Karnataka Times
Trending Stories, Viral News, Gossips & Everything in Kannada

Loan: ಅರ್ಜಿ ಹಾಕಿದರೆ ಈ ಸಾಲಕ್ಕೆ ಬೇಗ ಮಂಜೂರಾತಿ ನೀಡುತ್ತಿದೆ ಸ್ಟೇಟ್ ಬ್ಯಾಂಕ್! ಮುಗಿಬಿದ್ದ ಜನ

advertisement

ಸ್ನೇಹಿತರೆ SBI ತನ್ನ ಗ್ರಾಹಕರಿಗೆ ನಾನಾ ರೀತಿಯ ಸಾಲ ಸೌಲಭ್ಯವನ್ನು (Many Loan Facilities) ಒದಗಿಸುತ್ತಿದ್ದು, ಅದರಲ್ಲೂ ಮುಖ್ಯವಾಗಿ ಬಿಸಿನೆಸ್ ಶುರು ಮಾಡಿ ಅದರಿಂದ ತಕ್ಕ ಮಟ್ಟದ ಲಾಭ ಪಡೆಯುತ್ತಿರುವ ವ್ಯಕ್ತಿ ತನ್ನ ಉದ್ಯಮವನ್ನು ವಿಸ್ತರಿಸುವ ಯೋಜನೆಯಲ್ಲಿದ್ದರೆ ಅದಕ್ಕೆ ಸಾಕಷ್ಟು ಲೋನ್ ಸ್ಕೀಮ್ (Loan Scheme) ಗಳನ್ನು ಜಾರಿಗೊಳಿಸಿದ್ದಾರೆ.‌ ಇತ್ತೀಚಿಗೆ 5 ಲಕ್ಷ ರೂಪಾಯಿಯ ಹೊಸ ಲೋನ್ ಒಂದನ್ನು ಎಸ್ಬಿಐ ಜಾರಿಗೊಳಿಸಿದ್ದು, ಇದರಲ್ಲಿ ಬ್ಯಾಂಕ್ ವತಿಯಿಂದ ಸಾಲವನ್ನು ಪಡೆದು ಬಿಸಿನೆಸ್ ವಿಸ್ತರಿಸಬಹುದು.

ಎಸ್ ಬಿ ಐ ಕಿಶೋರ್ ಮುದ್ರಾ ಸಾಲ ಯೋಜನೆ 2024:

ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯ (Pradhan Mantri Mudra Loan Scheme) ಅಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬಿಸಿನೆಸ್ ವಿಸ್ತರಿಸಲು ಸಾಲ ನೀಡಲು ಮುಂದಾಗಿದ್ದಾರೆ. ನಿಮ್ಮ ಬಿಸಿನೆಸ್ ಐಡಿಯಾದ ಆಧಾರದ ಮೇಲೆ SBI ಬ್ಯಾಂಕ್ 50,000 ದಿಂದ 5 ಲಕ್ಷ ರೂಪಾಯಿಗಳವರೆಗೂ ಸಾಲವನ್ನು ಕಡಿಮೆ ಬಡ್ಡಿ ದರದ ಮೇಲೆ ನೀಡುತ್ತಾರೆ.

 

Image Source: Deshgaon News

 

advertisement

ಹೀಗಾಗಿ ನೀವೇನಾದರೂ ಹಲವು ವರ್ಷಗಳಿಂದ 5 ಲಕ್ಷದ ಬಜೆಟ್ ನಲ್ಲಿ ಸಣ್ಣ ಬಿಸಿನೆಸ್ ವಿಸ್ತರ ಮಾಡಲು ಯೋಜನೆ ಹೂಡಿದ್ದರೆ ಎಸ್ ಬಿ ಐ ನಲ್ಲಿ ಲಭ್ಯವಿರುವ ಮುದ್ರಾ ಸಾಲ ಯೋಜನೆಯ ಅಡಿ ಲೋನ್ ಪಡೆದು ಸ್ವಂತ ಉದ್ಯಮವನ್ನು ಪ್ರಾರಂಭಿಸಬಹುದು.

ಎಸ್‌ಬಿಐ (SBI) ಬ್ಯಾಂಕ್ ತನ್ನ ಗ್ರಾಹಕರ ಕಷ್ಟವನ್ನು ಅರಿತು ಅವರ ಉದ್ಯಮವನ್ನು ವಿಸ್ತರಿಸಲು ಸಹಾಯ ಮಾಡುವ ದೃಷ್ಟಿಕೋನದಿಂದ ಸಬ್ಸಿಡಿ ಹಾಗೂ ಇನ್ನಿತರ ಸೌಲಭ್ಯವನ್ನು ಒದಗಿಸುತ್ತಿದ್ದು, ಗ್ರಾಹಕರು ಮುದ್ರ ಯೋಜನೆಯ ಅಡಿ 5 ಲಕ್ಷದವರಿಗೂ ಸಾಲ ಪಡೆದು ತಮ್ಮ ಬಿಸಿನೆಸನ್ನು ವಿಸ್ತರಿಸಲು ಉಪಯೋಗಿಸಿಕೊಳ್ಳಬಹುದು. ಸಾಲ ಮರುಪಾವತಿ (Repayment of Loan) ಮಾಡಲು ಬ್ಯಾಂಕ್ ವತಿಯಿಂದ ಐದು ವರ್ಷಗಳ ಕಾಲಾವಕಾಶವನ್ನು ಒದಗಿಸಿಕೊಳ್ಳಲಾಗುತ್ತದೆ.

ಕಿಶೋರ್ ಮುದ್ರಾ ಸಾಲ ಯೋಜನೆಯ ಅರ್ಹತೆ:

 

Image Source: The Financial Express

 

1. ಕಿಶೋರ್ ಮುದ್ರಾ ಸಾಲ ಯೋಜನೆಗೆ (Kishor Mudra Loan Scheme) ಅರ್ಜಿ ಸಲ್ಲಿಸುವಂತಹ ಗ್ರಾಹಕರು ಕಡ್ಡಾಯವಾಗಿ ಭಾರತೀಯ ನಾಗರಿಕರಾಗಿರಬೇಕು.
2. ಸಾಲ ಪಡೆಯಲು ವ್ಯಕ್ತಿಯ ವಯಸ್ಸು 18 ರಿಂದ 60 ವರ್ಷದ ಒಳಗಿರಬೇಕು.
3. ಬೇರೆ ಯಾವ ಬ್ಯಾಂಕಿನಲ್ಲಿ ಹೆಚ್ಚಿನ ಸಾಲ ಪಡೆದಿರಬಾರದು.
4. ಅರ್ಜಿದಾರರು ತಮ್ಮ ಸ್ವಂತ ಉದ್ಯಮವನ್ನು ಹೊಂದಿರಬೇಕು.

advertisement

Leave A Reply

Your email address will not be published.