Karnataka Times
Trending Stories, Viral News, Gossips & Everything in Kannada

Karnataka RTO: ಪೊಲೀಸರಿಗೆ ಇನ್ಮೇಲೆ ಈ ಅಧಿಕಾರವಿಲ್ಲ ! ಕರ್ನಾಟಕ ಸೇರಿ ಎಲ್ಲಾ ರಾಜ್ಯಕ್ಕೂ ಅನ್ವಯ ಈ ನಿಯಮ.

advertisement

Legal Rights Related To Traffic Police: ದೇಶದ ಗಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವಂತಹ ಕೆಲಸವನ್ನ ಸೈನಿಕರು ಮಾಡಿದ್ರೆ ನಮ್ಮ ದೇಶದ ಒಳಗೆ ಇರುವಂತಹ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತಹ ಕೆಲಸವನ್ನು ಪ್ರತಿಯೊಂದು ರಾಜ್ಯದ ಪೊಲೀಸರು( Karnataka State Police) ಮಾಡುತ್ತಾರೆ. ಪೊಲೀಸರು ಇರೋದ್ರಿಂದಾನೇ ದೇಶದ ಒಳಗೆ ಶಾಂತಿ ಸುವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಬಹುದಾಗಿದೆ.

ಪ್ರತಿಯೊಬ್ಬರು ಕೂಡ ಒಂದು ಬಾರಿಯಾದರೂ ಕೂಡ ನಾನು ದೊಡ್ಡವನಾದ ಮೇಲೆ ಪೊಲೀಸ್ ಆಗಬೇಕು ಅಂತ ಹೇಳಿಕೊಂಡಿರುವುದು ಇದೆ. ಆದರೆ ಪೊಲೀಸ್ರು ಅಂದ ತಕ್ಷಣ ಪ್ರತಿಯೊಬ್ಬ ಪೊಲೀಸರು ಕೂಡ ಒಳ್ಳೆಯವರೇ ಇರ್ಬೇಕು ಅಂತ ಏನು ನಿಯಮ ಇಲ್ಲ ಅಲ್ವಾ. ಪೊಲೀಸರಲ್ಲಿ ಕೂಡ ಕೆಲವೊಮ್ಮೆ ಕೆಲವರು ಸಾಮಾನ್ಯ ನಾಗರಿಕರಿಗೆ ತೊಂದರೆ ಕೊಡುವವರು ಕೂಡ ಇದ್ದಾರೆ. ಹೀಗಾಗಿ ಇವತ್ತಿನ ಈ ಲೇಖನಿಯಲ್ಲಿ ನಾವು ಹೇಳಲು ಹೊರಟಿರುವ ವಿಚಾರ ಇಂತಹ ಸಮಸ್ಯೆ ನೀಡುವಂತಹ ಪೊಲೀಸರಿಂದ ನೀವು ತಪ್ಪಿಸಿಕೊಳ್ಳಬಹುದಾಗಿದ್ದು ಕೇವಲ ಇದನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮಾತ್ರವಲ್ಲದೆ ನಿಮ್ಮ ಪ್ರೀತಿ ಪಾತ್ರರಿಗೂ ಕೂಡ ಇದರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಿ.

What if traffic police take your keys? What are the 10 traffic rules? What are the rights of traffic police in India? Can police ask for license without any reason?
Image Source: Deccan Herald

ಟ್ರಾಫಿಕ್ ಪೊಲೀಸರು(Traffic Police) ಈ ರೀತಿ ಮಾಡೋ ಹಾಗಿಲ್ಲ

ನಮ್ಮ ಭಾರತ ದೇಶದಲ್ಲಿ ಯಾರೇ ಆಗಲಿ ವಾಹನ ಚಲಾವಣೆಯ ಕಾನೂನು ನಿಯಮಗಳನ್ನು ಉಲ್ಲಂಘಿಸಿದೆ ಟ್ರಾಫಿಕ್ ಪೊಲೀಸರು ಅವರಿಗೆ ದಂಡವನ್ನು ವಿಧಿಸುತ್ತಾರೆ. ಆದರೆ ಇದಕ್ಕೂ ಕೂಡ ಒಂದು ಸರಿಯಾದ ನಿಯಮವಿದ್ದು ಇದರ ಬಗ್ಗೆ ಸಾಕಷ್ಟು ಸಾಮಾನ್ಯ ನಾಗರಿಕರು ಮಾಹಿತಿಯನ್ನು ತಿಳಿದುಕೊಂಡಿಲ್ಲ. ಹೀಗಾಗಿ ಟ್ರಾಫಿಕ್ ಪೊಲೀಸರು ಮಾಡುವಂತಹ ಕೆಲವೊಂದು ಕೆಲಸಗಳನ್ನು ನೀವು ಪ್ರತಿರೋಧ ಮಾಡುವಂತಹ ಅವಕಾಶ ನಿಮಗೆ ಕಾನೂನು ನೆಲಗಟ್ಟಿನ ಅಡಿಯಲ್ಲಿದೆ.

advertisement

ಯಾವುದೇ ಕಾರಣಕ್ಕೂ ಟ್ರಾಫಿಕ್ ಪೊಲೀಸ್ರು ನಿಮ್ಮನ್ನು ಅಡ್ಡ ಹಾಕಿದ ನಂತರ ನಿಮ್ಮ ಬಳಿ ಇರುವಂತಹ ವಾಹನದ ಕೀ ( Vehicle Key) ಅನ್ನು ಪಡೆದುಕೊಳ್ಳುವ ಹಾಗಿಲ್ಲ. ಕಾನೂನು ಪ್ರಕಾರವಾಗಿ ಈ ರೀತಿ ಮಾಡುವುದು ತಪ್ಪಾಗಿರುತ್ತದೆ. ಇದಾದ ನಂತರ ಸಾಮಾನ್ಯವಾಗಿ ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಸೇರಿದಂತೆ ವಾಹನಕ್ಕೆ ಸಂಬಂಧಪಟ್ಟಂತಹ ಡಾಕ್ಯುಮೆಂಟ್ ಗಳನ್ನು ಕೂಡ ಟ್ರಾಫಿಕ್ ಪೊಲೀಸ್ರು ಕೇಳಬಹುದಾಗಿದೆ. ಈ ಸಂದರ್ಭದಲ್ಲಿ ಕೂಡ ನೀವು ಪೊಲ್ಲ್ಯೂಷನ್ ಸರ್ಟಿಫಿಕೇಟ್ ಅನ್ನು ಟ್ರಾಫಿಕ್ ಪೊಲೀಸರಿಗೆ ನೀಡಬೇಕಾದ ಅಗತ್ಯವಿರುವುದಿಲ್ಲ ಯಾಕೆಂದರೆ. ಪೊಲ್ಲ್ಯೂಷನ್ ಸರ್ಟಿಫಿಕೇಟ್(Pollution Certificate) ಅನ್ನು ಕೇವಲ ಆರ್‌ಟಿಓ ಆಫೀಸರ್ ಮಾತ್ರ ಪರಿಶೀಲನೆ ಮಾಡುವಂತಹ ಅಧಿಕಾರವನ್ನು ಹೊಂದಿರುತ್ತಾರೆ.

ಈ ರೀತಿ ಮಾಡಿದ್ರೆ ಪೊಲೀಸರ ವಿರುದ್ಧವು ನೀವು ದೂರನ್ನು ದಾಖಲಿಸಬಹುದು(What to do when Stopped By Traffic Police?)

ಒಂದು ವೇಳೆ ನೀವು ರಸ್ತೆಯಲ್ಲಿ ಹೋಗಬೇಕಾದರೆ ನಿಮ್ಮ ವಾಹನವನ್ನು ಯಾರಾದರೂ ಕಾನ್ಸ್ಟೇಬಲ್ ಅಡ್ಡಗಟ್ಟಿದ್ರೆ ಅವರು ನೂರು ರೂಪಾಯಿಗಳ ಮೇಲೆ ನಿಮ್ಮ ಮೇಲೆ ಫೈನ್ ಹಾಕುವ ಯಾವುದೇ ಅಧಿಕಾರ ಇರುವುದಿಲ್ಲ ಎಂಬುದನ್ನು ಕೂಡ ಕಾನೂನು ಪ್ರಕಾರವಾಗಿ ತಿಳಿದುಕೊಳ್ಳಬಹುದು. ಒಂದು ವೇಳೆ ನೂರು ರೂಪಾಯಿಗಳಿಗಿಂತ ಹೆಚ್ಚಿನ ಫೈನ್ ಅನ್ನು ಕಾನ್ಸ್ಟೇಬಲ್ ಹಾಕುತ್ತಿದ್ದರೆ ಅವರ ವಿರುದ್ಧ ಕೂಡ ನೀವು ಕಂಪ್ಲೇಂಟ್ ಮಾಡುವಂತಹ ಅವಕಾಶವನ್ನು ಹೊಂದಿದ್ದೀರಿ.

What if traffic police take your keys? What are the 10 traffic rules? What are the rights of traffic police in India? Can police ask for license without any reason?
Image Source: Deccan Herald

ಇವುಗಳ ಜೊತೆಯಲ್ಲಿ ನೀವು ಟ್ರಾಫಿಕ್ ಪೊಲೀಸರು ನಿಮ್ಮ ಬಳಿ ಗಾಡಿಯ ಡಾಕ್ಯುಮೆಂಟ್ ಗಳನ್ನು ಕೇಳಿದಾಗ ನೀವು ನಿಮ್ಮ ಡಾಕ್ಯುಮೆಂಟ್ ಅನ್ನು Digi Locker ನಲ್ಲಿ ಇಟ್ಟಿದ್ರೆ ಅದನ್ನು ಕೂಡ ತೋರಿಸಬಹುದಾಗಿದೆ. ಇನ್ನು ಟ್ರಾಫಿಕ್ ಪೊಲೀಸ್ರು ಕೂಡ ಅದನ್ನ ಮಾನ್ಯ ಎಂಬುದಾಗಿ ಪರಿಗಣಿಸಬೇಕಾಗಿರುತ್ತದೆ. ಇದನ್ನು ಕಡೆಗಣಿಸಿದರೆ ನೀವು ಅವರ ವಿರುದ್ಧ ಕೂಡ ಕಂಪ್ಲೇಂಟ್ ನೀಡಬಹುದಾದ ಎಲ್ಲಾ ಸ್ವಾತಂತ್ರ್ಯವನ್ನು ಹೊಂದಿರುತ್ತೀರಿ.

ಸರ್ಕಾರದ ನಿಯಮಗಳ ಪ್ರಕಾರ ಡಿಜಿ ಲಾಕರ್ ಮೂಲಕ ನೀವು ನಿಮ್ಮ ಡಾಕ್ಯುಮೆಂಟ್ಗಳನ್ನು ಇಟ್ಟುಕೊಳ್ಳಬಹುದಾಗಿತ್ತು ಅದನ್ನು ಕೂಡ ಟ್ರಾಫಿಕ್ ಪೊಲೀಸ್ ಆಫೀಸರ್ಗಳು ಒಪ್ಪಿಕೊಳ್ಳ ಬೇಕಾಗಿರುತ್ತದೆ. ಒಂದು ವೇಳೆ ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಮನೆಯಲ್ಲಿ ಮರೆತು ಬಂದಿದ್ದರೆ ಹಾಗೂ ಅದೇ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ನಿಮ್ಮನ್ನು ಹಿಡಿದುಕೊಂಡಿದ್ದು ಆ ಸಂದರ್ಭದಲ್ಲಿ ಫೈನ್ ಹಾಕಿ ರಶೀದಿಯನ್ನು ನೀಡಿದ್ರೆ, ಅದನ್ನು ಮತ್ತೆ ನೀವು ಡ್ರೈವಿಂಗ್ ಲೈಸನ್ಸ್ ಜೊತೆಗೆ ಆರ್ ಟಿ ಓ ಆಫೀಸ್ ಗೆ ಹೋಗಿ ಹಣವನ್ನು ಮರುಕಳಿಸಿ ಪಡೆದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.