Karnataka Times
Trending Stories, Viral News, Gossips & Everything in Kannada

Blue Aadhaar Card: ನೀಲಿ ಆಧಾರ್ ಕಾರ್ಡ್ ಎಂದರೇನು? ಯಾವ ರೀತಿ ಅರ್ಜಿ ಸಲ್ಲಿಸಬೇಕು?

advertisement

ಆಧಾರ್ ಕಾರ್ಡ್ (Aadhaar Card) ಇಂದು ಪ್ರಮುಖವಾದ ದಾಖಲೆಯಾಗಿದ್ದು, ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಯಾವುದೇ ಸೌಲಭ್ಯ ಪಡೆಯಲು ಸಹ ಈ ಕಾರ್ಡ್ ಬೇಕು. ಇದು 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ಒಂದು ವ್ಯಕ್ತಿಯ ಸಂಪೂರ್ಣ ಹೆಸರು, ವಿಳಾಸ ಮತ್ತು ಜನ್ಮ ದಿನಾಂಕ ಸೇರಿದಂತೆ, ಪೋಷಕರ ಹೆಸರು, ನಾಗರಿಕರ ಬಗ್ಗೆ ಪ್ರಮುಖ ಮಾಹಿತಿಯನ್ನು ಹೊಂದಿರುತ್ತದೆ. ಅದೇ ರೀತಿ ಬ್ಲೂ ಕಾರ್ಡ್ ಕಾರ್ಡ್ (Blue Aadhaar Card) ನೀವು ಕೇಳಿರಬಹುದು. ಏನು ಈ ಬ್ಲೂ ಕಾರ್ಡ್ ಈ ಬಗ್ಗೆ ಮಾಹಿತಿ ಇಲ್ಲಿದೆ.

ಯಾರಿಗೆ ಈ ಕಾರ್ಡ್‌ ಮಾಡಿಸಲಾಗುತ್ತದೆ?

 

 

ಆಗಷ್ಟೇ ಹುಟ್ಟಿದ ಮಗುವಿನಿಂದ ಹಿಡಿದು 5 ವರ್ಷದವರೆಗಿನ ವಯಸ್ಸಿನ ಮಕ್ಕಳಿಗೆ ಬ್ಲೂ ಆಧಾರ್ ನೀಡಲಾಗುತ್ತದೆ. ಸಣ್ಣ ಮಕ್ಕಳ ಹೆಸರಿನಲ್ಲಿ ಸರ್ಕಾರದ ಯೋಜನೆಗಳು, ಸೌಲಭ್ಯ ಗಳು ದೊರಕುವುದರಿಂದ ಅದರ ಫಲಾನುಭವಿಗಳನ್ನು ಗುರುತಿಸಲು ಸಹಾಯವಾಗಲೆಂದು ಬ್ಲೂ ಕಾರ್ಡ್‌ ಅನ್ನು ಜಾರಿಗೆ ತರಲಾಗಿದೆ. ಮಕ್ಕಳಿಗೆ 15 ವರ್ಷವಾಗ್ತಿದ್ದಂತೆ ಮತ್ತೆ ಆಧಾರ್ ನವೀಕರಣ ಮಾಡಬೇಕಾಗುತ್ತದೆ.

ಬಯೋಮೆಟ್ರಿಕ್ ಮಾಹಿತಿ ಅಗತ್ಯವಿಲ್ಲ:

advertisement

ನೀಲಿ ಆಧಾರ್ ಕಾರ್ಡ್ (Blue Aadhaar Card), ಎಂಬುದು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾಡುವಂತಹ ಆಧಾರ್ ಕಾರ್ಡ್ (Aadhaar Card) ಆಗಿದ್ದು ಈ ಬ್ಲೂ ಆಧಾರ್ ಕಾರ್ಡ್‌ಗೆ ಮಗುವಿನಿಂದ ಯಾವುದೇ ಬಯೋಮೆಟ್ರಿಕ್ ಮಾಹಿತಿ ಬೇಕಾಗಿಲ್ಲ. ಬದಲಿಗೆ ಅವರ ಪೋಷಕರಲ್ಲಿ ಒಬ್ಬರ UID ಗೆ ಲಿಂಕ್ ಮಾಡಲಾದ ಮುಖದ ಛಾಯಾಚಿತ್ರವನ್ನು ಆಧರಿಸಿ ಈ ಕಾರ್ಡ್ ಮಾಡಲಾಗುತ್ತದೆ. ಮಗುವಿನ ಮುಖದ ಫೋಟೋ, ವಿಳಾಸ ಇತ್ಯಾದಿ ಮಾಹಿತಿ ಪಡೆಯಲಾಗುತ್ತದೆ.

ಅರ್ಜಿ ಸಲ್ಲಿಸಿ:

ಈ ನೀಲಿ ಆಧಾರ್ ಕಾರ್ಡ್ (Blue Aadhaar Card) ಪಡೆಯಲು ಮೊದಲಿಗೆ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಮಗುವಿನ ಜನ್ಮ ದಿನಾಂಕದ ಪುರಾವೆ ಜನನ ಪ್ರಮಾಣಪತ್ರ, ಮನೆಯ ವಿಳಾಸದ ಪುರಾವೆ, ತಾಯಿಯ ಆಧಾರ್ ಕಾರ್ಡ್, ವೋಟರ್ ಐಡಿ, ಇತ್ಯಾದಿ ಸಲ್ಲಿಸಿ ಆಧಾರ್ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ ಸ್ವೀಕೃತಿ ಚೀಟಿಯನ್ನು ಪಡೆಯಿರಿ.

ಯಾವ ರೀತಿ ಇರಲಿದೆ?

ಮಾಮೂಲಿಯ ಆಧಾರ್ ಕಾರ್ಡ್​ನಂತೆ ಬ್ಲೂ ಆಧಾರ್ ಕಾರ್ಡ್ ಕೂಡ 12 ಅಂಕಿಗಳ ಐಡಿ ಸಂಖ್ಯೆ ಹೊಂದಿರುತ್ತದೆ. ಬ್ಲೂ ಬಣ್ಣದಲ್ಲಿ ಇರಲಿದ್ದು ಮಗುವಿನ ಆಧಾರ್ ಡೇಟಾವು ಬೆರಳಚ್ಚುಗಳು ಮತ್ತು ಐರಿಸ್ ಸ್ಕ್ಯಾನ್ ನಂತಹ ಬಯೋಮೆಟ್ರಿಕ್ ಮಾಹಿತಿಯನ್ನು ಒಳಗೊಂಡಿರುವುದಿಲ್ಲ.

advertisement

Leave A Reply

Your email address will not be published.