Karnataka Times
Trending Stories, Viral News, Gossips & Everything in Kannada

RBI: ಬ್ಯಾಂಕ್ ಗಳಿಗೆ ಅರ್ ಬಿ ಐ ಹೊಸ ನಿಯಮ, ಪ್ರೋಸಸಿಂಗ್ ಫೀಸ್ ಸೇರಿ ಎಲ್ಲಾ ಶುಲ್ಕಗಳೂ ಬಡ್ಡಿದರದಲ್ಲೇ ಸೆರ್ಪಡೆ!

advertisement

ಇಂದು RBI ಬ್ಯಾಂಕ್ ಗಳಿಗೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೆ ಇರುತ್ತದೆ. ಈಗಾಗಲೇ ಬ್ಯಾಂಕ್ ಗಳಲ್ಲಿ ಹಲವಾರು ತೊಂದರೆ ಗಳು ಎದುರಾಗುತ್ತಿತ್ತು, ಅನೇಕ ದೂರುಗಳು ಕೂಡ ಕೇಳಿ ಬರುತ್ತಿದೆ. ಮೊನ್ನೆಯಷ್ಟೆ ಅರ್ ಬಿ ಐ ಪೆಟಿಎಮ್ ಬಳಕೆದಾರರಿಗೆ ಹೊಸ ನಿಯಮ ಜಾರಿಗೆ ತಂದಿದ್ದು ಕ್ರೆಡಿಟ್ ಸ್ಕೋರ್ (Credit Score) ವಿಚಾರವಾಗಿಯು ಹಲವಾರು ದೂರು ಗಳು ಕೇಳಿಬಂದಿದೆ.

ಈ ನಿಯಮ ಜಾರಿ:

 

 

ಹೆಚ್ಚಿನ ಗ್ರಾಹಕರಿಗೆ ಸಾಲದ ಅವಶ್ಯಕತೆ ಇದ್ದೆ ಇರುತ್ತದೆ. ಆದರೆ ಇದೀಗ RBI Loan ನೀಡುವ ವಿಚಾರದ ಕುರಿತಂತೆ ಮತ್ತೊಂದು ಹೊಸ ಆದೇಶವನ್ನು ಬ್ಯಾಂಕುಗಳಿಗೆ ನೀಡಿದೆ. ಬ್ಯಾಂಕುಗಳು ಗ್ರಾಹಕರಿಗೆ ಸಾಲ ನೀಡುವಾಗ ಬಡ್ಡಿದರದ ಜೊತೆಗೆ ಪ್ರೋಸಸಿಂಗ್ ಫೀಸ್ ಡಾಕ್ಯುಮೆಂಟೇಶನ್ ಫೀ ಹಾಗೂ ಇತರ ಶುಲ್ಕಗಳನ್ನು ವಿಧಿಸಲಿದ್ದು ಈ ಬಗ್ಗೆ ಸಾಲಗಾರರಿಗೆ ಮಾಹಿತಿ ತಿಳಿದಿರುವುದಿಲ್ಲ. ಗ್ರಾಹಕರಿಗೆ ಕೇವಲ ಬಡ್ಡಿದರದ ಕುರಿತು ಮಾತ್ರ ತಿಳಿದಿರುತ್ತದೆ. ಬೇರೆ ಶುಲ್ಕಗಳ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ ಎಂದು ಈ ಸ್ಪಷ್ಟನೆ ಯನ್ನು ಅರ್ ಬಿ ಐ ನೀಡಿದೆ.

ಈ ಅಧಿಸೂಚನೆ:

advertisement

ಸಾಲ ನೀಡುವಾಗ KFS ಅಥವಾ ಕೀ ಫ್ಯಾಕ್ಟ್ಸ್ ಸ್ಟೇಟ್ಮೆಂಟ್ನಲ್ಲಿ ಸ್ಪಷ್ಟತೆಯನ್ನು ಬ್ಯಾಂಕ್ ನೀಡಬೇಕು. ಬ್ಯಾಂಕ್ ಸಾಲದ Processing Fee, Documentation Fee ಮತ್ತಿತರ ಶುಲ್ಕದ ವಿವರ ಗ್ರಾಹಕರಿಗೆ ಸ್ಪಷ್ಟವಾಗುತ್ತದೆ. ಗ್ರಾಹಕರಿಗೆ ಹೆಚ್ಚು ಪಾರದರ್ಶಕತೆ ತರುವ ಸಲುವಾಗಿ ಈ ನಿಯಮ ಜಾರಿಗೆ ತರಲಾಗಿದೆ.

ಮೆಸೇಜ್ ಮೂಲಕ ಮಾಹಿತಿ:

ಅದೇ ರೀತಿ ಬ್ಯಾಂಕ್ ಗ್ರಾಹಕನ ಕ್ರೆಡಿಟ್ ನ ಮಾಹಿತಿ ಪರಿಶೀಲನೆ ಮಾಡುವ ಬಗ್ಗೆ ಗ್ರಾಹಕರಿಗೆ ಮೆಸೇಜ್ ಮೂಲಕ ಮಾಹಿತಿಯನ್ನು ಕಳುಹಿಸುವ ಬಗ್ಗೆಯು ಬ್ಯಾಂಕ್ ಮಾಹಿತಿ ನೀಡಿದೆ. ಗ್ರಾಹಕರ ಸಾಲದ ಕೋರಿಕೆಯನ್ನು ಬ್ಯಾಂಕ್ ತಿರಸ್ಕಾರ ಮಾಡಿದ್ರೆ ಅದರ ಕಾರಣವನ್ನು ಗ್ರಾಹಕರಿಗೆ ವಿವರವಾಗಿ ತಿಳಿಸಬೇಕು ಎಂದಿದೆ.

ರೆಪೋ ದರ ಕಡಿತ:

ರೆಪೋ ದರ ಹಾಗೇ ಮುಂದುವರಿಯುದರಿಂದ ವಾಹನ ಮತ್ತು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೆಚ್ಚು ಅನುಕೂಲವಾಗುತ್ತಿದೆ. ಅದೇ ರೀತಿ ಆಗಸ್ಟ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಆರ್ಬಿಐ ರೆಪೋ ದರ ಕಡಿತಗೊಳಿಸುವ ಸಾಧ್ಯತೆ ಕೂಡ ಇದೆ ಎಂದು ಅರ್ ಬಿ ಐ ತಿಳಿಸಿದೆ. ಅದೇ ರೀತಿ ಬ್ಯಾಂಕ್ ಖಾತೆಯನ್ನು ತೆರೆಯಲು, ಗ್ರಾಹಕರು KYC ವಿವರಗಳನ್ನು ಸರಿಯಾಗಿ ಸಲ್ಲಿಸಬೇಕು. KYC ಅನ್ನು ಸಮಯಕ್ಕೆ ನವೀಕರಿಸದಿದ್ದರೆ, ಬ್ಯಾಂಕ್ ವಹಿವಾಟಿನ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆ.

advertisement

Leave A Reply

Your email address will not be published.