Karnataka Times
Trending Stories, Viral News, Gossips & Everything in Kannada

SIM Card: ಆಧಾರ್ ಕಾರ್ಡ್ ಬಳಸಿ ಎಷ್ಟು ಸಿಮ್ ಪಡೆಯಬಹುದು? ಬಂತು ಹೊಸ ರೂಲ್ಸ್

advertisement

ಇಂದು ಪ್ರತಿಯೊಂದು ವ್ಯಕ್ತಿಗೂ ಆಧಾರ್ ಕಾರ್ಡ್ (Aadhaar Card) ಅನ್ನೋದು ಮುಖ್ಯವಾದ ದಾಖಲೆ ಯಾಗಿದ್ದು ಇದು ವಿಶಿಷ್ಟ ಗುರುತೀನ ಚೀಟಿ (Identity Card) ಯಾಗಿದೆ. ಇಂದು ಈ ದಾಖಲೆ ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ರವೆರೆಗೂ ಅಗತ್ಯವಾಗಿ ಬೇಕು. ಸರ್ಕಾರದ ‌ಕೆಲವೊಂದು ಸೌಲಭ್ಯ ಗಳನ್ನು ಪಡೆಯಲು ಯಾವುದೇ ದಾಖಲೆ ಪಡೆಯಲು ಅರ್ಜಿ ಸಲ್ಲಿಕೆ ಮಾಡುದಾದರೂ ಈ ದಾಖಲೆ ಬೇಕು. ಅಷ್ಟೆ ಅಲ್ಲದೆ ನಮ್ಮ ಬ್ಯಾಂಕ್ ಖಾತೆ (Bank Account), ರೇಷನ್ ಕಾರ್ಡ್ (Ration Card) ಇತ್ಯಾದಿ ಗಳಿಗೂ, ಹಣಕಾಸು ಸೇವೆಗಳಿಗೂ ಆಧಾರ್ ಸಂಖ್ಯೆ (Aadhaar Number) ಜೋಡಣೆ ಮಾಡಲಾಗುತ್ತದೆ.

ಲಿಂಕ್ ಕಡ್ಡಾಯ ಮಾಡಬೇಕು

ಇಂದು ಪ್ಯಾನ್ ಕಾರ್ಡ್ (PAN Card), ವಾಹನಗಳು ಮತ್ತು ವಿಮಾ ಪಾಲಿಸಿ (Insurance Policy), ಪಹಣಿ ಪತ್ರ ಇತ್ಯಾದಿ ಹಲವು ದಾಖಲೆಗಳಿಗೆ ಈ ಆಧಾರ್ ಲಿಂಕ್ ಕಡ್ಡಾಯ ವಾಗಿ ಮಾಡ ಬೇಕಾಗುತ್ತದೆ. ಆಧಾರ್ ನಲ್ಲಿ ವ್ಯಕ್ತಿಯ ಎಲ್ಲ ವಿವರ ದಾಖಲೆಗಳು ಒಳಗೊಂಡಿರುವುದರಿಂದ ಈ ನಂಬರ್ ‌ಇದ್ದರೆ ಸಾಕು ವ್ಯಕ್ತಿಯ ಎಲ್ಲ ವೈಯಕ್ತಿಕ ವಿವರ ಮಾಹಿತಿ ಸಿಗಲಿದೆ.

ಮೊಬೈಲ್ ಲಿಂಕ್ ಕಡ್ಡಾಯ:

 

Image Source: IndiaTimes

 

advertisement

ಅದೇ ರೀತಿ ಆಧಾರ್ ಸಂಖ್ಯೆ (Aadhaar Number) ಗೆ ಮೊಬೈಲ್ ಲಿಂಕ್ ಮಾಡುವುದು ಸಹ ಇಂದು ಕಡ್ಡಾಯ ವಾಗಿದೆ. ಇಂದು ಸಿಮ್ ಖರೀದಿ (SIM Purchase) ಮಾಡುವಾಗ ಮೊಬೈಲ್ ಲಿಂಕ್ ಸಹ ಮಾಡಲಾಗುತ್ತದೆ. ಇಂದು ಟೆಲಿಕಾಂ ಇಲಾಖೆಯು ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ ಸಂಸ್ಥೆಯು ಸಿಮ್ ಹಾಗೂ ಆಧಾರ್ ಸಂಖ್ಯೆ ಜೋಡಣೆ ಅಕ್ರಮದ ಬಗ್ಗೆ ಎಚ್ಚರಿಕೆ ವಹಿಸಿದ್ದು ಗ್ರಾಹಕರಿಗೆ ಕೆಲವೊಂದು ಸಲಹೆ ನೀಡಿದೆ.‌ ಮೊಬೈಲ್ ಬಳಕೆದಾರರು ತಮ್ಮ ಆಧಾರ್‌ನಲ್ಲಿ ನೋಂದಾಯಿಸಲಾದ ಸಿಮ್ ಕಾರ್ಡ್‌ (SIM Card) ಗಳನ್ನು ಪರಿಶೀಲಿಸಲು ಅವಕಾಶ ಕೂಡ ಮಾಡಿ‌ಕೊಟ್ಟಿದೆ

ಎಷ್ಟು ನಂ ಲಿಂಕ್ ಮಾಡಬಹುದು:

 

Image Source: HT Tech

 

ನಿಯಮಗಳ ಪ್ರಕಾರ ಒಬ್ಬ ವ್ಯಕ್ಯಿಯು ಒಂದು ಆಧಾರ್ ಕಾರ್ಡ್‌ (Aadhaar Card) ಜೊತೆಗೆ 9 ಮೊಬೈಲ್ ಸಂಖ್ಯೆಗಳನ್ನು (SIM Card) ಮಾತ್ರ ನೀಡಲು ಸಾಧ್ಯವಿದೆ. ಹಾಗಾಗಿ ಈ ನಿಯಮದ ಬಗ್ಗೆಯು‌ ನೀವು ತಿಳಿದುಕೊಂಡಿರಬೇಕು.

ಪರಿಶೀಲನೆ ಹೇಗೆ?

ಮೊದಲಿಗೆ ನೀವು tafcop.dgtelecom.gov.in. ಲಿಂಕ್ ಗೆ ತೆರಳಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ಸೈನ್ ಇನ್ ಹಾಗಿ. ನಿಮ್ಮ ಮೊಬೈಲ್ ಗೆ OTP ಬರಲಿದ್ದು ಇದನ್ನು ನಮೂದಿಸಿ ನಂತರ ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ನೀಡಿದರೆ ಅಲ್ಲಿ ಲಿಂಕ್ ಆದ ಸಂಖ್ಯೆ ಕಾಣ ಸಿಗಲಿದೆ. ಆಗ ಪರಿಶೀಲನೆ ವೇಳೆಯಲ್ಲಿ ಬಳಕೆ ಇಲ್ಲದ ಸಂಖ್ಯೆಗಳನ್ನು ನೀವು ತೆಗೆದು ಸಹ ಹಾಕಬಹುದು.

advertisement

Leave A Reply

Your email address will not be published.