Karnataka Times
Trending Stories, Viral News, Gossips & Everything in Kannada

LPG Cylinder: ಇನ್ಮುಂದೆ LPG ಸಿಲಿಂಡರ್ ಮನೆ ಬಾಗಿಲಿಗೆ ಬರಲಿದೆ, ಹೊಸ ಸೌಲಭ್ಯ ಆರಂಭ!

advertisement

LPG Cylinder ಇಂದು ಪ್ರತಿ ಭಾರತೀಯನಿಗೂ ಅಗತ್ಯವಾದ ವಸ್ತು ಎಂದು ಹೇಳಿದರೂ ತಪ್ಪಾಗಲಾರದು. ಸೌದೆ ಒಲೆ ಬಳಸುವುದು ಪರಿಸರಕ್ಕೆ ಹಾನಿ ಹಾಗೂ ಆರೋಗ್ಯಕ್ಕೂ ಹಾನಿ ಎಂಬ ವಿಚಾರ ತಿಳಿದ ಕಾರಣದಿಂದ ಕೇಂದ್ರ ಸರಕಾರವು ಕಡಿಮೆ ಹಣಕ್ಕೆ ಸಬ್ಸಿಡಿ ಆಧಾರಿತ LPG Cylinder ನೀಡಲು ಮುಂದಾಗಿದ್ದು ಈ ಉಜ್ವಲ್ ಯೋಜನೆ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿತ್ತು ಇದೀಗ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಗ್ರಾಹಕರ ಹಿತಾಸಕ್ತಿಗಾಗಿ ನೂತನ ಕ್ರಮ ಜಾರಿಗೆ ತರಲು ಮುಂದಾಗಿದೆ.

ನೂತನ ವ್ಯವಸ್ಥೆ:

ಭಾರತ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್ ಮೂಲಕ ಗ್ರಾಹಕರಿಗೆ ಪ್ಯೂರ್ ಫಾರ್ ಶ್ಯೂರ್ (Pure for Sure) ಎಂಬ ಸೌಲಭ್ಯ ನೀಡಲು ಮುಂದಾಗಲಾಗಿದೆ ಅಂದರೆ ದೇಶದಲ್ಲಿ ಇದೇ ಮೊದಲ ಬಾರಿಗೆ LPG ರ ಗುಣ ಮಟ್ಟ ಹಾಗೂ ಪ್ರಮಾಣವನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಇದಾಗಿದೆ ಎನ್ನಬಹುದು. ಹಾಗಾಗಿ ಕಂಪೆನಿ ಹೆಚ್ಚು ಖಚಿತ ಮಾಹಿತಿಯನ್ನೇ ತನ್ನ ಗ್ರಾಹಕರಿಗೆ ನೀಡುವ ಉದ್ದೇಶವನ್ನು ಹೊಂದಿರುವುದು ಕಾಣಬಹುದು.

ಸಿಲಿಂಡರ್ ಖಾತರಿಗೆ ಕ್ರಮ:

 

 

advertisement

ಅನೇಕ ಬಾರಿ ಸಿಲಿಂಡರ್ ಬುಕ್ ಮಾಡುವವರ ಬದಲಿಗೆ ಬೇರೆ ಅವರು ಸಿಲಿಂಡರ್ ಅನ್ನು ಪಡೆದು ಮೋಸ ಮಾಡುವುದು ಸಹ ಇತ್ತೀಚಿನ ದಿನದಲ್ಲಿ ಅಧಿಕವಾಗುತ್ತಿದೆ ಹಾಗಾಗಿ ಇದನ್ನು ತಡೆಗಟ್ಟಲು ಈ ನೂತನ ಕ್ರಮ ಬಹಳ ಅನುಕೂಲ ಆಗಲಿದೆ. ಗ್ರಾಹಕರ ಮನೆ ಬಾಗಿಲಿಗೆ LPG Cylinder ತಲುಪಿದ ಬಳಿಕ ಟ್ಯಾಂಪರ್ ಪ್ರೂಫ್ ಸೀಲ್ ಕೂಡ ಸಿಲಿಂಡರ್ ಹೊಂದಿರಲಿದೆ. ಈ ಮೂಲಕ ಉತ್ಪಾದನ ಘಟಕದಿಂದ ನೇರವಾಗಿ ಗ್ರಾಹಕರಿಗೆ ಸಿಲಿಂಡರ್ ದೊರೆತದ್ದು ಖಾತರಿ ಆಗಲಿದೆ.

ನಿಕಟ ಮಾಹಿತಿ:

ಅಷ್ಟು ಮಾತ್ರವಲ್ಲದೇ ಸಿಲಿಂಡರ್ ಬಗ್ಗೆ ಯಾವುದೇ ವಿಧವಾಗಿ ಅನುಮಾನ ಇದ್ದರೆ ಬಗೆ ಹರಿಸಲು ಕೂಡ ಕ್ರಮ ಕೈಗೊಳ್ಳಲಾಗಿದೆ. ಒಂದು ಕ್ಯೂ ಆರ್ ಕೋಡ್ ನೀಡಲಾಗುತ್ತದೆ ಅದನ್ನು ನೀವು ಸ್ಕ್ಯಾನ್ ಮಾಡಿದ್ದ ಬಳಿಕ ನಿಮಗೆ ಪ್ಯೂರ್ ಫಾರ್ ಶೂರ್ (Pure for Sure) ಸೇವೆ ಸಿಗಲಿದೆ. ಅಂದರೆ ಭರ್ತಿ ಆಗಿದ್ದ ಸಿಲಿಂಡರ್ ಕಡಿಮೆ ತೂಕ ಇದೆ ಎಂಬ ಅನೇಕ ಅನುಮಾನ ಇದ್ದರೆ ಸಿಲಿಂಡರ್ ತೂಕ ಎಷ್ಟು?, ಭರ್ತಿ ಮಾಡಿದ್ದ ಪ್ರಮಾಣ ಎಷ್ಟು?, ಸೀಲ್ ಇದಯೇ?, ಇತ್ಯಾದಿ ವಿವರಣೆ ನಿಮಗೆ ಸಿಗಲಿದೆ ಇದು ಸಿಲಿಂಡರ್ ದೃಢೀಕರಣ ಮಾಡಲು ಬಹಳ ಉಪಯೋಗಕಾರಿಯಾಗಲಿದೆ‌.

ಹೆಚ್ಚು ಪಾರದರ್ಶಕ ವ್ಯವಸ್ಥೆ:

ಸಿಲಿಂಡರ್ ಬಗ್ಗೆ ಕೂಡ ನಿಕಟ ಮಾಹಿತಿ ನೀಡುವ ಕಾರಣ ಈ ಒಂದು ವ್ಯವಸ್ಥೆಯಲ್ಲಿ ಅಧಿಕ ಪಾರದರ್ಶಕತೆ ಜಾರಿಗೆ ತರಲು ಕಂಪೆನಿ ಮುಂದಾಗಿದೆ. ಇದರಿಂದಾಗಿ ಗ್ರಾಹಕರಿಗೆ ಕೂಡ ಕಂಪೆನಿ ಮೇಲೆ ಧೃಡ ನಂಬಿಕೆ , ವಿಶ್ವಾಸ ನೆಲೆಯಾಗಲಿದೆ. ಅಷ್ಟು ಮಾತ್ರವಲ್ಲದೇ ಅಕ್ರಮ ಸಿಲಿಂಡರ್ ಫಿಲ್ಲಿಂಗ್ ನಡೆಯುತ್ತಿದ್ದರೆ ಅಂತವುಗಳಿಗೂ ಕೂಡ ಕಡಿವಾಣ ಬಿದ್ದಂತಾಗುವುದು.

advertisement

Leave A Reply

Your email address will not be published.