Karnataka Times
Trending Stories, Viral News, Gossips & Everything in Kannada

Jio AirFiber: ಜಿಯೋ ಬ್ರಾಡ್ ಬ್ಯಾಂಡ್ ಕೇವಲ 599 ರೂ.ಗಳಿಗೆ, 13 OTTಪ್ಲಾಟ್ಫಾರ್ಮ್ ಉಚಿತ!

advertisement

ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ (Jio) ಇತ್ತೀಚಿನ ವರ್ಷಗಳಲ್ಲಿ ತುಂಬಾ ದೊಡ್ಡ ಹೆಸರು ಮಾಡಿದೆ. ಮೊದಲಿಗೆ ಸಿಮ್ ಕಾರ್ಡ್ಗಳನ್ನು ಅತ್ಯುತ್ತಮ ಬೆಲೆಗೆ ನೀಡಿ ನಂತರ ಮೊಬೈಲ್ ಫೋನ್ ಗಳನ್ನು ಕೂಡ ಉತ್ತಮ ಬೆಲೆಗೆ ನೀಡಿ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯಲು ಜಿಯೋಗೆ ಸಾಧ್ಯವಾಗಿದೆ.

ಸಿಮ್ ಕಾರ್ಡ್ಗಳ ನಂತರ ಜಿಯೋ ಫೈಬರ್ (Jio AirFiber) ಈಗ ಬಹಳಷ್ಟು ಜನರ ಮೆಚ್ಚಿನ ಆಯ್ಕೆ ಆಗಿದೆ. ಪ್ಲಾಟ್ಫಾರ್ಮ್ ಗಳನ್ನು ಉಚಿತವಾಗಿ ನೀಡುತ್ತಿರುವುದು ಹಾಗೂ ಹಲವಾರು ಲೈವ್ ಚಾನೆಲ್ ಗಳು ಇಲ್ಲಿ ದೊರಕುವುದು ಬಹಳಷ್ಟು ಜನ ಬೇರೆ ಸರ್ವಿಸ್ ಪ್ರೊವೈಡರ್ಗಳ ಬದಲಿಗೆ ಜೀವನ ಆಯ್ಕೆ ಮಾಡಲು ಕಾರಣವಾಗಿದೆ.

ಜಿಯೋ (Jio) ದ ಅತಿ ಕಡಿಮೆ ದರದ ಪ್ಲಾನ್ ಎಂದರೆ ಜಿಯೋ ಫೈಬರ್ (Jio AirFiber) 599 ಕ್ಲಾಸ್. ಈ ಪ್ಲಾನ್ ಅನ್ನು ನೀವು ಹಾಕಿಸಿಕೊಂಡರೆ ನಿಮಗೆ ಯಾವೆಲ್ಲ ಪ್ರಯೋಜನಗಳು ಸಿಗುತ್ತವೆ ಉಚಿತವಾಗಿ ಸಿಗುತ್ತವೆ ಈಗ ನೋಡೋಣ.

 

advertisement

 

ಜಿಯೋ ಫೈಬರ್ ನಲ್ಲಿ ಏರ್ ಫೈಬರ್ ಮತ್ತು ಏರ್ ಫೈಬರ್ ಮ್ಯಾಕ್ಸ್ ಎಂಬ ಎರಡು ಶ್ರೇಣಿಗಳ ಪ್ಲಾನ್ ಗಳು ಲಭ್ಯ ಇರುತ್ತವೆ. ಇದರಲ್ಲಿ ಏರ್ ಫೈಬರ್ ಮ್ಯಾಕ್ಸ್ ಸ್ವಲ್ಪ ದುಬಾರಿಯಾದ ಪ್ಲಾನ್ ಆಗಿದೆ. ಏರ್ ಫೈಬರ್ ನ ಅತ್ಯಂತ ಕಡಿಮೆ ದರದ ಪ್ಲಾನ್ 599ರ ಪ್ಲಾನ್ ಆಗಿದ್ದು, ಇದು 30 ದಿನಗಳ ವ್ಯಾಲಿಡಿಟಿ ಜೊತೆಗೆ ತಿಂಗಳಿಗೆ 1000 GB ಡೇಟಾವನ್ನು 30 ಎಂಬಿಪಿಎಸ್ ವೇಗದಲ್ಲಿ ನೀಡುತ್ತದೆ ಈ ಡೇಟಾ ಮುಗಿದರೆ ನಂತರ ಕೂಡ ಇಂಟರ್ನೆಟ್ ಸೌಲಭ್ಯ ಲಭ್ಯವಿದ್ದು 60 ಕೆ ಬಿ ಪಿ ಎಸ್ ವೇಗದಲ್ಲಿ ಇಂಟರ್ನೆಟ್ ಸೌಲಭ್ಯವನ್ನು ನೀವು ಬಳಸಬಹುದು. ಈ ಪ್ಲಾನ್ ಆರು ತಿಂಗಳು ಹಾಗೂ 12 ತಿಂಗಳುಗಳ ರಿಚಾರ್ಜ್ ನ ಜೊತೆಗೆ ಕೂಡ ಬರುತ್ತಿದೆ.

ಇವಿಷ್ಟು ಇಂಟರ್ನೆಟ್ ಸಂಬಂಧಿತ ಪ್ರಯೋಜನಗಳಾದರೆ, 550ಕ್ಕೂ ಹೆಚ್ಚಿನ ಟಿವಿ ಚಾನೆಲ್ ಗಳನ್ನು ನೀವು ವೀಕ್ಷಿಸಬಹುದು. ಇದರ ಜೊತೆಗೆ 13 ಓ ಟಿ ಟಿ ಪ್ಲಾಟ್ಫಾರ್ಮ್ ಗಳು ಕೂಡ ನಿಮಗೆ ಉಚಿತವಾಗಿ ದೊರಕಲಿದೆ ಪ್ಲಾಟ್ಫಾರ್ಮ್ಗಳೆಂದರೆ Disney+ Hotstar, Sony Liv, ZEE5, JioCinema, Sun NXT, Hoichoi, Discovery+, ALTBalaji, Eros Now, Lionsgate Play, ShemarooMe, DocuBay ಮತ್ತು EPIC ON
ಜಿಯೋ ಫೈಬರ್ ನ ಈ ಪ್ಲಾನ್ ಅನ್ನು ನೀವು ಪ್ರತಿ ತಿಂಗಳು ಪಾವತಿಸಿ ತೆಗೆದುಕೊಂಡರೆ ಇನ್ಸ್ಟಾಲೇಷನ್ ಚಾರ್ಜಸ್ ಮತ್ತು ಡೆಪಾಸಿಟ್ ನೀಡಬೇಕಾಗುತ್ತದೆ. ಆದರೆ ನೀವು ಇದರ ವಾರ್ಷಿಕ ಸಬ್ಸ್ಕ್ರಿಪ್ಷನ್ ಪ್ಲಾನ್ ಅನ್ನು ಆಯ್ಕೆ ಮಾಡಿದಲ್ಲಿ ಯಾವುದೇ ತರಹದ ಇನ್ಸ್ಟಾಲೇಶನ್ ಚಾರ್ಜ್ ಅನ್ನು ನೀಡಬೇಕಾದ ಅಗತ್ಯ ಇಲ್ಲ ವಾರ್ಷಿಕವಾಗಿ ಪಾವತಿ ಮಾಡಿದಾಗ ನಿಮಗೆ ಉಚಿತ ಇನ್ಸ್ಟಾಲೇಶನ್ ಜೊತೆಗೆ ವೈಫೈ ರೂಟರ್ ಸೆಟ್ ಅಪ್ ಬಾಕ್ಸ್ ಹಾಗೂ ವಾಯ್ಸ್ ಕಂಟ್ರೋಲ್ ರಿಮೋಟ್ ಉಚಿತವಾಗಿ ಸಿಗುತ್ತದೆ. ಒಂದು ವರ್ಷದ ನಂತರ ನೀವು ಬೇಕಾದಲ್ಲಿ ಪ್ರತಿ ತಿಂಗಳು ಪಾವತಿ ಮಾಡುವ ಪ್ಲಾನ್ ಗೆ ವರ್ಗಾಯಿಸಿಕೊಳ್ಳಬಹುದು.

advertisement

Leave A Reply

Your email address will not be published.