Karnataka Times
Trending Stories, Viral News, Gossips & Everything in Kannada

Gruhalakshmi Scheme: ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣದ ಬಗ್ಗೆ ಬಿಗ್ ಅಪ್ಡೇಟ್, ಹೊಸ ಬದಲಾವಣೆ!

advertisement

ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಅತಿ ದೊಡ್ಡ ಯೋಜನೆ ಎಂದರೆ ಗೃಹಲಕ್ಷ್ಮಿ ಯೋಜನೆ (Gruhalakshmi Scheme). ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂಪಾಯಿ ನಗದಿನ ನೆರವು ನೀಡಲಾಗುತ್ತದೆ. ಈ ನೆರವಿನಿಂದಾಗಿ, ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆ ಮತ್ತು ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ಸೇರಿದಂತೆ ವಿವಿಧ ಖರ್ಚುಗಳನ್ನು ಭರಿಸಲು ಸಾಧ್ಯವಾಗುತ್ತಿದೆ. ಇದು ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಭಿಯಾಗಲು ಸಹಾಯವನ್ನು ಮಾಡುತ್ತದೆ. ಈಗಾಗಲೇ 4 ಕಂತುಗಳನ್ನ ಜಮಾ ಮಾಡಿದ್ದು ಕಳೆದ 3 ದಿನಗಳಿಂದ 5ನೇ ಕಂತಿನ ಹಣವು ಸಹಿತ ಮಹಿಳೆಯರ ಖಾತೆಗೆ ಬಂದು ತಲುಪುತ್ತದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಆರನೇ ಕಂತಿನ ಹಣ ಕೂಡ ಬರುತ್ತದೆ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಇಲ್ಲ ಎನ್ನುತ್ತಿದ್ದಾರೆ.

6 ನೇ ಕಂತಿನ ಹಣ ಯಾವಾಗ ದೊರೆಯಲಿದೆ?

ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣವು ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗೆ ಜಮಾ ಆಗುತ್ತಿದ್ದು. ಇದುವರೆಗೂ 1 ಕಂತಿನ ಹಣ ಬರ್ದೆ ಇರುವ ಗೃಹಿಣಿಯರು ಬ್ಯಾಂಕ್ ಖಾತೆಗೆ ಮತ್ತೊಮ್ಮೆ ಆಧಾರ್ ಸೀಡಿಂಗ್ ಮಾಡಿಸಿದ ನಂತರ 5 ಕಂತಿನ ಹಣ ಬಂದು ತಲುಪಿದೆ. ಸಾಮಾನ್ಯವಾಗಿ ಪ್ರತಿ ತಿಂಗಳ ಹಣ ಒಂದು ತಿಂಗಳ ತಡವಾಗಿ ತಲುಪುತ್ತದೆ. ಉದಾಹರಣೆಗೆ ಡಿಸೆಂಬರ್ ತಿಂಗಳ ಹಣ ಜನವರಿಯಲ್ಲಿ. ಜನವರಿ ತಿಂಗಳ ಹಣ ಫೆಬ್ರುವರಿ ತಿಂಗಳಲ್ಲಿ. ಈಗಷ್ಟೆ 5 ನೇ ತಿಂಗಳ ಹಣ ನೀಡಿರುವ ಕಾರಣದಿಂದ 6 ನೇ ತಿಂಗಳ ಹಣ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ದೊರಕುತ್ತದೆ. ಈ ತಿಂಗಳಲ್ಲಿ ಸಿಗುವುದಿಲ್ಲ ಎನ್ನಲಾಗುತ್ತಿದೆ.

advertisement

5 ನೆಯ ಕಂತಿನ ಹಣ ದೊರೆತಿಲ್ಲ ಎಂದವರು ಏನು ಮಾಡಬೇಕು?

ಇದುವರೆಗೂ ಒಂದು ಕಂತಿನ ಹಣ ಬಂದಿಲ್ಲ ಎಂದು ಹೇಳುತ್ತಿರುವ ಮಹಿಳೆಯರು, ನಿಮ್ಮ ಬ್ಯಾಂಕ್ ಖಾತೆ & ಆಧಾರ್ ಕಾರ್ಡ್ ಸರಿಯಾಗಿ ಸೀಡ್ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿಸಿಕೊಳ್ಳಿ. ಇಲ್ಲವಾದಲ್ಲಿ ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ಹೊಸ ಪೋಸ್ಟ್ ಬ್ಯಾಂಕ್ ಖಾತೆಯನ್ನು ತೆರೆಯಿರಿ.

ಗೃಹಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳು ಪ್ರತಿ ತಿಂಗಳು 2,000 ರೂ ಪಡೆದುಕೊಳ್ಳುತ್ತಾರೆ. ಹಾಗೆಯೇ ಅವರು ಪಡೆದ/ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೋ ಇಲ್ವೋ? ಎಂದು ಅವರಿಗೆ ತಿಳಿಯುದಿಲ್ಲ. ಇದೀಗ ರಾಜ್ಯ ಸರ್ಕಾರ ಆ ಒಂದು ಸಮಸ್ಯೆಯನ್ನು ಪರಿಹಾರ ಮಾಡಿದೆ. ನಿಮ್ಮ ಮೊಬೈಲ್ ಮೂಲಕವೇ ರೇಷನ್ ಕಾರ್ಡ್ ನಂಬರ್ ಬಳಸಿ ಹಣ ಜಮೆ/ ಅರ್ಜಿ ಸಲ್ಲಿಸಿದ ವಿವರವನ್ನು ತಿಳಿಯಬಹುದಾಗಿದೆ.

advertisement

Leave A Reply

Your email address will not be published.