Karnataka Times
Trending Stories, Viral News, Gossips & Everything in Kannada

New Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ನಿಯಮ ಚೇಂಜ್! ಈ ದಾಖಲೆಗಳು ಅಗತ್ಯ

advertisement

ಇಂದು ರೇಷನ್ ಕಾರ್ಡ್ ಇದ್ದರೆ ಸರಕಾರದಿಂದ ಅನೇಕ ರೀತಿಯ ಸೌಲಭ್ಯ ಗಳು ದೊರೆಯಲಿದೆ. ಬಡ ವರ್ಗದ ಜನತೆಯ ಹಸಿವು ನೀಗಿಸಲು ಆಹಾರ ಇಲಾಖೆಯು ರೇಷನ್ ಕಾರ್ಡ್ ಅನ್ನು ಮೂರು ವಿಧಗಳಾಗಿ ವಿಂಗಡಣೆ ಮಾಡಿದ್ದು ವ್ಯಕ್ತಿಯ ಆದಾಯ ದ ಮೇರೆಗೆ ಈ ಕಾರ್ಡ್ ವಿತರಣೆ ಯಾಗಲಿದೆ.‌ಇಂದು ಗ್ಯಾರಂಟಿ ಯೋಜನೆಗಳ ಬಳಕೆಗೂ ಈ ರೇಷನ್ ಕಾರ್ಡ್ (Ration Card) ಕಡ್ಡಾಯ ವಾಗಿದ್ದು ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಹೆಚ್ಚಿನ ಜನರು ಕಾಯುತ್ತಿದ್ದರು.‌ಸರಕಾರ ಇದಕ್ಕಾಗಿ ಅವಕಾಶ ‌ಕೂಡ ಮಾಡಿ ಕೊಟ್ಟಿದ್ದು ಎಪ್ರಿಲ್ ಒಂದರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಸಿಕ್ಕಿದೆ.

ಮತ್ತೆ ಅರ್ಜಿ ಹಾಕಬಹುದು:

ಹೊಸ ರೇಷನ್ ಕಾರ್ಡ್ (New Ration Card) ಪಡೆಯಲು ಅರ್ಜಿ ಸಲ್ಲಿಕೆ ಮಾಡಲು ಮತ್ತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅವಕಾಶ ಕೂಡ ನೀಡಿದೆ. ಹಾಗಾಗಿ ಯಾರೆಲ್ಲ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿಲ್ಲ ಮತ್ತೆ ಅರ್ಜಿ ಹಾಕಬಹುದು.‌ ಜೂನ್ ಮೊದಲ ವಾರದಲ್ಲಿ ಹೊಸ‌ ಪಡಿತರ ಚೀಟಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಅರ್ಜಿ ಹಾಕಲು ಈ ದಾಖಲೆಗಳು ಅಗತ್ಯವಾಗಿ ಬೇಕು:

 

Image Source: News Next Live

 

advertisement

  • ಮತದಾನದ ಚೀಟಿ
  • ಆಧಾರ್ ಕಾರ್ಡ್
  • ಜನನ ಪ್ರಮಾಣ ಪತ್ರ
  • ಡ್ರೈವಿಂಗ್ ಲೈಸೆನ್ಸ್
  • ಪೋಟೋ
  • ಮೊಬೈಲ್ ಸಂಖ್ಯೆ
  • ಸ್ವಯಂ ಘೋಷಿತ ಪ್ರಮಾಣ ಪತ್ರ

ಹೀಗೆ ಅರ್ಜಿ ಸಲ್ಲಿಕೆ ಮಾಡಿ:

ಮೊದಲಿಗೆ‌ ನೀವು ಆಹಾರ‌ ಇಲಾಖೆಯ ವೆಬ್ ಸೈಟ್ kar.nic.in ಇಲ್ಲಿಗೆ ತೆರಳಿ, ನಂತರ ಇ-ಸೇವೆಗಳು ಎನ್ನುವ ಆಪ್ಚನ್ ‌ಇರಲಿದ್ದು ಇ- ಪಡಿತರ ಚೀಟಿ ಆಯ್ಕೆ ಇರಲಿದೆ. ಬಳಿಕ‌ ಇಲ್ಲಿ ನೂತನ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸೋ ಲಿಂಕ್ ಸಿಗಲಿದ್ದು ನಿಮ್ಮ‌ ಹೆಸರು ವಿಳಾಸ, ಜಿಲ್ಲೆ,ಗ್ರಾಮ ಇತ್ಯಾದಿ ಅಲ್ಲಿ ಕೇಳುವಂತ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. ನಂತರದಲ್ಲಿ ನೀವು ಬಿಪಿಎಲ್ (BPL) ಅಥವಾ ಎಪಿಎಲ್ ಕಾರ್ಡ್ (APL Card) ಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಾ ಎನ್ನುವುದನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಕೇಳಲಾದ ದಾಖಲೆಗಳನ್ನು ಅಪ್ ಲೋಡ್ ಮಾಡಿ‌.

ಅರ್ಹತೆ ಏನು?

ಹೊಸದಾಗಿ ರೇಷನ್ ಕಾರ್ಡ್ (New Ration Card) ಗೆ ಅರ್ಜಿ ಸಲ್ಲಿಕೆ ಮಾಡಲು ಕರ್ನಾಟಕದ ಖಾಯಂ ನಿವಾಸಿಗಳು ಆಗಿದ್ದರೆ ಅರ್ಜಿ ಸಲ್ಲಿಸಬಹುದು.ಒಂದು ಲಕ್ಷಕ್ಕಿಂತ ಕುಟುಂಬದ ವಾರ್ಷಿಕ ಆದಾಯವು ಕಡಿಮೆ ಇದ್ದಾಗ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಹಾಕಬಹುದು‌.ಇನ್ನು ಹೊಸದಾಗಿ ಮದುವೆಯಾಗಿರುವಂತಹ ದಂಪತಿಗಳು ಪ್ರತ್ಯೇಕ ಮನೆ ಮಾಡಿದ್ದರೆ ಪ್ರತ್ಯೇಕ ವಾಸಿಸುತ್ತಿದ್ದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.‌ಈಗಾಗಲೇ ರೇಷನ್ ಕಾರ್ಡ್ ಇದ್ದವರು ಮತ್ತೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

advertisement

Leave A Reply

Your email address will not be published.