Karnataka Times
Trending Stories, Viral News, Gossips & Everything in Kannada

Harbhajan Singh: ಧೋನಿಯ ಗುಣಗಾನ ಮಾಡಿದ ನಿರೂಪಕನಿಗೆ ಹರ್ಭಜನ್ ಸಿಂಗ್ ಹೇಳಿದ್ದೇ ಬೇರೆ!

advertisement

ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡ ಕಂಡಂತಹ ಐತಿಹಾಸಿಕ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್ ಎಂದು ಹೇಳಬಹುದಾಗಿದೆ. ಭಾರತಕ್ಕೆ ಏಕದಿನ ಟಿ 20 ಹಾಗೂ ಚಾಂಪಿಯನ್ ಟ್ರೋಫಿಯಲ್ಲಿ ಕಪ್ ಗೆದ್ದು ಕೊಟ್ಟಂತಹ ಯಶಸ್ವಿ ನಾಯಕ. ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಕೂಡ ಮಹೇಂದ್ರ ಸಿಂಗ್ ಧೋನಿ ಅವರನ್ನು ಗೌರವಿಸುತ್ತಾರೆ ಹಾಗೂ ಭಾರತೀಯ ಕ್ರಿಕೆಟ್ ತಂಡಕ್ಕೆ ನೀಡಿರುವಂತಹ ಅವರ ಕೊಡುಗೆಯನ್ನು ಸ್ಮರಿಸುತ್ತಾರೆ. ಈಗ ವಯಸ್ಸು 42 ಆಗಿದ್ದರೂ ಕೂಡ ಐಪಿಎಲ್ ನಲ್ಲಿ ಸಿಕ್ಸರ್ ಗಳ ಮೇಲೆ ಸಿಕ್ಸರ್ ಅನ್ನು ಬಾರಿಸುವಂತಹ ಮಹೇಂದ್ರ ಸಿಂಗ್ ಧೋನಿ ಇವತ್ತಿಗೂ ಕೂಡ ಯುವ ಪ್ರತಿಯೊಬ್ಬರ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ ಎಂದು ಹೇಳಬಹುದು.

ಧೋನಿ ಅವರನ್ನು ಹೊಗಳಿದ್ದಕ್ಕೆ ಇರಿಟೇಟ್ ಆದ ಹರ್ಭಜನ್ ಸಿಂಗ್(Harbhajan Singh):

ಹರ್ಭಜನ್ ಸಿಂಗ್ ರವರು ಧೋನಿ ಅವರ ಜೊತೆಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೂಡ ಜೊತೆಯಾಗಿ ಆಟವಾಡಿದ್ದಾರೆ. ಧೋನಿ ಹಾಗೂ ಹರ್ಭಜನ್ ಸಿಂಗ್ (Harbhajan Singh) ಸಾಕಷ್ಟು ಆತ್ಮೀಯ ಸ್ನೇಹಿತರು ಕೂಡ ಸಾಕಷ್ಟು ಆತ್ಮೀಯ ಸ್ನೇಹಿತರು ಕೂಡ ಆಗಿದ್ದಾರೆ. ಆದರೆ ಇತ್ತೀಚಿಗಷ್ಟೇ ಅವರು ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಪರೋಕ್ಷವಾಗಿಯೇ ತಮ್ಮ ಅಸಹಣೆಯನ್ನು ವ್ಯಕ್ತಪಡಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಹೇಳಬಹುದಾಗಿದೆ.

advertisement

Image Source: NDTV Sports

ಹೌದು ಸ್ಟಾರ್ ಸ್ಪೋರ್ಟ್ಸ್ ನಿರೂಪಕರೊಬ್ರು 2010ನೇ ಇಸ್ವಿಯಲ್ಲಿ ಮುಂಬೈ ತಂಡದ ವಿರುದ್ಧ ಫೈನಲ್ ನಲ್ಲಿ ಧೋನಿ ಅವರು ಬಾರಿಸಿರುವ ಅಂತಹ ಸಿಂಗಲ್ ಹ್ಯಾಂಡ್ ಸಿಕ್ಸ್ ಬಗ್ಗೆ ಮಾತನಾಡುತ್ತಿರಬೇಕಾದರೆ ಅಗತ್ಯಕ್ಕೂ ಮೀರಿ ಹೊಗಳುವುದಕ್ಕೆ ಪ್ರಾರಂಭ ಮಾಡುತ್ತಾರೆ. ಇನ್ನು ಇದೇ ಪಂದ್ಯದಲ್ಲಿ ಪೋಲಾರ್ಡ್ ಕೂಡ ಅತ್ಯುತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದರು ಆದರೆ ಕೊನೆಯಲ್ಲಿ ತಂಡವನ್ನು ಗೆಲ್ಲಿಸಲು ಅವರಿಗೆ ಸಾಧ್ಯವಾಗದೆ ಹೋಯಿತು. ಇನ್ನು ಈ ಸಂದರ್ಭದಲ್ಲಿ ಧೋನಿ ಅವರು ಈ ಪಂದ್ಯದಲ್ಲಿ ಸಿಂಗಲ್ ಸಿಕ್ಸ್ ಹೊಡೆದಿದ್ದರೂ ಕೂಡ ಅವರ ಬಗ್ಗೆ ಹೆಚ್ಚಾಗಿ ನಿರೂಪಕರು ಗುಣಗಾನವನ್ನು ಮಾಡುತ್ತಿದ್ದರು.

ಇದನ್ನು ಕಂಡಂತಹ ಹರ್ಭಜನ್ ಸಿಂಗ್ ಈ ಪಂದ್ಯದಲ್ಲಿ ಧೋನಿ ಅವರು ಹೇಳಿಕೊಳ್ಳುವಷ್ಟು ಮಹಾನ್ ಏನು ಮಾಡಿಲ್ಲ. ಪೊಲಾರ್ಡ್ ಕೂಡ 6 ಅನ್ನು ಬಾರಿಸುತ್ತಾರೆ ಹಾಗೂ ಬಾರಿಸಿದ್ದಾರೆ ಎಂಬುದಾಗಿ ಹೇಳುವ ಮೂಲಕ ಆ ನಿರೂಪಕನ ಬಾಯಿಯನ್ನು ಮುಚ್ಚಿಸಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಹರ್ಭಜನ್ ಸಿಂಗ್ ರವರ ವಿರುದ್ಧ ಮಹೇಂದ್ರ ಸಿಂಗ್ ಧೋನಿ ರವರ ಅಭಿಮಾನಿಗಳು ಈ ರೀತಿ ಹೇಳುವ ಅಗತ್ಯ ಏನಿತ್ತು ಅನ್ನೋದಾಗಿ ಹರ್ಭಜನ್ ಸಿಂಗ್ ರವರ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಭಜ್ಜಿ ನಿಜಕ್ಕೂ ಕೂಡ ಈ ರೀತಿ ಹೇಳಬೇಕಾದ ಅಗತ್ಯ ಇತ್ತ ಸ್ನೇಹಿತರೆ?

advertisement

Leave A Reply

Your email address will not be published.