ರಮಾಣಿತ ಕಡಿತ 50,000 ಅಂದರೆ ಆತನ ಆದಾಯ 7.5 ಲಕ್ಷ ರೂಪಾಯಿಗಳಾಗುತ್ತವೆ. ಯಾವುದೇ ದಾಖಲೆಯನ್ನು ನೀಡದೆ ನೀವು ಈ ಡಿಡಕ್ಷನ್ ಪ್ರಯೋಜನ ಪಡೆದುಕೊಳ್ಳಬಹುದು.

NPS Deposit ಮೊತ್ತದ ಮೇಲೆ ಕಡಿತ:

ಹೊಸ ತೆರಿಗೆ ಪದ್ಧತಿಯಲ್ಲಿ ಉದ್ಯೋಗಸ್ಥರು ಎನ್ ಪಿ ಎಸ್ ಠೇವಣಿ ಮೇಲಿನ ಮೊತ್ತದ ಮೇಲೆ ಕೂಡ ಆದಾಯ ತೆರಿಗೆ ಕಡಿತ ಪ್ರಯೋಜನ ಪಡೆದುಕೊಳ್ಳುತ್ತಾರೆ. ಉದ್ಯೋಗ ನೀಡುವ ಕಂಪನಿ ಅಥವಾ ಉದ್ಯೋಗದಾತ ತನ್ನಲ್ಲಿ ಕೆಲಸ ಮಾಡುವ ನೌಕರರಿಗೆ ರೆಡಿ ಶ್ರೇಣಿ 1 ಎನ್‌ಪಿಎಸ್ ಖಾತೆಯಲ್ಲಿ ಠೇವಣಿ ಮಾಡಬೇಕು. ಎರಡನೆಯದಾಗಿ ಖಾಸಗಿ ವಲಯದ ಉದ್ಯೋಗಿಗಳ ಸಂಬಳದ 10% ಅನ್ನು ಮೀರಬಾರದು. ಎರಡು ಶರತ್ತುಗಳ ಆಧಾರದ ಮೇಲೆ ಎನ್ ಪಿ ಎಸ್ ಠೇವಣಿ (NPS Deposit) ಯ ಮೇಲೆ ಕೂಡ ಆದಾಯ ತೆರಿಗೆ ಕಡಿತ ಪ್ರಯೋಜನ ಪಡೆದುಕೊಳ್ಳಬಹುದು.

advertisement

Leave A Reply

Your email address will not be published.