Karnataka Times
Trending Stories, Viral News, Gossips & Everything in Kannada

Income Tax: ಗಂಡ, ಹೆಂಡತಿ, ತಂದೆ ಮತ್ತು ಮಗನ ನಡುವಿನ ನಗದು ವಹಿವಾಟು ಮಾಡುವವರು ತೆರಿಗೆಯ ಈ ನಿಯಮ ತಿಳಿದುಕೊಳ್ಳಿ.

advertisement

ಕಳೆದ ಕೆಲವು ವರ್ಷದಿಂದ ಹಣದುಬ್ಬರ ಮತ್ತು ಜೀವನ ವೆಚ್ಚ ಗಣನೀಯವಾಗಿ ಹೆಚ್ಚಿದ್ದು ಖರ್ಚು ವೆಚ್ಚಗಳು ಕೂಡ ಹೆಚ್ಚಾಗಿವೆ. ಹಾಗೇ ಪ್ರತಿಯೊಬ್ಬರು ತೆರಿಗೆ (Tax) ಪಾವತಿ ಮಾಡುವುದು ಸಹ ಕಡ್ಡಾಯವಾಗಿದೆ. ಆದಾಯ ತೆರಿಗೆ (Income Tax) ಎಂಬುದು ಸರ್ಕಾರವು ತಮ್ಮ ವ್ಯಾಪ್ತಿಯಲ್ಲಿರುವ ವ್ಯವಹಾರ ಮತ್ತು ವ್ಯಕ್ತಿ ಗಳಿಕೆ ಮಾಡುವಂತಹ ಆದಾಯದ ಮೇಲೆ ವಿಧಿಸುವ ಒಂದು ರೀತಿಯ ತೆರಿಗೆ ಇದಾಗಿದೆ.

ಪಾವತಿ ಮಾಡುವ ಮೊತ್ತ:

ಇದನ್ನು ವೈಯಕ್ತಿಕ ಆದಾಯನ್ನು ವ್ಯಕ್ತಿಯ ವೇತನ, ಮತ್ತು ಇತರ ರೀತಿಯ ಆದಾಯ ಪರಿಗಣಿಸಿ ವಿಧಿಸಲಾಗುತ್ತದೆ. ತೆರಿಗೆ ಎನ್ನುವುದು ಆಯಾ ಆದಾಯದ ಮೂಲಕ ಕಟ್ಟಬೇಕಾಗುತ್ತದೆ. ಆಸ್ತಿ ಮಾಲಿಕರು ತಮ್ಮ ಆಯಾ ಪುರಸಭೆ ಅಥವಾ ಸ್ಥಳೀಯ ಸರ್ಕಾರಿ ಸಂಸ್ಥೆಗಳಿಗೆ ಪಾವತಿಸುವ ಹಣದ ಮೊತ್ತವಾಗಿದೆ. ಪ್ರತಿಯೊಬ್ಬರೂ ಕೂಡ ಈ ಆದಾಯ ತೆರಿಗೆ ಪಾವತಿ ಮಾಡುವುದು ಕಡ್ಡಾಯವಾಗಿದೆ.

Cash Transaction Tax:

 

advertisement

 

ಅದೇ ರೀತಿ ನಗದು ವಹಿವಾಟಿನ (Cash Transaction) ಮೇಲೂ ಆದಾಯ ತೆರಿಗೆ ಸೂಚನೆ ಬರಬಹುದೇ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಹೌದು ನಿಮ್ಮ ಕುಟುಂಬದಲ್ಲಿ ನೀವು ಎಷ್ಟು ನಗದು ವಹಿವಾಟು ಮಾಡಬಹುದು ಎಂಬ ಮಿತಿಯು ಇದೆ. ಅದೇ ರೀತಿ ಆದಾಯ ತೆರಿಗೆ (Income Tax) ನಿಯಮದಂತೆ ಗಂಡ, ಹೆಂಡತಿ, ತಂದೆ ಮತ್ತು ಮಗನ ನಡುವಿನ ನಗದು ವಹಿವಾಟಿನ (Cash Transaction) ಆದಾಯ ತೆರಿಗೆ ಮಿತಿ‌ ಹೇಗೆ ಎಂದು ನೋಡುದಾದ್ರೆ ಪತಿಯು ಮನೆ ಖರ್ಚಿಗೆ ಪ್ರತಿ ತಿಂಗಳು ಹಣವನ್ನು ನೀಡುದಾದ್ರೆ ಅಥವಾ ಹಣವನ್ನು ಉಡುಗೊರೆಯಾಗಿ ನೀಡಿದರೆ, ಆಗ ಹೆಂಡತಿ ಆದಾಯ ತೆರಿಗೆಗೆ ಹೊಣೆಯಾಗುವುದಿಲ್ಲ. ಈ ಎರಡೂ ರೀತಿಯ ಮೊತ್ತ ಗಂಡನ ಆದಾಯವೆಂದು ಪರಿಗಣಿಸಲಾಗುತ್ತದೆ.

ಈ ನಿಯಮ ಇದೆ:

ಆದರೆ ಹೆಂಡತಿ ಹಣವನ್ನು ಎಲ್ಲೋ ಹೂಡಿಕೆ ಮಾಡಿ ಅದರಿಂದ ಆದಾಯವನ್ನು ಪಡೆದರೆ, ಆಗ ಆದಾಯದ ಮೇಲೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಆದಾಯ ತೆರಿಗೆಯ ಸೆಕ್ಷನ್ 269SS ಮತ್ತು 269T ಅಡಿಯಲ್ಲಿ, 20 ಸಾವಿರ ರೂ.ಗಿಂತ ಹೆಚ್ಚಿನ ನಗದು ವಹಿವಾಟಿಗೆ ದಂಡ ವಿಧಿಸಬಹುದು.

advertisement

Leave A Reply

Your email address will not be published.