Karnataka Times
Trending Stories, Viral News, Gossips & Everything in Kannada

Ration Card: ಪಡಿತರ ವಿತರಣೆಗೆ ನಿಯಮ ಬದಲಾವಣೆ, ಹೊಸ ನಿಯಮ ಯಾವುದೆಂದು ಈಗಲೇ ಪರಿಶೀಲಿಸಿ!

advertisement

ಇಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಬಳಿಕ ಬಿಪಿಎಲ್ (BPL Card) ಹಾಗೂ ಅಂತ್ಯೋದು ಕಾರ್ಡ್​​ (Antyodaya Card) ಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಈ ಕಾರ್ಡ್ ಅನ್ನು ಬಡವರ್ಗದ‌ ಜನತೆಗಾಗಿ ಜಾರಿಗೆ ತಂದಿದ್ದು ಆದ್ರೆ ಈ ಕಾರ್ಡ್ ಅನ್ನು ಇದೀಗ ದುರುಪಯೋಗ ಮಾಡುವ ಸಂಖ್ಯೆ ಯು ಹೆಚ್ಚಾಗಿದೆ.ಹೌದು ರಾಜ್ಯದಲ್ಲಿ ಅದೆಷ್ಟೋ ಜನ ಸಕಲ ಅನುಕೂಲಗಳು ಇದ್ದರೂ ಕೂಡ ಬಿಪಿಎಲ್ ಪಡಿತರ ಹೊಂದಿದ್ದಾರೆ.‌ ಇದೀಗ ಜಿಲ್ಲೆಯಲ್ಲಿ ಅನರ್ಹ ಬಿಪಿಎಲ್ ಕಾರ್ಡ್ (BPL Card) ಪತ್ತೆ ಹಚ್ಚೋ ಕಾರ್ಯ ಭರದಿಂದ ಸಾಗಿದೆ.

ಸುಳ್ಳು ದಾಖಲೆ ಹೆಚ್ಚಳ:

 

 

ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್‌ ಕಾರ್ಡ್‌ (BPL Card) ಪಡೆಯುತ್ತಿದ್ದಾರೆ. ಸರ್ಕಾರದ ಸೌಲಭ್ಯ ದ ಲಾಭಕ್ಕಾಗಿ ಬಿಪಿಎಲ್‌ ಕಾರ್ಡ್‌ ಅರ್ಜಿ ಸಲ್ಲಿಕೆಗಳು ಹೆಚ್ಚುತ್ತಿವೆ ಕೆಲವು ಕುಟುಂಬಗಳು ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್‌ (Ration Card) ಅನ್ನು ಕೂಡ ಹೊಂದಿದ್ದು ಇಂಥವರಿಗೆ ಸರ್ಕಾರ ಹೊಸ ನಿಯಮ ಜಾರಿಗೆ ತರಲಿದೆ. ಹಾಗಾಗಿ ಇನ್ಮುಂದೆ ರೇಷನ್ ಖರೀದಿ ‌ಮಾಡುದಾದ್ರೆ ಈ ನಿಯಮ ತಪ್ಪದೆ ಪಾಲಿಸಿ.

advertisement

ಪರಿಶೀಲನೆಗೆ ಸಿದ್ದತೆ:

ಸಾರ್ವಜನಿಕ ವಿತರಣಾ ಸೌಲಭ್ಯ ಗರೀಬ್ ಕಲ್ಯಾಣ್ ಯೋಜನೆ (Garib Kalyan Scheme) ಯನ್ನು ಹಲವಾರು ಜನರು ಉಪಯೋಗಿಸುತ್ತಿದ್ದು ಈ ಮೂಲಕ 5 ಲಕ್ಷ 40 ಸಾವಿರ ಕುಟುಂಬಗಳು ಅರ್ಹ ಕುಟುಂಬಗಳನ್ನು ಹೊಂದಿದ್ದು, 65 ಸಾವಿರ ಕುಟುಂಬಗಳು ಅಂತ್ಯೋದಯ ಪಡಿತರ ಚೀಟಿ (Ration Card) ಹೊಂದಿವೆ. ಇದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಅನರ್ಹರಾಗಿದ್ದು, ಆಸ್ತಿ (Property), ಕಾರು ಮಾಲೀಕರಾಗಿದ್ದರೂ ಗರೀಬ್ ಕಲ್ಯಾಣ್ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇದಕ್ಕಾಗಿ ಇನ್ಮುಂದೆ ರೇಷನ್ ಕಾರ್ಡ್ ವಿತರಣೆಗೆ ಸೂಕ್ತ ನಿಯಮವನ್ನು ಜಾರಿಗೆ ತರಲಾಗುತ್ತದೆ.‌ಅದೇ ರೀತಿ ಅನರ್ಹರನ್ನು ಗುರುತಿಸದ ಹಿನ್ನೆಲೆಯಲ್ಲಿ ಪೂರೈಕೆ ಇಲಾಖೆ ಇದೀಗ ಪರಿಶೀಲನೆಗೆ ಸಿದ್ಧತೆ ಆರಂಭಿಸಿದೆ.

ಈ ನಿಯಮ‌ ಅನ್ವಯ:

ಯಾರ ಹೆಸರಿನಲ್ಲಿ ಪಡಿತರ ಪಡೆಯುತ್ತಿದ್ದಿರೋ ಅವರೆಲ್ಲರ ಹೆಬ್ಬೆರಳಿನ ಗುರುತನ್ನು ಪಡೆಯಲಿದ್ದಾರೆ. ಮೊದಲ ತಿಂಗಳು, ಮನೆಯ ಒಬ್ಬ ಸದಸ್ಯನ ಹೆಬ್ಬೆರಳು ಪಡಿತರವನ್ನು ತೆಗೆದುಕೊಳ್ಳುತ್ತಾರೆ, ಆದರೆ ಎರಡನೇ ತಿಂಗಳಲ್ಲಿ ಇನ್ನೊಬ್ಬ ಸದಸ್ಯನ ಹೆಬ್ಬೆರಳು ಪಡಿತರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗೆ ಪ್ರತಿ ತಿಂಗಳು ಹೊಸ ಸದಸ್ಯರು ತಮ್ಮ ಹೆಬ್ಬೆರಳಿನ ಗುರುತನ್ನು ಹಾಕಿಕೊಂಡು ಒಬ್ಬೊಬ್ಬರಾಗಿ ಪಡಿತರ ತೆಗೆದುಕೊಳ್ಳುತ್ತಾರೆ. ಎಲ್ಲಾ ಮಾಹಿತಿ ಪರಿಶೀಲಿಸುವವರೆಗೆ ಈ ಈ ಕ್ರಮವು ಜಾರಿಯಲ್ಲಿರುತ್ತದೆ. ಈ ಹೊಸ ಪರಿಶೀಲನಾ ವ್ಯವಸ್ಥೆ ಆರಂಭಿಸಲು ಹೊಸ ಸದಸ್ಯರ ಹೆಬ್ಬೆಟ್ಟಿನ ಗುರುತಿನ ನಂತರವೇ ಪ್ರತಿ ತಿಂಗಳು ಪಡಿತರ ನೀಡುವ ಕಾರ್ಯ ನಡೆಯುತ್ತದೆ.

advertisement

Leave A Reply

Your email address will not be published.