Karnataka Times
Trending Stories, Viral News, Gossips & Everything in Kannada

Profitable Crop: ಅಡಿಕೆ ಬದಲು ಈ ಕೃಷಿ ಮಾಡಿ ವರ್ಷಕ್ಕೆ 16-17ಲಕ್ಷ ಗಳಿಸುತ್ತಿರುವ ರೈತ

advertisement

ಕೆಲಸವೇ ಇಲ್ಲದೆ ನಿರುದ್ಯೋಗ ಸ್ಥಿತಿ ತಲುಪುವುದಕ್ಕಿಂತಲೂ ಸ್ವ ಉದ್ಯಮ ಅಥವಾ ಉದ್ಯೋಗ ಮಾಡಬಹುದು. ಈ ನಿಟ್ಟಿನಲ್ಲಿ ಕಡಿಮೆ ಬಂಡವಾಳದಲ್ಲಿಯೂ ಅಧಿಕ ಆದಾಯ ಪಡೆಯಲು ನೀವು ಇಚ್ಛಿಸಿದ್ದಲ್ಲಿ ಕೃಷಿ ನಿಮ್ಮ ನೆರವಿಗೆ ಬರಲಿದೆ. ಕೃಷಿ ಮಾಡಬಹುದು ಆದರೆ ಯಾವ ಕೃಷಿ ಮಾಡುವುದು ಎನ್ನುವ ಗೊಂದಲ ಇದ್ದವರು ಒಮ್ಮೆ ಈ ಗಿಡ ನೆಟ್ಟು ಪೋಷಣೆ ಮಾಡಿದರೆ ಅನೇಕ ವರ್ಷಗಲ ತನಕ ನಿರಂತರ ಆದಾಯ ನಿಮಗೆ ಸಿಗಲಿದೆ. ಹಾಗಾದರೆ ಆ ಗಿಡ ಯಾವುದು, ಎಲ್ಲಿ ಹೆಚ್ಚು ಬೇಡಿಕೆ ಇದೆ ಎಂದು ತಿಳಿಯಲು ಈ ಮಾಹಿತಿಯನ್ನು ತಪ್ಪದೇ ಕೊನೆ ತನಕ ಓದಿ.

ಇಂದು ಕೃಷಿ ಸಾಲಿನಲ್ಲಿ ವಾಣಿಜ್ಯ ಬೆಳೆಯ ಸಾಲಿಗೆ ಲವಂಗ ಸೇರಲಿದೆ. ಹಾಗಾಗಿ ಲವಂಗ ಬೆಳೆಗೆ ರಾಷ್ಟ್ರೀಯ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದ ವರೆಗೂ ಬೇಡಿಕೆ ಇದೆ ಅದೇ ರೀತಿ ಕರ್ನಾಟಕದಲ್ಲಿ ಬೆಳೆದ ಲವಂಗಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಕೂಡ ಇದೆ. ಲವಂಗ ಒಮ್ಮೆ ಫಸಲು ನೀಡಲು ಪ್ರಾರಂಭ ಮಾಡಿದರೆ ಅನೇಕ ವರ್ಷ ನಿಮಗೆ ಅಧಿಕ ಲಾಭ ಸಿಗಲಿದೆ. ಹಾಗಾಗಿ ನೀವು ಕೂಡ ಕಡಿಮೆ ಬಂಡವಾಳ ವಿನಿಯೋಗ ಮಾಡಿ ಈ ಕೃಷಿ (Clove Cultivation) ಮಾಡಬಹುದು.

ಗಿಡ ಎಲ್ಲಿ ಸಿಗಲಿದೆ?

 

Image Source: Pinterest

 

ಈ ಒಂದು ಲವಂಗ ಗಿಡವು ಬಹುತೇಕ ನರ್ಸರಿಯಲ್ಲಿ ನಿಮಗೆ ಸಿಗಲಿದೆ. ಇದು ಸಾಂಬಾರು ಪದಾರ್ಥಗಳ ಬೆಳೆಯಲ್ಲಿ ಒಂದಾಗಿದ್ದು ಕರ್ನಾಟಕದ ಯಾವುದೆ ಭಾಗದ ನರ್ಸರಿಯಲ್ಲಿ ನೀವು ಇದನ್ನು ಖರೀದಿ ಮಾಡಬಹುದು. 10×10 ಅಡಿಯ ಅಂತರದಲ್ಲಿ ಈ ಒಂದು ಲವಂಗ ಗಿಡವನ್ನು ನೀವು ನೆಡಬಹುದಾಗಿದೆ. ಇದಕ್ಕೆ ನೆರಳು ಮತ್ತು ಬಿಸಿಲಿನ ಸಮಾನ ಪೋಷಣೆ ಅಗತ್ಯ ಇದ್ದು ಅಡಿಕೆ ತೋಟದಲ್ಲಿ ಸಾವಯವ ಕೃಷಿ ಆಗಿ ಇದನ್ನು ನೀವು ಬಳಕೆ ಮಾಡಬಹುದು.

advertisement

ಎಕರೆಗೆ ಎಷ್ಟು ಗಿಡ ನೆಡಬಹುದು:

 

Image Source: Plantura Magazin

 

ಒಂದು ಎಕರೆ ಅಡಿಕೆ ತೋಟ (Arecanut Plantation) ಇದ್ದರೆ ಅದರಲ್ಲಿ ಸಾವಯವ ಕೃಷಿಯಾಗಿ ಲವಂಗ ಕೃಷಿ ಮಾಡುವವರು 200 ಗಿಡ ನೆಡಬಹುದು. ಅದೇ ರೀತಿ ಪೂರ್ತು ಲವಂಗವನ್ನೇ ಕೃಷಿ (Clove Cultivation) ಮಾಡುವೆ ಎನ್ನುವವರು ಒಂದು ಎಕರೆಗೆ 400 ಗಿಡ ನೆಡಬಹುದು. ಇದರಲ್ಲಿ ನಿಮಗೆ 1kg ಲವಂಗದ ಮೇಲೆ 600-700 ರೂಪಾಯಿ ಆದಾಯ ಸಿಗಲಿದೆ.

ಒಂದು ಮರದಲ್ಲಿ 7-10 kg ತನಕ ಇಳುವರಿ ನಿಮಗೆ ಸಿಗಲಿದೆ. ಇದಕ್ಕೆ ಹೆಚ್ಚಿನ ನೀರಿನ ಮತ್ತು ಗೊಬ್ಬರದ ಪೋಷಣೆ ಕಡಿಮೆ ಇದ್ದರೂ ಕೂಡ ಸಾಕಾಗಲಿದೆ. ಇದರ ಗಿಡ ಬಹಳ ಸೂಕ್ಷ್ಮವಾಗಿದ್ದು ನೆಡುವಾಗ ಸ್ವಲ್ಪ ಜಾಗೃತಿ ವಹಿಸಿದರೆ ಸಾಕಾಗಲಿದೆ. ಲವಂಗ ಗಿಡ ಅಥವಾ ಮರದ ಕೆಳಗೆ ಹಸಿರು ಕೃತಕ ಹಾಸು ಮಾಡಿದರೆ ಲವಂಗ ತಾನಾಗೆ ಉದುರುವಾಗ ಅಲ್ಲಿ ಶೇಖರಣೆ ಆಗಲಿದೆ. ಆಗ ನಿಮಗೆ ಹೆಚ್ಚುವರಿ ಆಳುಗಳ ಅಗತ್ಯ ಬೀಳಲಾರದು.

ಎಷ್ಟು ಆದಾಯ ಪಡೆಯಬಹುದು?

ಒಂದು ಎಕರೆ ಬಾಳೆ ಜೊತೆಗೆ 400 ಲವಂಗ ಸಸಿ ನೆಡಬಹುದಿದ್ದು ಒಮ್ಮೆ ಒಂದು ಗಿಡದಿಂದ 7-8kg ಫಸಲು ಬಂದ ಬಳಿಕ ಅದರ ತೊಟ್ಟು ಎಲ್ಲವನ್ನು ಸರಿಯಾಗಿ ಸ್ವಚ್ಛ ಮಾಡಿ ಸರಿಯಾಗಿ ಡ್ರೈ ಮಾಡಿದರೆ ಆಗ ನಿಮಗೆ 600-700 ರೂಪಾಯಿ ಕೆಜಿಗೆ ಸಿಗಲಿದೆ. ವರ್ಷಕ್ಕೆ ಒಮ್ಮೆ ಫಸಲು ಸಿಗಲಿದ್ದು ಎಕರೆ ಮೇಲೆ 16-17 ಲಕ್ಷ ರೂಪಾಯಿ ತನಕವೂ ಆದಾಯ ಪಡೆಯಬಹುದು. ಇದಕ್ಕೆ ಹೆಚ್ಚಿನ ಖರ್ಚು ಆಗಲಾರದು 4ವರ್ಷಕ್ಕೊಮ್ಮೆ ಗೊಬ್ಬರ ಹಾಗೂ ದಿನಕ್ಕೆ ಅಥವಾ ಎರಡು ದಿನಕ್ಕೆ ಒಮ್ಮೆ ಡ್ರಿಪ್ ಸಿಸ್ಟಂ ಮೂಲಕ ನೀರು ಬಿಡಬೇಕು.

advertisement

Leave A Reply

Your email address will not be published.