Karnataka Times
Trending Stories, Viral News, Gossips & Everything in Kannada

ATM: ಅಕೌಂಟ್ ನಲ್ಲಿ ಹಣ ಕಡಿತವಾಗಿ ಎ.ಟಿ.ಎಂ ನಲ್ಲಿ ಹಣ ಬಾರದೇ ಇದ್ದಾಗ ಏನು ಮಾಡಬೇಕು?

advertisement

ಈಗ ಡಿಜಿಟಲ್ ಯುಗ ನಡೆಯುತ್ತಿದೆ. UPI Paymets ಮತ್ತು Digital Payments ಆರಂಭವಾದ ನಂತರ ಭಾರತದ ಜನರಿಗೆ ಇದು ಪೇಮೆಂಟ್ ನ ಸುಲಭವಾದ ಮಾರ್ಗವಾಗಿದೆ. ಹೆಚ್ಚಿನ ಜನ ಈ ಪೇಮೆಂಟ್ ಆಯ್ಕೆಗಳನ್ನೇ ಪಾಲಿಸುತ್ತಿದ್ದಾರೆ ಅಕೌಂಟ್ ನಲ್ಲಿ ಹಣ ಇದ್ದರೆ ಯಾರ ಅಕೌಂಟಿಗೆ ಆಗಿದ್ದರೂ ಅಥವಾ ಯಾವುದೇ ಅಂಗಡಿಗಳಲ್ಲಿ ಪೇಮೆಂಟ್ ಮಾಡುವುದು ಕೂಡ ಈಗ ಬಹಳ ಸುಲಭ ಆಗಿದೆ.

ಎಷ್ಟೇ UPI – Digital ಯುಗ ಮುಂದುವರೆದರೂ ಕ್ಯಾಷ್ ನ ಅಗತ್ಯ ಕಡಿಮೆ ಆಗುವುದಿಲ್ಲ. ಇಂದಿಗೂ ಹಲವಾರು ಮಂದಿ ಕ್ಯಾಷ್ ಅಥವಾ ನಗದಿನ ಮೂಲಕ ವಹಿವಾಟು ನಡೆಸುತ್ತಾರೆ. ಇನ್ನೂ ಹಲವಾರು ಮಂದಿ ಯುಪಿಐಗಳನ್ನು ಆಕ್ಟಿವೇಟ್ ಮಾಡಿಕೊಂಡಿದ್ದರೂ ಕೂಡ ಅವರಿಗೆ ಇಷ್ಟದ ಪೇಮೆಂಟ್ ವಿಧಾನ ನಗದಿನ ಮೂಲಕ ನೀಡುವುದಾಗಿರುತ್ತದೆ.

ಇದೇ ಕಾರಣದಿಂದಾಗಿ ಇಂದಿಗೂ ಭಾರತದಲ್ಲಿ ಹಲವಾರು ಎಟಿಎಂ ಗಳು ಚಾಲ್ತಿಯಲ್ಲಿದ್ದು ಇದರ ಜೊತೆಗೆ ಹೊಸ ATM ಗಳು ಕೂಡ ಸೇರುತ್ತ ಬಂದಿದೆ. ಎಟಿಎಂ ಕಾರ್ಡ್ ಮೂಲಕ ಹಣ ಪಡೆದುಕೊಳ್ಳುವುದು ಕೂಡ ಬಹಳಷ್ಟು ಸುಲಭವಾದ ದಾರಿಯೆಯಾಗಿದೆ. ಬ್ಯಾಂಕಿಗೆ ಭೇಟಿ ನೀಡದೆ ATM Machine ಗಳಿಂದ ನಮಗೆ ಎಲ್ಲಿ ಬೇಕೋ ಅಲ್ಲಿ ಹಣ ಪಡೆಯಬಹುದು. ಇದಕ್ಕೆ ನಮ್ಮ ಅಕೌಂಟ್ ಇರುವ ಬ್ಯಾಂಕ್ ನ ಎಟಿಎಂ ಆಗಿರಬೇಕು ಎಂದೇನಿಲ್ಲ. ದೊಡ್ಡ ಮೊತ್ತದ ಹಣ ಬೇಕು ಎಂದಾಗ ಮಾತ್ರ ಬ್ಯಾಂಕಿಗೆ ಭೇಟಿ ನೀಡಬೇಕು ಅಥವಾ ನಮ್ಮ ಬ್ಯಾಂಕ್ ನ ಎಟಿಎಂ ಗಳನ್ನೇ ಹುಡುಕಬೇಕಾಗುತ್ತದೆ.

ಹಣ ಡೆಬಿಟ್ ಆಗಿ ATM ನಿಂದ ಹಣ ಬಾರದೇ ಇದ್ದರೆ ?

 

advertisement

 

ಹೀಗೆ ATM ನಿಂದ ಹಣವನ್ನು ಪಡೆಯುವಾಗ ಒಂದು ವೇಳೆ ಹಣ ಬರದೆ ಹೋದರೆ ಏನು ಮಾಡಬೇಕು ನಿಮಗೆ ತಿಳಿದಿದೆಯೇ ? ಎಟಿಎಂ ಕೂಡ ಒಂದು ಯಂತ್ರವೇ ಆಗಿತ್ತು ಹೆಚ್ಚಿನ ಸಂದರ್ಭಗಳಲ್ಲಿ ಸರಿಯಾದ ಅಮೌಂಟ್ ನೀಡಿದರೂ ಕೆಲವೊಂದು ಬಾರಿ ಯಂತ್ರದಿಂದ ಕೂಡ ತಪ್ಪಾಗುವ ಸಾಧ್ಯತೆ ಇದೆ. ಹೀಗೆ ಯಂತ್ರದಿಂದ ತಪ್ಪಾದಾಗ ಹಣವನ್ನು ನಮ್ಮ ಅಕೌಂಟ್ಗೆ ಕಡಿತಗೊಳಿಸಿ ನಮ್ಮ ಕೈಗೆ ಯಾವುದೇ ಹಣ ಬರದೇ ಇರುವ ಸಾಧ್ಯತೆಗಳು ಇದೆ.

ಒಂದು ವೇಳೆ ನಿಮ್ಮ ಜೊತೆಯೂ ಹೀಗೆ ಆದರೆ ಅಂತಹ ಸಮಯದಲ್ಲಿ ನೀವು ಏನು ಮಾಡಬೇಕು ಎಂದು ನಾವು ಹೇಳಲಿದ್ದೇವೆ. ಮೊದಲನೆಯದಾಗಿ ಅಂತಹ ಸಂದರ್ಭದಲ್ಲಿ ಬಹಳ ತಾಳ್ಮೆಯಿಂದ ಇರಬೇಕು. ನಿಮ್ಮ ಹಣ ಖಂಡಿತ ವಾಪಸ್ಸು ನಿಮ್ಮ ಕೈ ಸೇರುತ್ತದೆ. ಹಲವು ಬಾರಿ ಯಂತ್ರಗಳು ಆಗಿರುವ ಸಮಸ್ಯೆಯನ್ನು ಗುರುತಿಸಿ ಅದನ್ನು ಸರಿಪಡಿಸಿ ನಮ್ಮ ಅಕೌಂಟ್ ಗೆ ಹಣವನ್ನು ಕೂಡಲೇ ಹಿಂದಿರುಗಿಸುತ್ತಾರೆ.

ಒಂದು ವೇಳೆ ಹೀಗೆ ಸ್ವಲ್ಪ ಹೊತ್ತು ಕಾದ ಬಳಿಕ ಹಣ ಬಾರದೆ ಇದ್ದಲ್ಲಿ ಆಗ ಅಲ್ಲಿರುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕಾಗುತ್ತದೆ. ಅಲ್ಲಿರುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನೀವು ದೂರು ದಾಖಲಿಸಬಹುದಾಗಿದೆ. ಯಾವ ದಿನದ ಯಾವ ಸಮಯದಲ್ಲಿ ನಿಮ್ಮ ಯಾವ ಬ್ಯಾಂಕಿನಿಂದ ಹಣ ಕಡಿತವಾಗಿದೆ ಎಂಬೆಲ್ಲ ಮಾಹಿತಿಗಳನ್ನು ಕರೆ ಮಾಡಿ ನೀಡಿದಾಗ, ಬ್ಯಾಂಕ್ ದೂರು ದಾಖಲು ಮಾಡಿಕೊಳ್ಳುತ್ತದೆ. ಇದರ ಬಗ್ಗೆ ತನಿಖೆ ನಡೆಸಿ ನಿಮ್ಮ ಹಣವನ್ನು ನಿಮ್ಮ ಬ್ಯಾಂಕಿಗೆ ವಾಪಸ್ ವರ್ಗಾವಣೆ ಮಾಡಲಾಗುತ್ತದೆ.

advertisement

Leave A Reply

Your email address will not be published.