Karnataka Times
Trending Stories, Viral News, Gossips & Everything in Kannada

IRCTC: ಅಯೋಧ್ಯೆ ರಾಮ ಮಂದಿರ ಸೇರಿದಂತೆ ಮೂರು ಜ್ಯೋತಿರ್ಲಿಂಗ ದರ್ಶನ ಮಾಡಿಸುವ ಐ ಆರ್ ಸಿ ಟಿ ಸಿ ಪ್ಯಾಕೇಜ್, ಅತ್ಯಂತ ಕಡಿಮೆ ಬೆಲೆಗೆ!

advertisement

ಅಯೋಧ್ಯೆ ರಾಮ ಮಂದಿರ (Ayodhya Ram Mandir) ನಿರ್ಮಾಣ ಆಗಿ ಪ್ರಾಣ ಪ್ರತಿಷ್ಠೆ ಆಗುತ್ತಿದ್ದಂತೆ ಇಡೀ ದೇಶದ ರಾಮಭಕ್ತರು ಅಯೋಧ್ಯೆಗೆ ಹೋಗಿ ರಾಮಲಲ್ಲಾನ ದರ್ಶನ ಮಾಡಬೇಕು ಎಂಬ ಹಂಬಲದಲ್ಲಿದ್ದಾರೆ. ಇದರ ಜೊತೆಗೆ ಅಯೋಧ್ಯೆ ಆಸು ಪಾಸು ಇನ್ನೂ ಕೂಡ ನಮ್ಮ ಪೌರಾಣಿಕ ಕಥೆಗಳಿಗೆ ಸಂಬಂಧಿಸಿದ ಹಾಗೂ ಪವಿತ್ರ ಜಾಗಗಳಿವೆ. ಇದೆಲ್ಲವನ್ನು ನೋಡಿಕೊಂಡು ಬಂದರೆ ಹೇಗೆ ಎಂಬ ಆಲೋಚನೆಯೂ ನಿಮ್ಮಲ್ಲಿದೆಯೇ.

ಹೀಗೆ ಅಯೋಧ್ಯೆ ಆಸುಪಾಸಿನ ಎಲ್ಲಾ ಜಾಗಗಳನ್ನು ನೋಡಿಕೊಂಡು ಬರಬೇಕು ಎಂಬ ಹಂಬಲ ಇದ್ದವರಿಗೆ ಐ ಆರ್ ಸಿ ಟಿ ಸಿ ಒಂದು ಟೂರ್ ಪ್ಯಾಕೇಜ್ ಅನ್ನು ಆರಂಭಿಸಿದೆ. ಇದರಲ್ಲಿ ಮೂರು ಜ್ಯೋತಿರ್ಲಿಂಗಗಳು ಕೂಡ ಸೇರಿವೆ. ಐ ಆರ್ ಸಿ ಟಿ ಸಿ (IRCTC) ಯೇ ನಿಮ್ಮ ಎಲ್ಲಾ ವಸತಿ ಹಾಗೂ ಟ್ರಾವೆಲ್ ನ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದೆ. ಹಾಗಿದ್ದರೆ ಟೂರ್ ಯಾವಾಗಿಂದ ಆರಂಭವಾಗುತ್ತದೆ ಯಾವೆಲ್ಲ ಜಾಗಗಳಿಗೆ ಹೋಗಬಹುದು ಮುಂದೆ ಓದಿ.

9 ರಾತ್ರಿ 10 ದಿನಗಳ ಪ್ಯಾಕೇಜ್

ಈ ಪ್ಯಾಕೇಜ್ 9 ರಾತ್ರಿಗಳು ಮತ್ತು 10 ದಿನದ ಪ್ಯಾಕೇಜ್ ಆಗಿರಲಿದೆ. ಹಾಗೂ ಇದರ ಆರಂಭ ರಾಜ್ ಕೋಟ್ ನಿಂದ ಆಗಲಿದೆ. ಈ ಪ್ಯಾಕೇಜ್ ನಲ್ಲಿ ನೀವು ಅಯೋಧ್ಯೆ ಪ್ರಯಾಗ್ ರಾಜ್, ಶೃಂಗವೇರ್ಪುರ್, ಚಿತ್ರಕೂಟ, ವಾರಣಾಸಿ, ಉಜ್ಜೈನಿ ಮತ್ತು ನಾಸಿಕ್ ನ ಹಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಿದ್ದೀರಿ. ಐದನೇ ಫೆಬ್ರವರಿಗೆ ಈ ಪ್ಯಾಕೇಜ್ ಆರಂಭವಾಗಲಿದ್ದು ನೀವು ರಾಜಕೋಟ್, ಸುರೇಂದ್ರನಗರ್, ಸಾಬರ್ಮತಿ, ನಾಡಿಯಾದ್, ಆನಂದ್, ಛಾಯಾಪುರಿ, ಗೋದ್ರಾ, ದಾಹೋದ್ ಮೇದನಗರ್. ರತ್ ಲಾಮ್ ಸ್ಟೇಷನ್ ಗಳಿಂದ ಟ್ರೈನ್ ಹತ್ತಬಹುದಾಗಿದೆ.

advertisement

6 ನೇ ತಾರೀಕಿಗೆ ಬೆಳಿಗ್ಗೆ ಅಯೋಧ್ಯೆ ತಲುಪಲಿದ್ದು ಅಲ್ಲಿಂದ ನೇರವಾಗಿ ಹೋಟೆಲ್ ಗೆ ತೆರಳಿ ಫ್ರೆಶ್ ಆಗಿ ಅಯೋಧ್ಯೆ ದರ್ಶನ ನಡೆಯಲಿದೆ. ಸರಯು ನದಿಯಲ್ಲಿ ನಡೆಯುವ ಆರತಿಯನ್ನು ಕೂಡ ನೀವಿಲ್ಲಿ ನೋಡಬಹುದಾಗಿದೆ. ಅಂದಿನ ರಾತ್ರಿ ಅಲ್ಲೇ ಕಳೆಯಲಿದ್ದೀರಿ. 7ನೇ ಫೆಬ್ರವರಿ ಬೆಳಿಗ್ಗೆ ತಿಂಡಿ ಆದ ನಂತರ ಶ್ರೀರಾಮ ಜನ್ಮ ಭೂಮಿಯ ದರ್ಶನ ಆಗಲಿದೆ. ಇದಾದ ಬಳಿಕ ರಾತ್ರಿ ಪ್ರಯಾಗರಾಜದ ಕಡೆಗೆ ಟ್ರೈನ್ ನಲ್ಲಿ ಪ್ರಯಾಣ ಬೆಳೆಸಲಿದ್ದೀರಿ.
8 ನೇ ಫೆಬ್ರವರಿ ಬೆಳಿಗ್ಗೆ ಪ್ರಯಾಗ್ ರಾಜ್ ಸ್ಟೇಷನ್ ನಲ್ಲಿ ಇಳಿದು ಹೋಟೆಲ್ ಗೆ ತೆರಳಿ ಸಿದ್ದರಾಗಿ ಬಂದರೆ ತ್ರಿವೇಣಿ ಘಾಟ್ ನಲ್ಲಿ ಸಂಗಮ ಸ್ನಾನ ಮಾಡುವ ಅವಕಾಶ ಸಿಗಲಿದೆ. ಇದಾದ ಬಳಿಕ ಸಂಗಮದಲ್ಲಿರುವ ಹನುಮಾನ ಮಂದಿರದ ಭೇಟಿ ನಡೆಯಲಿದೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಶೃಂಗವೇರ್ ಪುರ್ ತಲುಪಲಿದ್ದೀರಿ ಅಲ್ಲಿ ಮಂದಿರದ ದರ್ಶನ ಆದಮೇಲೆ ಚಿತ್ರಕೂಟ ಹೋಗಲಿದ್ದೀರಿ ಅಲ್ಲಿಂದ ರಾಮ್ ಘಾಟ್ ಹೋಗಬಹುದು ಅಂದು ರಾತ್ರಿಯ ಸ್ಟೇ ಚಿತ್ರಕೂಟದಲ್ಲಿ ಅಗಲಿದೆ

9ನೇ ತಾರೀಕಿನ ಬೆಳಿಗ್ಗೆ ಚಿತ್ರಕೂಟ ಮಂದಾಕಿನಿ ನದಿಯಲ್ಲಿ ಸ್ನಾನ ಮಾಡಿ ಅಲ್ಲಿನ ಮಂದಿರಗಳ ದರ್ಶನ, ಅನಸೂಯ ಆಶ್ರಮ ಗುಪ್ತ ಗೋದಾವರಿ, ಹನುಮಾನ್ ಧಾರಾ ಮುಂತಾದ ಕಡೆ ಹೋಗಲಿದ್ದೀರಿ. ಅಲ್ಲಿಂದ ರಾತ್ರಿ ವಾರಣಾಸಿಗೆ ಪ್ರಯಾಣ. 10ನೇ ಫೆಬ್ರವರಿ ವಾರಣಾಸಿ ತಲುಪಿ ಹೋಟೆಲ್ ನಲ್ಲಿ ಚೆಕ್ ಇನ್ ಮಾಡಿ ಕಾಶಿ ವಿಶ್ವನಾಥನ ದರ್ಶನ ಪಡೆಯಲಿದ್ದೀರಿ. ಅಂದು ರಾತ್ರೆ ವಿಶ್ವ ಪ್ರಸಿದ್ಧ ಗಂಗಾ ಆರತಿ ನೋಡುವ ಅವಕಾಶ ನಿಮ್ಮದಾಗಲಿದೆ. ಅಲ್ಲಿಂದ ರಾತ್ರಿ ಉಜ್ಜಯಿನಿ ಕಡೆಗೆ ಪ್ರಯಾಣ ಬೆಳೆಸಲಿದ್ದೀರಿ. 11ನೇ ತಾರೀಕಿನ ಬೆಳಿಗ್ಗೆ ಉಜ್ಜೈನಿ ತಲುಪಿದ ಬಳಿಕ ಮಹಾ ಕಾಲಲೋಕ ಹೋಗಬಹುದು ಅಂದು ಉಜ್ಜೈನಿಯಲ್ಲಿ ಉಳಿಯಲಿದ್ದೀರಿ.

12ನೇ ತಾರೀಕಿನ ಬೆಳಿಗ್ಗೆ ಮಹಾಕಾಲೇಶ್ವರ ಜ್ಯೋತಿರ್ಲಿಂಗ ಕಾಲ್ ಭೈರವ ಮತ್ತು ಹರಸಿದ್ವಿ ಮಾತಾ ಮಂದಿರಕ್ಕೆ ಭೇಟಿ ನೀಡಲಿದ್ದೀರಿ. ಅಲ್ಲಿಂದ ರಾತ್ರಿ ನಾಸಿಕದ ಕಡೆಗೆ ಪ್ರಯಾಣ ಬೆಳೆಸುತ್ತೀರಿ 13 ನೇ ತಾರೀಕು ಬೆಳಿಗ್ಗೆ ನಾಸಿಕ್ ತಲುಪಿ ಅಲ್ಲಿಂದ ರಸ್ತೆಯ ಮೂಲಕ ಪಂಚವಟಿ, ಕಾಲಾ ರಾಮ್ ಮಂದಿರ, ತ್ರಿಯಂಬಕೇಶ್ವರ ಜೊತಿರ್ಲಿಂಗ ದರ್ಶನ ಮುಗಿಸಿಕೊಂಡು ತಡರಾತ್ರಿ ಪ್ರಯಾಣ ಬೆಳೆಸಲಿದ್ದೀರಿ. 14 ಫೆಬ್ರವರಿ ರಾಜ್ ಕೋಟ್ ತಲುಪುವುದರ ಮೂಲಕ ನಿಮ್ಮ ಟೂರ್ ಅಂತ್ಯಗೊಳ್ಳಲಿದೆ.

ಈ ಟೂರ್ ಪ್ಯಾಕೇಜ್ ನ ಸ್ಲೀಪರ್ ಕ್ಲಾಸ್ ನ ಚಾರ್ಜ್ 20,500 ಎಂದು ನಿಗದಿ ಮಾಡಲಾಗಿದೆ. ಕಂಫರ್ಟ್ ಕ್ಲಾಸ್ ಅಥವಾ ಥರ್ಡ್ ಎ. ಸಿ ಯಲ್ಲಿ ಪ್ರಯಾಣ ಮಾಡಬೇಕು ಎಂದಾದರೆ 33,000 ಆಗಲಿದೆ. ಹಾಗೂ ಸೆಕೆಂಡ್ ಎಸಿ ಬುಕಿಂಗ್ ಗಾಗಿ 46,000 ಆಗಲಿದೆ. ಈ ಬುಕ್ಕಿಂಗ್ ಗಾಗಿ ಐ ಆರ್ ಸಿ ಟಿ ಸಿ ಯ ಅಧಿಕೃತ ವೆಬ್ ಸೈಟ್ ಗೆ ನೀವು ಭೇಟಿ ಕೊಡಬಹುದು ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಈ ಕೆಳಗಿನ ನಂಬರ್ ಗಳನ್ನು ಕೂಡ ಸಂಪರ್ಕಿಸಬಹುದು. 9321901849, 9321901852, 8287931724, 8287931728.

advertisement

Leave A Reply

Your email address will not be published.