Karnataka Times
Trending Stories, Viral News, Gossips & Everything in Kannada

Traffic Rules: HSRP ಗಿಂತ ಅತ್ಯಮೂಲ್ಯವಾದ ಈ ದಾಖಲೆ ವಾಹನದ ಜೊತೆ ಇರಲೇಬೇಕು! ಇಲ್ಲದಿದ್ದರೆ ವಾಹನ ಸೀಜ್

advertisement

ಇಂದು ವಾಹನ ಖರೀದಿ ಯ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ. ಅದೇ ರೀತಿ ವಾಹನ ಸವಾರರು ಕೂಡ ರಸ್ತೆಯಲ್ಲಿ ಬೇಕಾಬಿಟ್ಟಿ ಯಾಗಿ ವಾಹನ ಚಲಾವಣೆ ಮಾಡಿ ರಸ್ತೆಯಲ್ಲಿ ಪ್ರಾಣ ಕಳೆದುಕೊಂಡಂತಹ ಘಟನೆಗಳು ಕೂಡ ಇಂದು ನಡೆದಿದೆ. ಇಂದು ಟ್ರಾಫಿಕ್ ಕಾನೂನುಗಳು (Traffic Rules) ಮತ್ತು ನಿಬಂಧನೆಗಳನ್ನು ತೀವ್ರ ಗೊಳಿಸಿದ್ದು ವಾಹನ ಸವಾರರ ಮೇಲೆ ಟ್ರಾಫಿಕ್ ಪೊಲೀಸರು ಕಣ್ಣಿಟ್ಟಿದ್ದಾರೆ.

ದಂಡ ವಿಧಿಸಲಿದೆ:

ರಸ್ತೆಯಲ್ಲಿ ನಡೆಯುವ ಅಪಘಾತಗಳನ್ನು ತಪ್ಪಿಸಲು, ಪ್ರಯಾಣಿಕರ ಸುರಕ್ಷತೆ ಕಾಪಾಡಲು ಟ್ರಾಫಿಕ್ ನಿಯಮ (Traffic Rules) ಜಾರಿ ಮಾಡಿದ್ದು ಪಾಲಿಕೆ ಮಾಡದೇ ಇದ್ದಲ್ಲಿ ದಂಡ ಜಾರಿ ಮಾಡಲಿದೆ. ಸಿಗ್ನಲ್ ಜಂಪ್, ಅತೀ ವೇಗ, ವ್ಹೀಲಿಂಗ್ ಸೇರಿದಂತೆ ಒಂದೊಂದು ನಿಯಮ ಉಲ್ಲಂಘನೆಗೂ ಒಂದೊಂದು ರೀತಿಯ ದಂಡವನ್ನು‌ ವಿಧಿಸಲಾಗುತ್ತದೆ. ಪದೇಪದೇ ಟ್ರಾಫಿಕ್ ರೂಲ್ಸ್ (Traffic Rules) ಬ್ರೇಕ್ ಮಾಡುತ್ತಿರು ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುವುದಲ್ಲದೆ ದಂಡ ಬಾಕಿ ಇದ್ದವರ ಬಳಿಯು ಹಣವನ್ನು ವಸೂಲಿ ಮಾಡಲು ಟ್ರಾಫಿಕ್ ಪೋಲಿಸರು ನೋಟಿಸ್ ನೀಡ್ತಾ ಇದ್ದಾರೆ.

HSRP ಕಡ್ಡಾಯ:

 

Image Source: YT-MOTORBUDDY

 

advertisement

2019ರ ಬಳಿಕ ರಸ್ತೆಗೆ ಇಳಿಯುವ ಹೊಸ ವಾಹನಗಳಿಗೆ ಹೆಚ್​ಎಸ್​ಆರ್​ಪಿ ನಂಬರ್​ ಪ್ಲೇಟ್​ (HSRP Number Plate) ಅಳವಡಿಸುವುದು ಕಡ್ಡಾಯವಾಗಿದೆ ಎಂದು ಸಾರಿಗೆ ಇಲಾಖೆ ಪದೇ ಪದೇ ವಾಹನ ಸವಾರರಿಗೆ ಸೂಚನೆ ನೀಡುತ್ತಲೇ ಬಂದಿದ್ದು ಈಗಾಗಲೇ ಹಲವು ಭಾರಿ ವಿಸ್ತರಣೆ ಮಾಡಿದ್ದು ಇದೀಗ ಮೇ 31 ರ ವರೆಗೆ ಅವಕಾಶ ನೀಡಿದೆ. ಒಂದು ವೇಳೆ ರಿಜಿಸ್ಟ್ರಾರ್ ಮಾಡದೇ ಇದ್ದಲ್ಲಿ ದಂಡ ವಿಧಿಸಲಾಗುತ್ತದೆ ಎನ್ನುವ ಸೂಚನೆ ‌ನೀಡಲಾಗಿದೆ‌

ಇದಕ್ಕೂ ದಂಡ:

 

Image Source: Autocar India

 

ಅಷ್ಟೆ ಅಲ್ಲದೆ ಮಾಲಿನ್ಯ ನಿಯಂತ್ರಣ ಮಾಣಪತ್ರವಿಲ್ಲದ ವಾಹನಗಳಿಗೆ ಪೆಟ್ರೋಲ್ ಪಂಪ್‌ (Petrol Pump) ಗಳಲ್ಲಿ ಸ್ವಯಂಚಾಲಿತವಾಗಿ ದಂಡ ವಿಧಿಸುವ ಹೊಸ ವ್ಯವಸ್ಥೆಯನ್ನು ಕೂಡ ಇನ್ಮುಂದೆ ಜಾರಿಗೆ ತರಲಾಗುತ್ತದೆ. ಒಂದು ವೇಳೆ ಮಾಲಿನ್ಯ ಪ್ರಮಾಣಪತ್ರವಿಲ್ಲದೆ (Pollution Certificate) ವಾಹನ ಚಲಾಯಿಸಿದರೆ 10,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ನಕಲಿ ಮಾಲಿನ್ಯ ಪ್ರಮಾಣ ಪತ್ರ (Fake Pollution Certificate) ಬಳಕೆ ಮಾಡಿಕೊಂಡಲ್ಲಿ 10,000 ರೂ. ದಂಡ ಬೀಳುತ್ತದೆ.

ನವೀಕರಣ ಮಾಡಿ:

ಪ್ರಮಾಣಪತ್ರದ ಅವಧಿ ಮುಗಿದಿದ್ದಲಿ ಸಿಸ್ಟಮ್ ಸ್ವಯಂಚಾಲಿತವಾಗಿ ಚಾಲಕನ ಫೋನ್‌ ನಂಬರ್ ಗೆ ದಂಡದ ಬಗ್ಗೆ ಸಂದೇಶ ನೀಡಲಿದೆ. ಹಾಗಾಗಿ ಪ್ರಮಾಣಪತ್ರಗಳನ್ನು ನವೀಕರಿಸಲು ಚಾಲಕರಿಗೆ ಸೂಚನೆ ಕೂಡ ನೀಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ಪ್ರಮಾಣಪತ್ರವನ್ನು ನವೀಕರಿಸದಿದ್ದರೆ 10,000 ರೂ. ದಂಡವನ್ನು ವಿಧಿಸಲಿದೆ.ಹಾಗಾಗಿ ವಾಹನ‌ ಸವಾರರು ಈ ಬಗ್ಗೆ ‌ಮೊದಲು ತಿಳಿದು ಕೊಳ್ಳುವುದು ಉತ್ತಮ.

advertisement

Leave A Reply

Your email address will not be published.