Karnataka Times
Trending Stories, Viral News, Gossips & Everything in Kannada

Petrol Pump: ಪೆಟ್ರೋಲ್ ಪಂಪ್ ಆರಂಭಿಸುವುದು ಹೇಗೆ? ಲೈಸೆನ್ಸ್ ಎಲ್ಲಿ ಪಡೆಯಬೇಕು? 1 ಲೀಟರ್ ಪೆಟ್ರೋಲ್ ಮಾರಾಟಕ್ಕೆ ಎಷ್ಟು ಲಾಭ ಸಿಗುತ್ತೆ?

advertisement

ನೀವು ಸ್ವಂತ ಉದ್ಯಮ ಆರಂಭಿಸಬೇಕು ಅಂದುಕೊಂಡರೆ ಸಾಕಷ್ಟು ದಾರಿಗಳು ಇವೆ. ಅದರಲ್ಲೂ ಸರಿಯಾದ ರೀತಿಯಲ್ಲಿ ಉದ್ಯಮ ಮಾಡಿದರೆ ಅದರಿಂದ ಯಶಸ್ಸು ಕೂಡ ಸುಲಭವಾಗಿ ಸಿಗುತ್ತದೆ ಉದಾಹರಣೆಗೆ ನೀವು ಒಂದು ಪೆಟ್ರೋಲ್ ಪಂಪ್ (Petrol Pump) ಆರಂಭಿಸಬೇಕು ಎಂದುಕೊಂಡಿದ್ದರೆ, ಅದರಿಂದಲೂ ಕೂಡ ಉತ್ತಮ ಆದಾಯ ಗಳಿಸಬಹುದು ಎನ್ನುವುದು ನಿಮಗೆ ಗೊತ್ತಾ ?ಹಾಗಾದ್ರೆ ಪೆಟ್ರೋಲ್ ಪಂಪ್ ತೆರೆಯಲು ಯಾವೆಲ್ಲಾ ಪ್ರಕ್ರಿಯೆ ಇದೆ ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ ಮುಂದೆ ಓದಿ.

ದೇಶದ ಅತಿ ದೊಡ್ಡ ತೈಲ ಕಂಪನಿ ಇಂಡಿಯನ್ ಆಯಿಲ್ (IOCL) ಪೆಟ್ರೋಲ್ ಪಂಪ್ (Petrol Pump) ತೆರೆಯಲು ಡೀಲರ್ಶಿಪ್ ಅನ್ನು ನಿಮಗೆ ನೀಡುತ್ತದೆ. ಈ ಮೂಲಕ ನೀವು ಪೆಟ್ರೋಲ್ ಪಂಪ್ ಆರಂಭಿಸಬಹುದು. ದೇಶದಲ್ಲಿ ಪೆಟ್ರೋಲ್ ಬಳಕೆ ಅಥವಾ ಡೀಸೆಲ್ ಬಳಕೆ ಸದ್ಯಕ್ಕಂತೂ ಮುಗಿಯುವಂತದ್ದಲ್ಲ ಹಾಗಾಗಿ ಈ ವ್ಯವಹಾರವನ್ನ ನೀವು ಆರಂಭಿಸಿದರೆ ಅದರಲ್ಲೂ ಸ್ವಲ್ಪ ಸ್ಮಾರ್ಟ್ ಬಳಕೆ ಗೊತ್ತಿದ್ದರೆ ಖಂಡಿತವಾಗಿಯೂ ನೀವು ಹೆಚ್ಚಿನ ಲಾಭ ಪಡೆಯಬಹುದು.

ಪೆಟ್ರೋಲ್ ಪಂಪ್ ಆರಂಭಿಸಲು ಎಷ್ಟು ಹಣ ಬೇಕು:

 

 

advertisement

ಗ್ರಾಮೀಣ ಭಾಗದಲ್ಲಿ ನೀವು ಪೆಟ್ರೋಲ್ ಪಂಪ್ (Petrol Pump) ಆರಂಭಿಸಲು ಮುಂದಾದರೆ 12ರಿಂದ 15 ಲಕ್ಷ ರೂಪಾಯಿಗಳು ಸಾಕು. ಅದೇ ನೀವು ಪೆಟ್ರೋಲ್ ಪಂಪ ಅನ್ನು ನಗರ ಪ್ರದೇಶದಲ್ಲಿ ಆರಂಭಿಸುವುದಾದರೆ 20ರಿಂದ 25 ಲಕ್ಷ ಇನ್ವೆಸ್ಟ್ಮೆಂಟ್ ಬೇಕಾಗುತ್ತದೆ.

ಇಂಡಿಯನ್ ಆಯಿಲ್ ಡೀಲರ್ಶಿಪ್ ಪಡೆದುಕೊಳ್ಳುವುದಕ್ಕೆ ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ನಂತರ ನೀವು ಕಂಪನಿಯ ವಿಭಾಗೀಯ ಕಚೇರಿಯ ಮಾಹಿತಿಯನ್ನು ಪಡೆದುಕೊಂಡು ನೇರವಾಗಿ ಸಂಪರ್ಕಿಸಬಹುದು. ಇನ್ನು ಪೆಟ್ರೋಲ್ ಪಂಪ್ ಯಾರು ತೆರೆಯಬಹುದು ಎಂದು ನೋಡುವುದಾದರೆ 21ರಿಂದ 60 ವರ್ಷ ವಯಸ್ಸಿನವರು ಪೆಟ್ರೋಲ್ ಪಂಪ್ ಆರಂಭಿಸಬಹುದು ಕನಿಷ್ಠ 10ನೇ ತರಗತಿ ವಿದ್ಯಾಭ್ಯಾಸ ಪಡೆದುಕೊಂಡಿರಬೇಕು ನೀವು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ನಿಮ್ಮ ಬಳಿ ಅಗತ್ಯ ಇರುವ ಎಲ್ಲಾ ದಾಖಲೆಗಳು ಸ್ಥಳಾವಕಾಶ ಇದ್ದರೆ ಇಂಡಿಯನ್ ಆಯಿಲ್ ಕಂಪನಿಯ ಡೀಲರ್ಶಿಪ್ ಅನ್ನು ಸುಲಭವಾಗಿ ಪಡೆಯಬಹುದು. ಡೀಲರ್ಶಿಪ್ ನಲ್ಲಿ ಎಷ್ಟು ಲಾಭ ಮಾಡಬಹುದು? ಪೆಟ್ರೋಲ್ ಮಾರಾಟಕ್ಕೆ ನಮ್ಮ ದೇಶದಲ್ಲಿ ಪ್ರತಿ ಲೀಟರ್ಗೆ ಎರಡರಿಂದ ಐದು ರೂಪಾಯಿಗಳ ಕಮಿಷನ್ ಪಡೆಯಬಹುದು. ಹಾಗಾಗಿ ಪೆಟ್ರೋಲ್ ಪಂಪ್ ಆರಂಭಿಸಿದರೆ ನೀವು ಸಾಕಷ್ಟು ಉತ್ತಮ ಆದಾಯವನ್ನು ಗಳಿಸಿಕೊಳ್ಳುತ್ತೀರಿ ಹೆಚ್ಚಿನ ಮಾಹಿತಿಗಾಗಿ

ಈ ಲಿಂಕ್ ಕ್ಲಿಕ್ ಮಾಡಿ:👉  https://iocl.com/download/Brochure-24112018-Eng.pdf

advertisement

Leave A Reply

Your email address will not be published.