Karnataka Times
Trending Stories, Viral News, Gossips & Everything in Kannada

Aadhaar Card: ಆಧಾರ್ ಕಾರ್ಡ್ ಸುರಕ್ಷಿತ ಬಗ್ಗೆ ಈ ನಿಯಮಗಳನ್ನು ತಪ್ಪದೆ ಪಾಲಿಸಿ!

advertisement

ಆಧಾರ್‌ ಕಾರ್ಡ್‌ (Aadhaar Card) ಪ್ರತಿ ಭಾರತೀಯ ಪ್ರಜೆಯ ಪ್ರಮುಖ ಗುರುತಿನ ಚೀಟಿ ಆಗಿದ್ದು ಎಲ್ಲೇ ಸರಕಾರಿ ಕಛೇರಿಗೂ ತೆರಳಿದ್ರೂ ಮೊದಲಿಗೆ ಕೇಳುವುದೇ ಈ ಆಧಾರ್ ಕಾರ್ಡ್, ಆಧಾರ್‌ ಕಾರ್ಡ್‌ ಮೂಲಕ ವಿಳಾಸ, ಮೊಬೈಲ್‌ ನಂಬರ್ ಸೇರಿದಂತೆ ಕೆಲವು ಮಾಹಿತಿ ಅಪ್‌ಡೇಟ್ ಮಾಡಬೇಕಾಗುತ್ತದೆ. ಆದೇ ರೀತಿ ಪ್ಯಾನ್ (PAN), ರೇಷನ್ ಕಾರ್ಡ್ (Ration Card), ಬ್ಯಾಂಕ್ ಖಾತೆ ಇತ್ಯಾದಿಗಳಿಗೂ ಲಿಂಕ್ ಮಾಡವುದು ಸಹ ಕಡ್ಡಾಯ ವಾಗಿದೆ.

ಆಧಾರ್ ವಂಚನೆ ಹೆಚ್ಚಳ:

 

 

ಅದರಲ್ಲೂ ಇಂದು ರಾಜ್ಯಾದ್ಯಂತ ನಾನಾ ರೀತಿಯಲ್ಲಿ ಆನ್‌ಲೈನ್ ವಂಚನೆ ಹೆಚ್ಚುತ್ತಿದೆ. ಈಗ ಆಧಾರ್ ಕಾರ್ಡ್ (Aadhaar Card) ಬಳಸಿ ಹಣ ಕದಿಯುವ ಖದೀಮರು ಹೆಚ್ಚಾಗಿದ್ದಾರೆ. ಕಾರ್ಡ್‌ನ ಬೆರಳಚ್ಚು ಹ್ಯಾಕ್‌ ಮಾಡಿ ಹಣ ದೋಚುತ್ತಾರೆ. ಇಂತಹ ಹಲವು ಪ್ರಕರಣಗಳು ಇಂದು ಕಂಡು ಬಂದಿದೆ. ಹಾಗಾಗಿ ಆಧಾರ್ ಸುರಕ್ಷಿತ ಇರುವ ಬಗ್ಗೆಯು ಎಚ್ಚೆತ್ತುಕೊಳ್ಳಬೇಕು. ಹಾಗಾಗಿ ಭಾರತೀಯ ನಿವಾಸಿಗಳು ತಮ್ಮ ಆಧಾರ್ ಮಾಹಿತಿಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ಅಪ್‌ಡೇಟ್‌ ಮಾಡುವುದು ಸಹ ಕಡ್ಡಾಯ ವಾಗಿದೆ.

advertisement

ಈ ನಿಯಮ ಪಾಲಿಸಬೇಕು:

UIDAI ಅಥವಾ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, ಆಧಾರ್ ಸುರಕ್ಷಿತ ವಿಚಾರವಾಗಿ ಹಲವು ಮಾಹಿತಿಗಳನ್ನು ನೀಡುತ್ತಿರುತ್ತದೆ, ಆಧಾರ್ ಸಂಖ್ಯೆ ಹೊಂದಿರುವವರಿಗೆ ಸುರಕ್ಷಿತ, ತಡೆರಹಿತ ಮತ್ತು ‌ ದೃಢೀಕರಣ ಪ್ರಕ್ರಿಯೆಯನ್ನು ಮಾಡುವಂತೆ ಈ ಬಗ್ಗೆಯು ಎಚ್ಚರಿಕೆ ನೀಡುತ್ತದೆ. ಆಧಾರ್ ಕಾಯಿದೆ ಮತ್ತು ಅದರ ನಿಯಮ ಪ್ರಕಾರ ಆಧಾರ್ ಸಂಖ್ಯೆಯನ್ನು ಸಂಗ್ರಹಿಸುವ ಸಂಸ್ಥೆ ಮಾಹಿತಿಯನ್ನು ಸುರಕ್ಷಿತವಾಗಿ ಮತ್ತು ಕಾನೂನು ಅವಶ್ಯಕತೆಗಳಿಗೆ ಅನುಗುಣವಾಗಿ ನಿರ್ವಹಿಸಬೇಕು ಎಂದು ಆದೇಶಿಸುತ್ತದೆ.

ಸುರಕ್ಷಿತ ರೀತಿ ಬಳಸಿ:

ನಿಮ್ಮ ಆಧಾರ್, ನಿಮ್ಮ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಪಾಸ್‌ಪೋರ್ಟ್, ವೋಟರ್ ಐಡಿ, ಪ್ಯಾನ್, ರೇಷನ್ ಕಾರ್ಡ್ ಮುಂತಾದ ಯಾವುದೇ ಗುರುತಿನ ದಾಖಲೆಯನ್ನು ಹಂಚಿಕೊಳ್ಳುವ ಸಮಯದಲ್ಲಿ ನೀವು ಎಚ್ಚರಿಕೆ ವಹಿಸಿ.

  • ಯಾವ ಉದ್ದೇಶಕ್ಕಾಗಿ ಆಧಾರ್ ಮಾಹಿತಿ ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
  • ಇನ್ನೂ UIDAI ವೆಬ್‌ಸೈಟ್ ಅಥವಾ m-Aadhaar ಅಪ್ಲಿಕೇಶನ್‌ ಮೂಲಕ ಕಳೆದ ಆರು ತಿಂಗಳಿನಿಂದ ಬಳಕೆ ಮಾಡಿದ ಆಧಾರ್ ದೃಢೀಕರಣ ಇತಿಹಾಸವನ್ನು ನೀವು ಪರಿಶೀಲನೆ ಮಾಡಬಹುದು.
  • ಇನ್ನೂ OTP ಆಧಾರಿತ ಆಧಾರ್ ದೃಢೀಕರಣದೊಂದಿಗೆ ಹಲವಾರು ಸೇವೆಗಳನ್ನು ಪಡೆಯಲು ಅವಕಾಶ ಇದ್ದು ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ನವೀಕರಣ ಮಾಡುವುದು ಉತ್ತಮ
  • ನಿಮ್ಮ ಆಧಾರ್‌ನ ಯಾವುದೇ ಅನಧಿಕೃತ ಬಳಕೆ, ಯಾವುದೇ ಆಧಾರ್ ಸಂಬಂಧಿತ ಪ್ರಶ್ನೆಯನ್ನು ಹೊಂದಿದ್ದರೆ, UIDAI ಯ ಟೋಲ್-ಫ್ರೀ ಸಹಾಯವಾಣಿ 1947 ನಲ್ಲಿ ಸಂಪರ್ಕಿಸಿ ಅಥವಾ 24*7 ಅಥವಾ [email protected] ನಲ್ಲಿ ಇಮೇಲ್ ಮಾಡಿ ಮಾಹಿತಿ ಪಡೆದುಕೊಳ್ಳಿ.

advertisement

Leave A Reply

Your email address will not be published.