Karnataka Times
Trending Stories, Viral News, Gossips & Everything in Kannada

Flex Fuel: ಇನ್ನು ಮುಂದೆ ಮಹಿಂದ್ರಾದ ಈ ಕಾರು ಓಡಿಸಲು ಪೆಟ್ರೋಲ್ ಇಂಧನವೇ ಬೇಡ, ಕಡಿಮೆ ಖರ್ಚಿನಲ್ಲಿ ಚಲಿಸುತ್ತೆ ಈ ಕಾರು!

advertisement

ಇತ್ತೀಚಿನ ದಿನಗಳಲ್ಲಿ ಹಣದುಬ್ಬರದ ಸಮಸ್ಯೆಯಿಂದ ಜನರು ಪರದಾಡುವಂತೆ ಆಗಿದೆ. ಪ್ರತಿಯೊಂದು ವಸ್ತುವಿನ ಬೆಲೆ ಕೂಡ ಜಾಸ್ತಿಯಾಗಿದೆ. ಅದರಂತೆ ನಶಿಸಿ ಹೋಗುತ್ತಿರುವ ಪೆಟ್ರೋಲ್, ಡೀಸೆಲ್ ಮೊದಲಾದ ಇಂಧನಗಳನ್ನು ದುಬಾರಿ ಬೆಲೆ ಕೊಟ್ಟರೂ ಕೂಡ ಖರೀದಿ ಮಾಡುವುದು ಕಷ್ಟವಾಗಿದೆ. ಹೀಗಾಗಿ ಪರ್ಯಾಯ ಇಂಧನ ಬಳಕೆಗೆ ಮೋಟಾರ್ ಕಂಪನಿಗಳು ಹೆಚ್ಚು ಒತ್ತು ಕೊಟ್ಟಿವೆ. ಇದರ ಜೊತೆಗೆ ಸರ್ಕಾರದ ಬೆಂಬಲವು ಇರುವ ಹಿನ್ನೆಲೆಯಲ್ಲಿ ಸದ್ಯ ಫ್ಲೆಕ್ಸ್ ಇಂಧನ ಬಳಕೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಏನಿದು ಪ್ಲೆಕ್ಸ್ ಇಂಧನ (Flex Fuel)?

ಪೆಟ್ರೋಲ್, ಡೀಸೆಲ್ ಅಥವಾ ಎಲೆಕ್ಟ್ರಿಕ್ ಕಾರುಗಳಿಗಿಂತಲೂ ಉತ್ತಮವಾಗಿರುವ ಹಾಗೂ ಕಡಿಮೆ ಬೆಲೆಯಲ್ಲಿ ಫ್ಲೆಕ್ಸ್ ಇಂಧನದ ಮೂಲಕ ವಾಹನ ಚಲಾಯಿಸಬಹುದು. ಫ್ಲೆಕ್ಸ ಇಂಧನ, 80% ನಷ್ಟು ಪೆಟ್ರೋಲ್ ಹಾಗೂ 20% ನಷ್ಟು ಎಥನಾಲ್ ಮಿಶ್ರಣವನ್ನು ಹೊಂದಿರುತ್ತದೆ. ಈ ಫ್ಲೆಕ್ಸ್ ಇಂಧನ (Flex Fuel) ವನ್ನು ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ.

Mahindra XUV300 ನಲ್ಲಿ ಬಳಕೆ:

 

 

advertisement

ದೆಹಲಿ ಮೈದಾನದಲ್ಲಿ ನಡೆದ ಭಾರತ್ ಮೊಬಿಲಿಟಿ ಎಕ್ಸ್ ಪೋ 2024 ಇದರಲ್ಲಿ ಮಹಿಂದ್ರ ತನ್ನ Mahindra XUV300 ಎಸ್‌ಯುವಿ ಕಾರಿನಲ್ಲಿ ಶೇಕಡ 85ರಷ್ಟು ಎಥನಾಲ್ ಮಿಶ್ರಿತ ಇಂಧನವನ್ನು ಮೊದಲ ಬಾರಿಗೆ ಬಳಸಿ ಪ್ರದರ್ಶನ ನೀಡಿದೆ. ಮಹಿಂದ್ರ ಎಕ್ಸ್ ಯುವಿ 300 w6 ರೂಪಾಂತರದಲ್ಲಿ ಈ ಫ್ಲೆಕ್ಸ್ ಇಂಧನ (Flex Fuel) ಬಳಕೆಯನ್ನು ಕಾಣಬಹುದು.

ಫ್ಲೆಕ್ಸ್ ಇಂಧನ (Flex Fuel)ದ ವೈಶಿಷ್ಟ್ಯತೆ:

ಒಂದು ಲೀಟರ್ ಪೆಟ್ರೋಲ್ ಬೆಲೆ 96 ರೂಪಾಯಿಗಳಾಗಿದ್ದರೆ, ಎಥನಾಲ್ ಮಿಶ್ರಿತ ಇಂಧನ ಬಳಕೆ ಮಾಡುವುದರಿಂದ, ಸುಮಾರು 87 ರೂಪಾಯಿಗಳಿಗೆ ಪ್ರತಿ ಲೀಟರ್ ಇಂಧನ ಪಡೆಯಬಹುದು.

ಫ್ಲೆಕ್ಸ್ ಇಂಧನ ಬಳಕೆ ಮಾಡಿರುವ ಎಂಜಿನ್ ಅತ್ಯಂತ ಶಕ್ತಿಶಾಲಿಯಾಗಿ ಕೆಲಸ ನಿರ್ವಹಿಸುತ್ತದೆ. ಮಹಿಂದ್ರದಲ್ಲಿ ಫ್ಲೆಕ್ಸ ಇಂಧನ ಚಾಲಿತ ಎಕ್ಸ್ಯುವಿ 300, 1.2 ಲೀಟರ್, ಇನ್ ಲೈನ್ ಮೂರೂ ಸಿಲೆಂಡರ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೊತೆಗೆ ಅಳವಡಿಸಲಾಗಿದೆ. ಮಾನುವಲ್ ಗೇರ್ ಬಾಕ್ಸ್ ಜೋಡಿಸಲಾಗಿದ್ದು, ಈ ಎಂಜಿನ್ 109 ಬಿ ಎಚ್ ಪಿ ಪವರ್ ಹಾಗೂ 200 ಎನ್ ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮುಂಬರುವ ದಿನಗಳಲ್ಲಿ ಪಳೆಯುಳಿಕೆ ಇಂಧನದ ಬದಲಾಗಿ ಫ್ಲೆಕ್ಸ್ ಇಂಧನ ಬಳಕೆ ಮಾಡಲು ಆರಂಭಿಸಿದರೆ ಈಗಿರುವ ಇಂಧನದ ಕೊರತೆಯನ್ನು ಸರಿದೂಗಿಸಬಹುದು ಹಾಗೂ ಇಂಧನದ ಕಾಸ್ಟ್ ಕೂಡ ಕಡಿಮೆ ಆಗಬಹುದು.

advertisement

Leave A Reply

Your email address will not be published.