Karnataka Times
Trending Stories, Viral News, Gossips & Everything in Kannada

Gold Rate: ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ, ಚಿನ್ನದ ಬೆಲೆಯಲ್ಲಿ ಇಳಿಕೆ!

advertisement

ಇಂದು ಚಿನ್ನ ಎಂಬುದು ಹೂಡಿಕೆಯ ಮುಖ್ಯ ಭಾಗ, ಮುಂದಿನ ದಿನದಲ್ಲಿ ಈ ವಸ್ತುವಿಗೆ ಬಹಳಷ್ಟು ಬೇಡಿಕೆ ಇದ್ದೆ ಇರುತ್ತದೆ. ಹಾಗಾಗಿ ಹೆಚ್ಚಿನ ಜನರು ಚಿನ್ನವನ್ನು ಹೂಡಿಕೆಯ ಭಾಗವಾಗಿ ಖರೀದಿ ಮಾಡುತ್ತಾರೆ. ಅದೇ ರೀತಿ ಭಾರತದಂತಹ ದೇಶದಲ್ಲಿ ಹಬ್ಬ ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಪಾತ್ರ ಹೆಚ್ಚು ಇದೆ. ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರುತ್ತದೆ. ಇಂದು ಚಿನ್ನ ಪ್ರಿಯರ ಮುಖದಲ್ಲಿ ಕೊಂಚ ಮಂದಹಾಸ ಮೂಡಿಸಿದೆ.

ಬೆಲೆ ಇಳಿಕೆ

ಚಿನ್ನ‌ ಖರೀದಿ ಮಾಡೋರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಇಂದು ಫೆ.10 ರಂದು ಮತ್ತೆ ಚಿನ್ನದ ದರದಲ್ಲಿ ಅಲ್ಪ ಮಟ್ಟಿಗೆ ಇಳಿಕೆಯಾಗಿದ್ದು ಬೆಳ್ಳಿ ದರದಲ್ಲಿ ತುಸು ಏರಿಕೆಯಾಗಿದೆ.ದೇಶೀಯ ಮತ್ತು ಅಂತರಾಷ್ಟ್ರೀಯ ಬೆಲೆಯ ಆಧಾರದ ಮೇಲೆ ಚಿನ್ನದ ಬೆಲೆಯು ನಿಯಮಿತವಾಗಿ ಏರಿಳಿತಗೊಳ್ಳುತ್ತದೆ, ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆಗಳು ಏರಿಕೆಯಾಗಬಹುದು.

ಎಷ್ಟಾಗಿದೆ ಚಿನ್ನದ ಬೆಲೆ (Gold Rate) ?

ಬೆಂಗಳೂರಿನಲ್ಲಿ ಇಂದು ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ರೂ 5,790ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ರೂ 46,320 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು 57,900 ರೂ ಖರೀದಿಸಬಹುದು.ಇನ್ನೂ ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 58,390 ರೂ. ಆಗಿದ್ದು 24 ಕ್ಯಾರೆಟ್‌ಗೆ 63,710 ರೂ. ಆಗಿದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,900 ರೂ. 24 ಕ್ಯಾರೆಟ್‌ಗೆ 63,160 ರೂ. ಅದೇ ರೀತಿ ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 58,050 ರೂ. 24 ಕ್ಯಾರೆಟ್‌ಗೆ 63,310 ರೂ. ಆಗಿದೆ.

advertisement

ಬೆಳ್ಳಿ ಬೆಲೆ ಹೇಗಿದೆ?

ಇಂದು ಚಿನ್ನದಂತೆ ಬೆಳ್ಳಿಯು ಅಗತ್ಯ ವಸ್ತು ವಾಗಿದ್ದು ಬೇಡಿಕೆಯನ್ನು ಸಹ ಹೆಚ್ಚು ಮಾಡಿಕೊಂಡಿದೆ.ಹಾಗಾಗಿ ಶುಭ ಸಮಾರಂಭಗಳಿಗೆ ಬೆಳ್ಳಿಯು ಕೂಡ ಅಗತ್ಯವಾಗಿದ್ದು ಒಂದು ಗ್ರಾಂ ಬೆಳ್ಳಿಯ ಬೆಲೆ ರೂ 72, ಎಂಟು ಗ್ರಾಂ 576 ಮತ್ತು 10 ಗ್ರಾಂ 720ರಷ್ಟು ಆಗಿದೆ.

ಏರಿಕೆ ಸಾಧ್ಯತೆ

ಚಿನ್ನದ ಬೆಲೆ ಅಂತರಾಷ್ಟ್ರೀಯ ಮಟ್ಟದ ಬದಲಾವಣೆಗೂ ಸಹ ಸಾಧ್ಯತೆ ಆಗುತ್ತದೆ. ತಜ್ಞರ ಪ್ರಕಾರ ಚಿನ್ನದ ಬೆಲೆ ಇಂದು ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯಾಗುವುದು ಪಕ್ಕ ಎನ್ನಲಾಗಿದೆ.

advertisement

Leave A Reply

Your email address will not be published.