Karnataka Times
Trending Stories, Viral News, Gossips & Everything in Kannada

RCBಯ ಈ ಪ್ರಖ್ಯಾತ ಆಟಗಾರನಿಗೆ ಇರುವ ಮಾರಕ ಖಾಯಿಲೆ ಯಾವುದು ಗೊತ್ತಾ?

advertisement

ಈ ಬಾರಿ IPL ಆರಂಭಕ್ಕೂ ಮುನ್ನವೆ RCB ನಾಯಕ ವಿರಾಟ್ ಕೊಹ್ಲಿ ಅವರು ಹೊಸ ಅಧ್ಯಯನ ಎಂಬಂತೆ ಆಟ ಆರಂಭ ಮಾಡಿದ್ದರು ಆದರೆ ಇದುವರೆಗೆ ಸತತ ಸೋಲಿನ ಬಳಿಕ ಎರಡು ಮ್ಯಾಚ್ ಅನ್ನು ಗೆದ್ದಿದ್ದರು. ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಅನೇಕ ಆಟಗಾರರ ಬಗ್ಗೆ ಸತತ ಟ್ರೋಲ್ ಆಗುತ್ತಲೇ ಇದ್ದರೂ ಇನ್ನೊಂದೆಡೆ RCB ಫ್ಯಾನ್ಸ್ ಮಾತ್ರ ಈ ಸಲ ಕಪ್ ನಮ್ಮದೆ ಎಂಬ ಘೋಷ ವಾಕ್ಯವನ್ನು ಬಿಟ್ಟು ಕೊಡುತ್ತಿಲ್ಲ. ಅದೇ ರೀತಿ RCB ನಲ್ಲಿ ಪ್ರಭಾವಿ ಆಟಗಾರನಾದ ಕ್ಯಾಮರೋನ್ ಗ್ರೀನ್ (Cameron Green) ಅವರ ಬಗ್ಗೆ ಅನೇಕ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಕುರಿತಾದ ಪೂರ್ತಿ ಮಾಹಿತಿ ಇಲ್ಲಿದೆ.

ಮಾರಕ ಖಾಯಿಲೆ:

 

Image Source: Telangana Today

 

24ವರ್ಷದ ಕ್ಯಾಮರೋನ್ ಗ್ರೀನ್ (Cameron Green) ಅವರು ಕ್ರಿಕೆಟ್ ಲೋಕದಲ್ಲಿ ಸಾಧನೆ ಮಾಡಿದ್ದು ಬಹಳ ಅಭೂತಪೂರ್ವ ಎನ್ನಬಹುದು. ಆಸ್ಟ್ರೇಲಿಯಾ ಮೂಲದ ಆಟಗಾರರಾಗಿದ್ದರೂ ಇವರಿಗೆ ಭಾರತದಲ್ಲಿಯೂ ಫ್ಯಾನ್ಸ್ ಇದ್ದಾರೆ. RCB ತಂಡದಲ್ಲಿ ಮೇರು ನಾಯಕನಾಗಿ ಇವರ ಆಟ ಅನೇಕ ಜನರಿಗೆ ಬಲು ಇಷ್ಟವಾಗಿದೆ. ಆದರೆ ಈ ಬಾರಿ ಇವರ ಆಟ ಅಷ್ಟಾಗಿ ಪ್ರದರ್ಶನ ಕಾಣುತ್ತಿಲ್ಲ.ಈ ನಡುವೆ ಇದೇ ಆಟಗಾರನಿಗೆ ಮಾರಕ ಖಾಯಿಲೆ ಇದ್ದು ಆತ ಇನ್ನು ಕೇವಲ 12 ವರ್ಷ ಮಾತ್ರವೇ ಬದುಕುಳಿಯಲಿದ್ದಾನೆ ಎಂಬ ಅಚ್ಚರಿಯ ಸಂಗತಿ ಸಾಮಾಜಿಕ ಜಾಲವನ್ನು ಹರಿದಾಡುತ್ತಿದೆ.

ಯಾವುದು ಆ ಖಾಯಿಲೆ:

 

advertisement

Image Source: National Kidney Foundation

 

ಕ್ಯಾಮರೋನ್ ಗ್ರೀನ್ (Cameron Green) ಅವರು RCB ಫ್ರ್ಯಾಂಚೈಸ್ ಆಟಗಾರರಲ್ಲಿ ಒಬ್ಬರಾಗಿದ್ದು ಬ್ಯಾಟಿಂಗ್ ಫಿಲ್ಡ್ ನಲ್ಲಿ ಬಹಳ ಹೆಸರು ಮಾಡಿದ್ದಾರೆ. ಇವರು ನೋಡಲು ಬಹಳ ಆರೋಗ್ಯವಂತರೆಂದು ಮೇಲ್ನೋಟಕ್ಕೆ ಅನಿಸಿದರೂ ದೇಹದಲ್ಲಿ ಕಾಡುವ ನೋವು ಒಂದು ಅಡಗಿದೆ. ಇವರಿಗೆ ಕಾಡುತ್ತಿರುವ ಆ ರೋಗದ ಹೆಸರು Chronic Kidney Disease ಎನ್ನಬಹುದು. ಇದು ಮೂತ್ರ ಪಿಂಡಕ್ಕೆ ಕಾಡುವ ರೋಗವಾಗಿದ್ದು ಮೂತ್ರಪಿಂಡ ಸರಿಯಾಗಿ ಕೆಲಸ ಮಾಡಲಾರದು.

ಮಗುವಾಗಿದ್ದಾಗಲೇ ತಿಳಿದಿತ್ತು:

ಗ್ರೀನ್ ಅವರು ಚಿಕ್ಕ ಮಗುವಾಗಿದ್ದಾಗಲೇ ಅವರಿಗೆ ಹೀಗೊಂದು ಸಮಸ್ಯೆ ಇದೆ ಎಂದು ಅವರ ತಾಯಿಗೆ ತಿಳಿದು ಬಂದಿದ್ದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರ ಬಳಿ ಕೊಂಡೊಯ್ದಿದ್ದರು ಅದರ ಪ್ರಕಾರ ಈ ಮಗು 12ವರ್ಷ ಮಾತ್ರ ಬದುಕುಳಿಯುತ್ತೆ ಎಂದು ವೈದ್ಯರು ಹೇಳಿದ್ದರು ಆದರೆ ಈ ಆಟಗಾರ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇದುವರೆಗೆ ತಂಡಕ್ಕಾಗಿ ಬಹಳ ಶ್ರಮಿಸಿದ್ದು 24 ವರ್ಷದ ತನಕ ಕಾಲದೂಡಿದ್ದಾರೆ‌‌. ಈಗಲೂ ಅವರು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಲೇ ಇದ್ದಾರೆ

ಆಹಾರದಲ್ಲಿ ಪತ್ಯೆ:

ಕ್ರೋನಿಕ್ ಖಾಯಿಲೆಯನ್ನು ಸಂಪೂರ್ಣ ವಾಸಿ ಮಾಡಲು ಸಾಧ್ಯವಿಲ್ಲ ಹಾಗಿದ್ದರೂ ವೈದ್ಯಕೀಯ ಸಲಹೆಯಂತೆ ಊಟದಲ್ಲಿ ಆಹಾರ ಪತ್ಯೆ ಮಾಡಬಹುದು. ಅವರು IPL ಸಂದರ್ಭದಲ್ಲಿ ಭಾರತಕ್ಕೆ ಬಂದಾಗ ಇವರು ದೇಹಕ್ಕೆ ಅಗತ್ಯವಿದ್ದ ಪ್ರಮಾಣದಷ್ಟು ಪ್ರೋಟೀನ್ ಹಾಗೂ ಉಪ್ಪಿನ ಸೇವನೆ ಮಾಡುತ್ತಿದ್ದಾರೆ. ಇವರು ತಮ್ಮ ಶೆಫ್ ಜೊತೆ ಡಯಟ್ ಪ್ಲ್ಯಾನ್ ಕೂಡ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಕಿಡ್ನಿ ಖಾಯಿಲೆ ಜಾಗೃತಿ ಮೂಡಿಸುವ ಸಲುವಾಗಿ ಕಿಡ್ನಿ ಫೌಂಡೇಶನ್ ಒಂದಕ್ಕೆ ಅವರು ಭೇಟಿ ಕೂಡ ನೀಡಿದ್ದಾರೆ. ಈ ಮೂಲಕ ಖಾಯಿಲೆ ಇದ್ದರೂ ಅದನ್ನು ಮೆಟ್ಟಿನಿಂತು ಚಲಗಾರನಂತೆ ಬದುಕುವ ಗ್ರೀನ್ ಅವರು ಸಮಾಜದಲ್ಲಿ ಅನೇಕರಿಗೆ ಸ್ಫೂರ್ತಿ ಎನ್ನಬಹುದು.

advertisement

Leave A Reply

Your email address will not be published.