Karnataka Times
Trending Stories, Viral News, Gossips & Everything in Kannada

CIBIL Score: ಸಾಲ ಪಡೆಯುವಾಗ ನಿಮ್ಮ ಸಿಬಿಲ್ ಸ್ಕೋರ್ ಯಾಕೆ ಮುಖ್ಯ

advertisement

ಬ್ಯಾಂಕೊಂದರಲ್ಲಿ ಸೇವೆ ಸೌಲಭ್ಯ ಪಡೆಯುವ ಪ್ರತೀ ನಾಗರಿಕರಿಗೆ ಕೂಡ ಸಿಬಿಲ್ ಸ್ಕೋರ್ ತುಂಬಾ ಮುಖ್ಯ. ಸಿಬಿಲ್ ಸ್ಕೋರ್ (CIBIL Score) ಮೂಲಕ ವ್ಯಕ್ತಿಯ ಹಣಕಾಸಿನ ಜವಾಬ್ದಾರಿ ಸಂಘಟನೆಯೊಂದಿಗೆ ಕೊಂಡು ಕೊಳ್ಳುವಿಕೆ ಮುಂತಾದವುಗಳನ್ನು ಅರಿಯುವ ಸಲುವಾಗಿ ಅತೀ ಅಗತ್ಯವಾಗಿದೆ. ಸಾಲ ಮರುಪಾವತಿ ಮಾಡದೇ ಇರುವುದು, ಅಕೌಂಟ್ ನಿಲ್ ಮಾಡುವುದು ಇಂತಹ ಅಭ್ಯಾಸಗಳೇ ನಿಮ್ಮ ಸಿಬಿಲ್ ಸ್ಕೋರ್ ಮಟ್ಟ ಕುಸಿಯಲು ಮುಖ್ಯ ಕಾರಣವಾಗಿದ್ದು ಈ ಬಗ್ಗೆ ಮೊದಲೇ ಗಮನಿಸುವುದು ಅತ್ಯವಶ್ಯಕ.

ಸಾಲ ಪಡೆಯಲು ಬಹಳ ಮುಖ್ಯ:

ನೀವು ಸಾಲ (Loan) ಪಡೆಯಬೇಕು ಇಲ್ಲವೇ ಸರಕಾರಿ ಯೋಜನೆಯ ಸಬ್ಸಿಡಿ ಇತರ ಪ್ರಕ್ರಿಯೆ ಪಾಲ್ಗೊಳ್ಳುವ ಮೊದಲೇ ನಿಮ್ಮ ಸಿಬಿಲ್ ಸ್ಕೋರ್ ಮಟ್ಟ ಪರಿಶೀಲನೆ ಮಾಡಲಾಗುತ್ತದೆ. ಸಿಬಿಲ್ ಸ್ಕೋರ್ ಎನ್ನುವುದು ಹಣಕಾಸಿನ ವ್ಯವಹಾರದ ವ್ಯಕ್ತಿಯೊಬ್ಬನ ಸ್ಥಿತಿ ಗತಿ ಅರ್ಥೈಸುವ ಒಂದು ವಿಧಾನವಾಗಿದ್ದು ಇದರಿಂದ ಬ್ಯಾಂಕಿಗೆ ವ್ಯಕ್ತಿಯ ಮೇಲೆ ನಂಬಿಕೆ ಕೂಡ ಮೂಡಲಿದೆ.ಇದು ಗ್ರಾಹಕರ ವಹಿವಾಟಿನ ವಿಚಾರ ಎಂದು ಹೇಳಬಹುದು‌.

 

 

advertisement

ಇನ್ನೂ ಕ್ರೆಡಿಟ್ ಇನ್ಫಾರ್ಮೇಶನ್ ಬ್ಯೂರೊ ಆಫ್ ಇಂಡಿಯಾ (CIBIL) ಅಂದರೆ ಬ್ಯಾಂಕ್ ನಲ್ಲಿ ತಿಂಗಳ ಆರ್ಥಿಕ ವ್ಯವಹಾರ ಉತ್ತಮವಾಗಿದ್ದು ಸಾಲ (Loan) ಮರುಪಾವತಿ ಮಾಡಲು ಯೋಗ್ಯ ಎನಿಸಿದರೆ ಸಿಬಿಲ್ ಸ್ಕೋರ್ (CIBIL Score) ಉತ್ತಮವಾಗಿ ಇರಲಿದೆ. ಅದೇ ರೀತಿ ನೀವು ಸಾಲ ಮರುಪಾವತಿಸದೆ ಬಡ್ಡಿ ಬೆಳೆಯುತ್ತಾ ನೋಟಿಸ್ ಬರೊ ವರೆಗೂ ಬಿಟ್ಟರೆ ಸಿಬಿಲ್ ಸ್ಕೋರ್ ಕೂಡ ಕಡಿಮೆ ಆಗಿದೆ ಎಂದು ಅರ್ಥ. ಅಂದರೆ ಉತ್ತಮ ಸಿಬಿಲ್ ಸ್ಕೋರ್ ಹೊಂದಿದ್ದವರಿಗೆ ಸಾಲ ಸೌಲಭ್ಯ ಸುಲಭವಾಗಿ ಸಿಗಲಿದೆ ಎಂದು ನೀವು ಅರ್ಥೈಸಬಹುದು.

ಲೆಕ್ಕಾಚಾರ ಹೇಗಿರಲಿದೆ?

ಇದರ ಲೆಕ್ಕಾಚಾರ ಹೇಗೆ ಆಗುತ್ತದೆ ಎಂಬ ಬಗ್ಗೆ ನೀವು ಅಗತ್ಯವಾಗಿ ತಿಳಿಯಲೇ ಬೇಕು. ಸಿಬಿಲ್ ಸ್ಕೋರ್ ಎನ್ನುವುದು ಬ್ಯಾಂಕಿನ ಗ್ರಾಹಕನ ಆರ್ಥಿಕ ವಹಿವಾಟಿನ ವಿಚಾರಕ್ಕೆ ಸಂಬಂಧ ಪಟ್ಟದ್ದಾಗಿದೆ. ಆರು ತಿಂಗಳ ಲೆಕ್ಕಾಚಾರದ ಆಧಾರದ ಮೇಲೆ ಸಿಬಿಲ್ ಸ್ಕೋರ್ ನಿರ್ಧಾರ ವಾಗಲಿದೆ. 300ಕ್ಕಿಂತ ಕಡಿಮೆ ಇದ್ದರೆ ಸಾಲ ಸಿಗುವುದು ಇಲ್ಲ ಆದರೆ 300 ಕ್ಕಿಂತ ಮೇಲಿದ್ದು 750, 900 ಈ ರೀತಿ ಇದ್ದರೆ ಸಾಲ ಸುಲಭಕ್ಕೆ ಸಿಗಲಿದೆ. ಹಾಗಾಗಿ ಲೋನ್ ಕಟ್ಟದೇ ಇರುವುದು ತಡವಾಗಿ ಪಾವತಿ ಮಾಡುವುದು ಮಾಡದೇ ಉತ್ತಮ ಸಿಬಿಲ್ ಸ್ಕೋರ್ ಕಾಯ್ದುಕೊಳ್ಳುವುದು ಬಹಳ ಮುಖ್ಯ.

ಕ್ರೆಡಿಟ್ ಕಾರ್ಡ್ ಸಾಲ ಪಡೆದು ನೀವು ಕ್ಲಪ್ತ ಸಮಯಕ್ಕೆ ಮರುಪಾವತಿ ಮಾಡದೇ ಇದ್ದರೆ ಸಿಬಿಲ್ ಸ್ಕೋರ್ ಕಡಿಮೆ ಆಗಲಿದೆ. ಒಂದೇ ಸಮಯಕ್ಕೆ ಹಲವು ಬ್ಯಾಂಕಿನ ಲೋನ್ ಪಡೆಯುವುದು, ಲೋನ್ ಗಾ್ಗಿ ಅರ್ಜಿ ಹಾಕುವುದು ಕೂಡ ಸಿಬಿಲ್ ಸ್ಕೋರ್ ಕಡಿಮೆ ಮಾಡಲಿದೆ. ಹಾಗಾಗಿ ಅನಗತ್ಯ ಸಣ್ಣ ಪುಟ್ಟ ವಿಚಾರಕ್ಕೂ ಸಾಲ ಪಡೆಯುವುದನ್ನು ಕಡಿಮೆ ಮಾಡಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿ ಇರಲಿದೆ.

ಭವಿಷ್ಯದಲ್ಲಿ ನಿಮಗೆ ಸಾಲ ಸೌಲಭ್ಯದ ತೀರ ಅಗತ್ಯ ಇದ್ದಾಗ ಸಾಲ ಸಿಗಲಿಲ್ಲ ಎನ್ನುವ ಬದಲು ಮೊದ ಮೊದಲೇ ಸಾಲ ನೀಡಲು ಹಣ ಕಾಸಿನ ಸಂಸ್ಥೆಗೂ ನಿಮ್ಮ ಮೇಲೆ ನಂಬಿಕೆ ಉಂಟು ಮಾಡಬಲ್ಲ ಕ್ರೆಡಿಟ್ ಸ್ಕೋರ್ ಮಟ್ಟ ಏರಿಕೆ ಮಾಡಲು ಪ್ರಯತ್ನಿಸುವುದು ಸಹ ಅಷ್ಟೇ ಮುಖ್ಯವಾಗಿದೆ. ಉತ್ತಮ ಕ್ರೆಡಿಟ್ ಸ್ಕೋರ್ ಪಡೆಯಲು ಸಾಕಷ್ಟು ಸಮಯಾವಕಾಶ ಅಗತ್ಯವಾಗಿದ್ದು ಅದಕ್ಕೆ ತಾಳ್ಮೆ ವಹಿಸಿದರೆ ನಿಮಗೆ ಭವಿಷ್ಯದಲ್ಲಿ ಸಾಲ ಸೌಲಭ್ಯಕ್ಕೆ ತುಂಬಾ ಸಹಕಾರಿ ಆಗಲಿದೆ.

advertisement

Leave A Reply

Your email address will not be published.