Karnataka Times
Trending Stories, Viral News, Gossips & Everything in Kannada

PAN Card: ನೀವು ಪಡೆಯದ ಸಾಲ ನಿಮ್ಮ ಪಾನ್ ಕಾರ್ಡ್ ಗೆ ಲಿಂಕ್ ಆಗಿದೆಯೇ? ಕೂಡಲೇ ಈ ವೆಬ್ ಸೈಟ್ ನಲ್ಲಿ ವಿವರಗಳನ್ನು ಪರೀಕ್ಷಿಸಿ!

advertisement

ಇಂದಿನ ಡಿಜಿಟಲ್ ಯುಗದಲ್ಲಿ ಕ್ರೆಡಿಟ್ ಕಾರ್ಡ್ (Credit Card), ಡಿಜಿಟಲ್ ಲೋನ್ (Digital Loan) ಹಾಗೂ ಡಿಜಿಟಲ್ ಮನಿ (Digital Money) ಸಾಮಾನ್ಯವಾಗಿದೆ. ನಾವು ಈ ತರಹದ ಕ್ರೆಡಿಟ್ ಕಾರ್ಡ್ (Credit Card) ಅಪ್ಲೈ ಮಾಡಬೇಕಾದರೆ ಅಥವಾ ಡಿಜಿಟಲ್ ಲೋನ್ ಪಡೆಯಬೇಕಾದರೆ ನಮ್ಮ ಪಾನ್ ಕಾರ್ಡ್ (PAN Card) ಅನ್ನು ಬಹಳ ಕಡೆ ಕೊಟ್ಟಿರುತ್ತೇವೆ. ಪಾನ್ ಕಾರ್ಡ್ ಸಿಕ್ಕ ಮಾತ್ರಕ್ಕೆ ನಮ್ಮ ಅಕೌಂಟ್ ನಿಂದ ಯಾರೂ ಹಣವನ್ನು ತೆಗೆಯಲು ಸಾಧ್ಯವಿಲ್ಲದೆ ಇದ್ದರೂ ನಮ್ಮ ಪಾನ್ ಕಾರ್ಡ್ ಆಧಾರದ ಮೇಲೆ ಯಾರಾದರೂ ಸಾಲ ಪಡೆದಿದ್ದರೆ ನಮಗೆ ಹೇಗೆ ತಿಳಿಯಬೇಕು ? ಇದಕ್ಕೆ ಒಂದು ಉಪಾಯ ಇದೆ ಹೇಗೆ ಮುಂದೆ ನೋಡೋಣ.

ನಾವು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಲು ಏಜೆಂಟ್ ಗಳ ಕೈಯಲ್ಲಿ ಕೊಟ್ಟ ಪಾನ್ ಕಾರ್ಡ್ ನ ವಿವರಗಳು ಹಲವರ ಕೈ ಸೇರಿರುತ್ತವೆ. ಅದರಲ್ಲಿ ಯಾರಾದರೂ ವಂಚಕರು ಇದ್ದಲ್ಲಿ ನಮ್ಮ ಕಾರ್ಡ್ ಬಳಸಿ ಸಾಲಕ್ಕೆ ಅಪ್ಲೈ ಮಾಡಬಹುದು. ಈ ತರಹದ ಹಲವು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವರದಿ ಆಗಿರುವುದರಿಂದ ನಮ್ಮ ಪಾನ್ ಕಾರ್ಡ್ ನ ಆಧಾರದಲ್ಲಿ ಯಾರಾದರೂ ಸಾಲ ಪಡೆದಿದ್ದಾರೆಯೇ ಎಂದು ಪರಿಶೀಲಿಸುವುದು ಅಗತ್ಯ.

ಸಿಬಿಲ್ ಸ್ಕೊರ್ (CIBIL Score) ನ ವೆಬ್ ಸೈಟ್ ಗೆ ಹೋಗಿ ನಮ್ಮ ಚಾಲ್ತಿ ಸಾಲಗಳನ್ನು ನಾವು ನೋಡಬಹುದು. ಅದರಲ್ಲಿ ನಾವು ಪಡೆಯದೆ ಇರುವ ಸಾಲ (Loan) ಯಾವುದಾದರೂ ಇದ್ದರೆ ಅದನ್ನು ಕೂಡಲೇ ವರದಿ ಮಾಡಬಹುದು. ಹೇಗೆ ಪರಿಶೀಲಿಸಬಹುದು ಹಂತ ಹಂತವಾಗಿ ನೋಡೋಣ.

 

CIBIL Score ವೆಬ್ ಸೈಟ್ ಗೆ ಭೇಟಿ ನೀಡಿ:

advertisement

ಸಿಬಿಲ್ ನ ಅಧಿಕೃತ ವೆಬ್ಸೈಟ್ ಆದ ಸಿಬಿಲ್ ಡಾಟ್ ಕಾಮ್ ಗೆ ಭೇಟಿ ನೀಡಬೇಕು. ಅಲ್ಲಿ ಗೆಟ್ ಯುವರ್ ಸಿಬಿಲ್ ಸ್ಕೋರ್ (CIBIL Score) ಅಂದರೆ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಪಡೆಯಿರಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ನಮ್ಮ ಮೊಬೈಲ್ ನಂಬರ್ (Mobile Number), ಜನ್ಮ ದಿನಾಂಕ ಇಮೇಲ್ ಐಡಿ (Email ID) ಮತ್ತಿತರ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಲಾಗಿನ್ ಗಾಗಿ ಪಾಸ್ವರ್ಡ್ ಮತ್ತು ಐಡಿ ಆಯ್ಕೆಯ ಸಮಯದಲ್ಲಿ ಆದಾಯ ತೆರಿಗೆಯ ಐಡಿಯನ್ನು ಆಯ್ಕೆ ಮಾಡಿಕೊಳ್ಳಿ.

Account Verify ಮಾಡಿ:

ಇದಾದ ಮೇಲೆ Verify Your Identity ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ ಅಲ್ಲಿ ಮಾಹಿತಿಯನ್ನು ನೀಡಿ ಶುಲ್ಕವನ್ನು ಪಾವತಿಸಬೇಕು. ನಮ್ಮ ಇಮೇಲ್ ಐಡಿಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದಾಗ ನಮ್ಮ ಮುಂದೆ ಒಂದು ಫಾರ್ಮ್ ಕಾಣಿಸಿಕೊಳ್ಳುತ್ತದೆ. ಅದನ್ನು ಭರ್ತಿ ಮಾಡಿದ ಮೇಲೆ ನಮ್ಮ ಪಾನ್ ಕಾರ್ಡ್ ನ ಆಧಾರದಲ್ಲಿ ಎಷ್ಟು ಸಾಲಗಳು ಇವೆ ಎಂಬುದು ತಿಳಿಯುತ್ತದೆ.

ನೀವು ಪಡೆಯದ ಸಾಲ ಇದ್ದಲ್ಲಿ ದೂರು ದಾಖಲಿಸಿ:

ಇದರಲ್ಲಿ ನಾವು ಅಪ್ಲೈ ಮಾಡಿದ ಅಥವಾ ಪಡೆದ ಸಾಲದ ವಿವರ ಯಾವುದಾದರೂ ಇದ್ದಲ್ಲಿ ಅಂತಹ ಸಾಲ ವಿವರಗಳ ಬಗ್ಗೆ ಕೂಡಲೇ ಐಟಿ ಇಲಾಖೆಗೆ ದೂರು ನೀಡಬೇಕಾಗುತ್ತದ. ಆದಾಯ ತೆರಿಗೆ ವೆಬ್ ಸೈಟ್ ನಲ್ಲಿ ಈ ಆಯ್ಕೆ ಲಭ್ಯ ಇದೆ.

advertisement

Leave A Reply

Your email address will not be published.