Karnataka Times
Trending Stories, Viral News, Gossips & Everything in Kannada

ICC T20 World Cup 2024: T20 ವಿಶ್ವಕಪ್ ಗೆ ಪಾಂಡ್ಯ ಬದಲು ಈ ಬೆಂಕಿ ಆಟಗಾರನನ್ನು ಸೆಲೆಕ್ಟ್ ಮಾಡಿ ಎಂದ ಇರ್ಫಾನ್ ಪಠಾಣ್

advertisement

ICC T20 World Cup 2024: ಕ್ರಿಕೆಟ್ ಪ್ರಿಯರಿಗೆ ಸಿಹಿಸುದ್ದಿ ಏನೆಂದರೆ ಇದೇ ವರ್ಷ ಜೂನ್ 1ನೇ ತಾರೀಕಿನಂದು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆಯೋಜಿಸಲಿರುವಂತಹ T20 ವರ್ಲ್ಡ್ ಕಪ್ನಲ್ಲಿ ( ICC T20 World Cup 2024)  ಐರ್ಲ್ಯಾಂಡ್, ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಭಾರತದಂತಹ ದೇಶಗಳು ಭಾಗವಹಿಸಲಿದ್ದು, ಒಂದು ತಿಂಗಳುಗಳ ಕಾಲ ನಡೆಯಲಿರುವಂತಹ ವಿಶ್ವ ಕಪ್ ನಲ್ಲಿ ಭಾರತ ತಂಡವು ಜೂನ್ 5 ನೇ ತಾರೀಖಿನಂದು ಐರ್ಲ್ಯಾಂಡ್ ತಂಡವನ್ನು ಮೊದಲ ಪಂದ್ಯದಲ್ಲಿ ಎದುರಿಸಲಿದೆ.

ಭಾರತದ ಮಾಜಿ ಆಲ್ ರೌಂಡರ್ ಆದಂತಹ ಇರ್ಫಾನ್ಈ ಪಠಾಣ್ ಈ ಬಾರಿಯ T20 ವರ್ಲ್ಡ್ ಕಪ್ ನಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ. ಅಷ್ಟಕ್ಕೂ ಇರ್ಫಾನ್ ಪಠಾಣ್ (Irfan Pathan), T20 ವರ್ಲ್ಡ್ ಕಪ್ ನಲ್ಲಿ ನೋಡ ಬಯಸುತ್ತಿರುವ ಯುವ ಆಟಗಾರ ಯಾರು? ಆತ ವರ್ಲ್ಡ್ ಕಪ್ ನಲ್ಲಿ ಸ್ಥಾನ ಪಡೆದುಕೊಂಡರೆ ಹಾರ್ದಿಕ್ ಪಾಂಡ್ಯಗೆ ಗೇಟ್ ಪಾಸ್ ಸಿಗುವುದು ಪಕ್ಕಾನ? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.

Who will host 2024 T20 World Cup? Where is the 2024 T20 World Cup schedule? Who is the squad for T20 2024 India? Where the female T20 World Cup 2024 will be held on?

ಯುವ ಆಟಗಾರರಿಗೆ ಅವಕಾಶ ಕೊಡಿ ಎಂದ ಆಲ್ ರೌಂಡರ್ ಇರ್ಫಾನ್ ಪಠಾಣ್

ಕಳೆದ ವರ್ಷದಿಂದ ಐಪಿಎಲ್ ನಲ್ಲಿ ಯುವ ಆಟಗಾರರು ಮಿಂಚುತ್ತಿದ್ದಾರೆ, ಹಿರಿಯ ಆಟಗಾರರಿಗಿಂತ ಅದ್ಭುತ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನಗಳನ್ನು ನೀಡುತ್ತಾ ಮಿಂಚುತ್ತಿರುವಂತಹ ಯುವ ಆಟಗಾರರಿಗೆ ಟೀಮ್ ಇಂಡಿಯಾದ(team India) ಲ್ಲಿ ಅವಕಾಶ ನೀಡುವಂತೆ ಈ ಹಿಂದೆ ಸಾಕಷ್ಟು ಮಾಜಿ ಕ್ರಿಕೆಟ್ ಆಟಗಾರರು ಕೇಳಿಕೊಂಡಿದ್ದರು. ಅದರಂತೆ ಸಾಮಾಜಿಕ ಮಾಧ್ಯಮದಲ್ಲಿ ಸಿ ಎಸ್ ಕೆ ತಂಡದಲ್ಲಿ ತನ್ನ ಅದ್ಭುತ ಆಟಗಾರಿಕೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಶಿವಂ ದುಬೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಶಿವಂ ದುಬೆ ಕುರಿತು ಇರ್ಫಾನ್ ಪಠಾಣ್ ಟ್ವೀಟ್

ಇತರ ಭಾರತೀಯ ಕ್ರಿಕೆಟ್ ಆಟಗಾರರಿಗೆ ಹೋಲಿಸಿದರೆ, ಶಿವಂ ದುಬೆ(Shivam Dube) ಅದ್ಭುತವಾಗಿ ಸ್ಪಿನ್ ಹೊಡೆಯುವ ಸಾಮರ್ಥ್ಯದಲ್ಲಿ ಹೊಂದಿದ್ದಾರೆ. ಹೀಗಾಗಿ ಭಾರತೀಯ ಆಯ್ಕೆಗಾರರು ವರ್ಲ್ಡ್ ಕಪ್ಗಾಗಿ ಆಟಗಾರರನ್ನು ಆಯ್ದುಕೊಳ್ಳುವ ಸಮಯದಲ್ಲಿ ಶಿವಂ ದುಬೆ ಅವರ ಆಟಗಾರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಯುವ ಆಟಗಾರರಿಗೆ ಅವಕಾಶ ನೀಡಿ ಎಂದು ಕೇಳಿಕೊಂಡಿದ್ದಾರೆ.

advertisement

ಶಿವಂ ದುಬೆ ಇಂದ ಹಾರ್ದಿಕ್ ಪಾಂಡ್ಯಗೆ ಗೇಟ್ ಪಾಸ್ ಸಿಗಲಿದೆಯೇ?

2024 ಐಪಿಎಲ್ ನಲ್ಲಿ ಶಿವಂ ದುಬೆ ತಮ್ಮ ಅದ್ಭುತ ಆಟಗಾರಿಕೆಯ ಪ್ರದರ್ಶನವನ್ನು ಮುಂದಿಟ್ಟರೆ ಹಾಗೂ ಖಂಡಿತ ಮುಂಬರಲಿರುವ ವರ್ಲ್ಡ್ ಕಪ್ನಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ. ಇದರಿಂದಾಗಿ ಹಾರ್ದಿಕ್ ಪಾಂಡ್ಯ ವರ್ಲ್ಡ್ ಕಪ್ ನಿಂದ ಹೊರಗುಳಿಯ ಬೇಕಾದಂತಹ ಪರಿಸ್ಥಿತಿ ಎದುರಾಗಬಹುದು. ಹೌದು ಗೆಳೆಯರೇ ಹಿಟ್ ಮ್ಯಾನ್ ರೋಹಿತ್ ಶರ್ಮಾ(Rohit Sharma) ಅವರನ್ನು ಪಕ್ಕಕ್ಕೆ ಸರಿಸಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆಗಿರುವಂತಹ ಹಾರ್ದಿಕ್ ಪಾಂಡ್ಯ ಕಳೆದ ಮೂರು ಮ್ಯಾಚ್ಗಳಲ್ಲಿಯೂ ಹೇಳಿಕೊಳ್ಳುವಂತಹ ಪರ್ಫಾರ್ಮೆನ್ಸ್ ನೀಡಿಲ್ಲ, ಜೊತೆಗೆ ದೊಡ್ಡ ದೊಡ್ಡ ಟೂರ್ನಮೆಂಟ್ಗಳಲ್ಲಿ ಹಾರ್ದಿಕ್ ಪಾಂಡ್ಯರ ಫಿಟ್ನೆಸ್ ತಂಡಕ್ಕೆ ಸಮಸ್ಯೆಯಾಗಿ ಮಾರ್ಪಟ್ಟಿತ್ತು.

IRFAN PATHAN SAYS SELECT DUBE OVER PANDYA FOR T20 WORLDCUP
Image Credit: NDTV Sports

ಹೀಗಾಗಿ  ಐಪಿಎಲ್ ನಲ್ಲಿ ತಮ್ಮ ಅದ್ಭುತ ಪರ್ಫಾರ್ಮೆನ್ಸ್ ನೀಡುತ್ತಾ ಆಲ್ ರೌಂಡರ್ ಆಗಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವ ಶಿವಂ ದುಬೆ ಅವರನ್ನು ಹಾರ್ದಿಕ ಪಾಂಡ್ಯ ಅವರ ಬದಲಿಗೆ ಆಯ್ಕೆ ಮಾಡಬಹುದಾದ ಸುದ್ದಿ ಕ್ರಿಕೆಟ್ ವಲಯದಲ್ಲಿ ಜೋರಾಗಿಯೇ ಹರಿದಾಡುತ್ತಿದೆ.

ಐಪಿಎಲ್ ನಲ್ಲಿ ಶಿವಂ ದುಬೆ ದರ್ಬಾರ್

2024ರ ಐಪಿಎಲ್ ನಲ್ಲಿ, CSK ತಂಡದ ಆಟಗಾರರಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವಂತಹ ಶಿವಂ ದುಬೆ ಈಗಾಗಲೇ ನಡೆದಿರುವಂತಹ ನಾಲ್ಕು ಪಂದ್ಯಗಳಲ್ಲಿ 148 ರನ್ಗಳನ್ನು ಗಳಿಸಿ ಬರೋಬ್ಬರಿ 160. 87 ಸ್ಟ್ರೈಕ್ ರೇಟ್ (strike rate) ನಲ್ಲಿ ಆಟವಾಡುತ್ತಿದ್ದಾರೆ. ಅಲ್ಲದೆ ನಾಲ್ಕು ಇನ್ನಿಂಗ್ಸ್ ನಲ್ಲಿ 10 ಸಿಕ್ಸರ್ ಗಳನ್ನು ಬಾರಿಸುವ ಮೂಲಕ ತಮ್ಮ ತಂಡಕ್ಕೆ ಅದ್ಭುತ ರನ್ನನ್ನು ಕಲೆ ಹಾಕಿ ಕೊಟ್ಟಿರುವ ದುಬೆ ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೆ ಬೌಲಿಂಗ್ ವಲಯದಲ್ಲಿಯೂ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಹೀಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಅದ್ಭುತ ಹಿಡಿತವನ್ನು ಹೊಂದಿರುವ ಶಿವಂ ದುಬೆ(Shivam Dube) ಅವರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.

advertisement

Leave A Reply

Your email address will not be published.