Karnataka Times
Trending Stories, Viral News, Gossips & Everything in Kannada

Driving License: ಟ್ರಾಫಿಕ್ ಪೊಲೀಸರು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಜಪ್ತಿ ಮಾಡಿದ್ರೆ ಅದನ್ನು ಹಿಂಪಡೆಯುವುದು ಹೇಗೆ ಗೊತ್ತಾ?

advertisement

ನಾವು ರಸ್ತೆಯಲ್ಲಿ ವಾಹನ ಚಲಾಯಿಸುವಾಗ ರಸ್ತೆಯ ನಿಯಮಗಳನ್ನು ಪಾಲನೆ ಮಾಡಲೇಬೇಕು. ಒಂದು ವೇಳೆ ರಸ್ತೆ ನಿಯಮ ಪಾಲನೆ ಮಾಡದೆ ಇದ್ದಲ್ಲಿ ಆ ಟ್ರಾಫಿಕ್ ಪೊಲೀಸ್ ಅಥವಾ ಸಂಬಂಧಪಟ್ಟ ಇಲಾಖೆ ನಮ್ಮ ಮೇಲೆ ಕ್ರಮ ಕೈಗೊಳ್ಳಬಹುದು.

ಟ್ರಾಫಿಕ್ ರೂಲ್ಸ್ (Traffic Rules) ಫಾಲೋ ಮಾಡದೇ ಇದ್ದರೆ ದೊಡ್ಡ ಪ್ರಮಾಣದಲ್ಲಿ ದಂಡ ತರಬೇಕಾಗುತ್ತದೆ. ಎಷ್ಟೋ ಪ್ರಕರಣಗಳಲ್ಲಿ ಚಾಲನಾ ಪರವಾನಿಗೆಯನ್ನು ಕೂಡ ರದ್ದುಪಡಿಸಲಾಗುತ್ತದೆ. ಪ್ರತಿಯೊಂದು ನಿಯಮ ಉಲ್ಲಂಘನೆಗೆ ಇಂತಿಷ್ಟು ಎಂದು ದಂಡ ನಿಗದಿಪಡಿಸಲಾಗಿದೆ. ಅಷ್ಟು ದಂಡವನ್ನು ಪಾವತಿಸಿದರೆ ಮಾತ್ರ ಟ್ರಾಫಿಕ್ ಪೊಲೀಸ್ ನಿಮ್ಮ ಬಳಿ ತೆಗೆದುಕೊಂಡಿದ್ದ ಡ್ರೈವಿಂಗ್ ಲೈಸೆನ್ಸ್ (Driving License) ಹಿಂದಿರುಗಿಸಬಹುದು.

ಟ್ರಾಫಿಕ್ ರೂಲ್ಸ್ ಪಾಲಿಸುವುದು ಕಡ್ಡಾಯ:

ವಾಹನ ಚಲಾಯಿಸುವ ಪ್ರತಿಯೊಬ್ಬರಿಗೂ ಇದು ಗೊತ್ತಿರುವ ವಿಚಾರ. ಸಾಕಷ್ಟು ಸಂದರ್ಭಗಳಲ್ಲಿ ಟ್ರಾಫಿಕ್ ನಿಯಮಗಳನ್ನು (Traffic Rules) ಉಲ್ಲಂಘನೆ ಮಾಡಿ ವಾಹನ ಚಲಾಯಿಸುತ್ತಾರೆ. ಕುಡಿದು ವಾಹನ ಚಲಾಯಿಸುವುದು, ಹೆಲ್ಮೆಟ್ (Helmet) ಇಲ್ಲದೆ ದ್ವಿಚಕ್ರ ವಾಹನ ಓಡಿಸುವುದು, ಸಿಗ್ನಲ್ ಬ್ರೇಕ್ (Signal Break) ಮಾಡುವುದು ಹೀಗೆ ಸಾಕಷ್ಟು ರೂಲ್ಸ್ ಗಳನ್ನು ಬ್ರೇಕ್ ಮಾಡುವವರು ಇದ್ದಾರೆ. ಇಂತಹ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಟ್ರಾಫಿಕ್ ಪೊಲೀಸ್ ಸ್ಥಳದಲ್ಲಿಯೇ ನಿಮ್ಮ ಡ್ರೈವಿಂಗ್ ಲೈಸೆನ್ಸ್ (Driving License) ಮುಟ್ಟುಗೋಲು ಹಾಕಿಕೊಳ್ಳಬಹುದು.

 

advertisement

 

ಚಾಲನಾ ಪರವಾನಿಗೆ ಹಿಂಪಡೆಯುವುದು ಹೇಗೆ?

ಒಂದು ವೇಳೆ ಟ್ರಾಫಿಕ್ ಪೊಲೀಸ್ (Traffic Police) ನಿಮ್ಮ ಡ್ರೈವಿಂಗ್ ಲೈಸೆನ್ಸ್ (Driving License) ಅಥವಾ ಚಾಲನ ಪರವಾನಿಗೆ ತೆಗೆದುಕೊಂಡಿದ್ದರೆ ಅದನ್ನು ಹಿಂಪಡೆಯುವುದು ಹೇಗೆ ಎನ್ನುವ ಗೊಂದಲ ಉಂಟಾಗಬಹುದು. ಇತ್ತೀಚಿನ ದಿನಗಳಲ್ಲಿ ಚಾಲನಾ ಪರವಾನಿಗೆ ಹಿಂಪಡೆದುಕೊಳ್ಳುವ ವಿಚಾರದಲ್ಲಿ ಸಾಕಷ್ಟು ವಂಚನೆಗಳು ಕೂಡ ನಡೆಯುತ್ತಿವೆ. ಬ್ರೋಕರ್ಗಳು ಚಾಲನಾ ಪರವಾನಿಗೆ ಕೊಡಿಸುತ್ತೇವೆ ಎಂದು ಹೇಳಿ ಬಾರಿ ಪ್ರಮಾಣದಲ್ಲಿ ಹಣ ವಸೂಲಿ ಮಾಡಬಹುದು.

ಆದರೆ ಕಾನೂನು ಬದ್ಧವಾಗಿ ನಿಮ್ಮ ಚಾಲನಾ ಪರವಾನಿಗೆಯನ್ನು ಹಿಂಪಡೆಯುವುದು ಹೇಗೆ ಎಂಬುದನ್ನು ನಾವು ತಿಳಿಸಿಕೊಡುತ್ತಿದ್ದೇವೆ. ನಿಮ್ಮ ಚಾಲನಾ ಪರವಾನಿಗೆ ಮುಟ್ಟುಗೋಲು ಹಾಕಿಕೊಂಡಿದ್ದರೆ ನೀವು ನ್ಯಾಯಾಲಯದಲ್ಲಿ ಅದನ್ನು ಹಿಂಪಡೆಯಬಹುದು. ನೀವು ನ್ಯಾಯಾಲಯಕ್ಕೆ ಹೋಗಿ ಸೂಕ್ತ ಕಾರಣಗಳನ್ನು ನೀಡಿ ನಿಮ್ಮ ಚಾಲನಾ ಪರವಾನಿಗೆ ಹಿಂಪಡೆಯಲು ಸಾಧ್ಯವಿದೆ. ನಿಮಗೆ ದಂಡ ವಿಧಿಸಲಾಗಿದ್ದರೆ ಅದನ್ನು ಪಾವತಿ ಮಾಡಬೇಕು. ಇಲ್ಲಿ ದಂಡ ಕಡಿಮೆ ಆಗುವ ಸಾಧ್ಯತೆಯು ಇರುತ್ತದೆ. ಒಂದು ವೇಳೆ ಚಾಲನಾ ಪ್ರಮಾಣದಲ್ಲಿ ಅಮಾನತ್ತು ಕೊಂಡಿದ್ದರೆ ಮೂರು ತಿಂಗಳ ನಂತರ ಆರ್ ಟಿ ಓ ಕಚೇರಿಯಲ್ಲಿ ಚಾಲನಾ ಪರವಾನಿಗಿ ಹಿಂಪಡೆಯಬಹುದು.

advertisement

Leave A Reply

Your email address will not be published.