Karnataka Times
Trending Stories, Viral News, Gossips & Everything in Kannada

Mobile Battery: ಮೊಬೈಲ್ ಬ್ಯಾಟರಿ ಬ್ಯಾಕ್ ಅಪ್ ಹೆಚ್ಚು ಬರಲು ಮೊಬೈಲ್ ನಲ್ಲಿ ಈ ಸೆಟ್ಟಿಂಗ್ ಆನ್ ಮಾಡಿಕೊಳ್ಳಿ!

advertisement

ಮೊಬೈಲ್ ಫೋನ್ ಹೊಸದಾಗಿದ್ದಾಗ ಎಲ್ಲಾ ಫೀಚರ್ಸ್ ಗಳು ಚೆನ್ನಾಗಿರುತ್ತವೆ. ಬ್ಯಾಟರಿ ಕೂಡ. ಒಂದು ಬಾರಿ ಚಾರ್ಜ್ ಮಾಡಿದರೆ ದಿನ ಪೂರ್ತಿ ಬರುವಷ್ಟು ಬ್ಯಾಟರಿ ಇರುತ್ತದೆ. ಆದರೆ ಮೊಬೈಲ್ ಸ್ವಲ್ಪ ಹಳೆಯದಾಗುತ್ತಿದ್ದಂತೆ ಬ್ಯಾಟರಿ ಬ್ಯಾಕಪ್ ಸಮಸ್ಯೆ ಸಾಮಾನ್ಯವಾಗಿ ಎಲ್ಲರೂ ಅನುಭವಿಸುವಂತಹ ಸಮಸ್ಯೆಯಾಗಿದೆ.

ಹೀಗೆಂದು ಹೊಸ ಮೊಬೈಲ್ ಖರೀದಿಸಲು ಸಾಧ್ಯವಿಲ್ಲ. ನಿಮ್ಮ ಹಳೆ ಮೊಬೈಲ್ನಲ್ಲೇ ಉತ್ತಮ ಬ್ಯಾಟರಿ ಬ್ಯಾಕಪ್ (Mobile Battery Backup) ಬೇಕು ಎಂದಾದಲ್ಲಿ ನೀವು ಈ ಕೆಳಗಿನ ಕೆಲವು ಸೆಟ್ಟಿಂಗ್ಗಳನ್ನು ಬದಲಾಯಿಸಬಹುದು. ಇದರ ಮೂಲಕ ನಿಮ್ಮ ಹಳೆ ಮೊಬೈಲ್ ಕೂಡ ಉತ್ತಮವಾಗಿ ಬ್ಯಾಟರಿ ಬ್ಯಾಕಪ್ ನೀಡುವಂತಾಗುತ್ತದೆ. ಹಾಗಾದರೆ ಆ ಸೆಟ್ಟಿಂಗ್ ಗಳನ್ನು ಈಗ ನೋಡೋಣ.

 

 

Screen Time Settings:

ನಿಮ್ಮ ಮೊಬೈಲ್ ಒಂದು ಬಾರಿ ಅನ್ಲಾಕ್ ಮಾಡಿ ನೀವು ಹಾಗೆಯೇ ಇಟ್ಟರೆ ಎಷ್ಟು ಕಾಲ ಸ್ಕ್ರೀನ್ (Call Screen) ಆನ್ ಇರಬೇಕು ಎನ್ನುವುದನ್ನು ನಿರ್ಧರಿಸುತ್ತದೆ. ನೀವು ಏನನ್ನಾದರೂ ಓದುತ್ತಿದ್ದೀರಿ ಎಂದು ಮಾತ್ರದಲ್ಲಿ ನಿಮಗೆ ಸಾಮಾನ್ಯವಾಗಿ ಹೆಚ್ಚಿನ ಸ್ಕ್ರೀನ್ ಟೈಮ್ ಬೇಕಾಗುತ್ತದೆ ಇಲ್ಲದಿದ್ದಲ್ಲಿ ಸ್ಕ್ರೀನ್ ಟೈಂ (Screen Time) ನ ಅಗತ್ಯ ಅಷ್ಟೊಂದು ಇರುವುದಿಲ್ಲ. ನೀವು ಅನ್ಲಾಕ್ ಮಾಡಿ ಹಾಗೆ ಫೋನ್ ಇಟ್ಟರೂ ಕೂಡ 15 ಸೆಕೆಂಡ್ಸ್ ಗಳಲ್ಲಿ ಸ್ಕ್ರೀನ್ ಆಫ್ ಆಗುವಂತೆ ಮಾಡಿದರೆ ನಿಮ್ಮ ಬ್ಯಾಟರಿ ಉತ್ತಮ ಬ್ಯಾಕಪ್ ನೀಡುತ್ತದೆ.

Screen Brightness:

advertisement

ನೀವು ಹೊರಾಂಗಣದಲ್ಲಿ ಇದ್ದೀರಿ, ನೇರವಾದ ಸೂರ್ಯನ ಬೆಳಕು ಮೊಬೈಲ್ ಮೇಲೆ ಬೀಳುತ್ತಿದೆ ಎಂದ ಮಾತ್ರದಲ್ಲಿ ತುಂಬಾ ಹೆಚ್ಚಿನ ಸ್ಕ್ರೀನ್ ಬ್ರೈಟ್ ನೆಸ್ (Screen Brightness) ಬೇಕಾಗುತ್ತದೆ. ನೀವು ಮನೆಯ ಒಳಗಡೆ ಇದ್ದಾಗ ಹೆಚ್ಚಿನ ಸ್ಕ್ರೀನ್ ಬ್ರೈಟ್ನೆಸ್ ಬಳಸುವುದು ಕಣ್ಣುಗಳ ದೃಷ್ಟಿಯಿಂದಲೂ ಬ್ಯಾಟರಿ ಬ್ಯಾಕಪ್ ದೃಷ್ಟಿಯಿಂದಲೂ ಅಷ್ಟೊಂದು ಉತ್ತಮವಲ್ಲ. ಹೀಗಾಗಿ ಒಳಗಡೆ ಕಡಿಮೆ ಬ್ರೈಟ್ನೆಸ್ ಇಟ್ಟು ಮೊಬೈಲ್ಅನ್ನು ಬಳಕೆ ಮಾಡಿ. ಇನ್ನು ಮೊಬೈಲ್ ನಲ್ಲಿ ಆಟೋಮೆಟಿಕ್ ಬ್ರೈಟ್ನೆಸ್ ಸೆಟ್ಟಿಂಗ್ ಇರುತ್ತದೆ. ಇದನ್ನು ನೀವು ಆನ್ ಮಾಡಿದಲ್ಲಿ ಹೊರಗಡೆ ಹೋದಾಗ ಹೆಚ್ಚಿನ ಬ್ರೈಟ್ನೆಸ್ ಬಂದು ಒಳಗಡೆ ಬರುತ್ತಿದ್ದಂತೆ ಬ್ರೈಟ್ನೆಸ್ ತನ್ನಿಂದಾನೆ ಕಡಿಮೆಯಾಗುತ್ತದೆ.

Keyboard Sound and Vibration:

ಕೆಲವರಿಗೆ ಕೀಬೋರ್ಡ್ ಟೈಪ್ ಮಾಡಬೇಕಾದರೆ ಅದರ ಸೌಂಡ್ ಇಷ್ಟವಾಗುತ್ತದೆ ಅದೇ ರೀತಿ ವೈಬ್ರೇಶನ್ ಕೂಡ. ಆದರೆ ಈ ಸೆಟ್ಟಿಂಗ್ ಗಳು ಹೆಚ್ಚಿನ ಬ್ಯಾಟರಿಯನ್ನು ತೆಗೆದುಕೊಳ್ಳುವುದರಿಂದ ಈ ಸೆಟ್ಟಿಂಗ್ಗಳನ್ನು ಆಫ್ ಮಾಡಿದಾಗ ಬ್ಯಾಟರಿ ಉತ್ತಮ ಬಾಳಿಕೆ ಬರುತ್ತದೆ.

App Management:

ಯಾವ ಆಪ್ ಗಳು ಹೆಚ್ಚಿನ ಬ್ಯಾಟರಿಯನ್ನು ಬಳಸುತ್ತಿವೆ ಎಂಬುದು ನಿಮಗೆ ಆಪ್ ಮಾನೇಜ್ ಮೆಂಟ್ ನಲ್ಲಿ ಗೊತ್ತಾಗುತ್ತೆ. ಅಂತಹ ಆಪ್ ಗಳನ್ನು ಬಳಕೆಯಲ್ಲಿ ಇಲ್ಲದೇ ಇದ್ದಾಗ ಕ್ಲೋಸ್ ಮಾಡುತ್ತ ಬಂದಲ್ಲಿ ಬ್ಯಾಟರಿ ಚೆನ್ನಾಗಿ ಬಾಳಿಕೆ ನೀಡುತ್ತದೆ.

Dark Theme:

ಇತ್ತೀಚೆಗೆ ಎಲ್ಲಾ ಮೊಬೈಲ್ಗಳಲ್ಲಿಯೂ ಡಾರ್ಕ್ ಥೀಮ್ (Dark Theme) ಲಭ್ಯವಿದೆ. ಇದು ಸ್ಕ್ರೀನ್ ಕಲರ್ ಅನ್ನು ಕಪ್ಪು ಬಣ್ಣಕ್ಕೆ ಪರಿವರ್ತನೆ ಮಾಡಿ ಅಕ್ಷರಗಳನ್ನು ಮಾತ್ರ ಬಿಳಿಯ ಬಣ್ಣದಲ್ಲಿ ಇಡುತ್ತದೆ. ಹೆಚ್ಚಿನ ಸ್ಕ್ರೀನ್ ಕಪ್ಪು ಬಣ್ಣದ್ದು ಆಗಿರುವುದರಿಂದ ಸ್ಕ್ರೀನ್ ಗೆ ಬೇಕಾಗುವ ಬ್ಯಾಟರಿ ಬಳಕೆ ಕಮ್ಮಿಯಾಗುತ್ತದೆ.

advertisement

Leave A Reply

Your email address will not be published.