Karnataka Times
Trending Stories, Viral News, Gossips & Everything in Kannada

Gruha Lakshmi: ಮಹಿಳೆಯರೇ ನಿಮ್ಮ ಬ್ಯಾಂಕ್ ಅಕೌಂಟ್ ಈ ಬ್ಯಾಂಕ್ ನಲ್ಲಿ ಇದ್ದರೆ ಗೃಹಲಕ್ಷ್ಮಿಹಣ ನಿಮ್ಮ ಖಾತೆಗೆ ಜಮಾ ಆಗೋದಿಲ್ಲ.

advertisement

ರಾಜ್ಯಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಯ 5 ಕಂತಿನ ಹಣ ಬಿಡುಗಡೆ ಆಗಿ ಕೋಟ್ಯಂತರ ಮಹಿಳೆಯರ ಖಾತೆಯನ್ನು (Bank Account) ತಲುಪಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದರು ಕೂಡ, ಇದರ ಜೊತೆಗೆ ಸುಮಾರು ಐದರಿಂದ ಆರು ಲಕ್ಷ ಮಹಿಳೆಯರಿಗೆ ಇದುವರೆಗೆ ಗೃಹಲಕ್ಷ್ಮಿ ಬಾರದೆ ಇರುವುದು ಕೂಡ ಅಷ್ಟೇ ಸತ್ಯ.ಉಳಿದವರಿಗೆ ಹಣ ಬರುತ್ತಿರುವಂತೆ ನಮಗೆ ಮಾತ್ರ ಯಾಕೆ ಬರುತ್ತಿಲ್ಲ ಎನ್ನುವುದು ಗೃಹಿಣಿಯರ ಪ್ರಶ್ನೆ.

ಈಗಾಗಲೇ ಸಾಕಷ್ಟು ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರ್ಹ ಫಲಾನುಭವಿ ಮಹಿಳೆಯರ (Beneficiary) ಖಾತೆಗೂ ಕೂಡ ಹಣ ಯಾಕೆ ಬರುತ್ತಿಲ್ಲ ಎಂದು ಸರ್ಕಾರವನ್ನ ಪ್ರಶ್ನೆ ಮಾಡುತ್ತಿದ್ದಾರೆ. ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಇಲ್ಲವೇ ನೀವು ನೀಡಿದ ದಾಖಲೆಗಳಲ್ಲಿ ತೊಂದರೆ ಇದ್ದರೆ ಅಂತಹ ಮಹಿಳೆಯರಿಗೆ ಕೂಡ ಈ ವರೆಗೆ ಹಣ ಬಿಡುಗಡೆ ಆಗಿಲ್ಲ.

ಸರ್ಕಾರ ಹೇಳುತ್ತಿರುವುದೇನು?

ಮಹಿಳೆಯರು ಮುಂದಿನ ಕಂತಿನ ಹಣ ಪಡೆದುಕೊಳ್ಳಲು ಸಹಾಯಕವಾಗುವ ಎಲ್ಲಾ ಕೆಲಸಗಳನ್ನು ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನು ಮಹಿಳೆಯರು ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು.

 

advertisement

 

ಇದಕ್ಕಾಗಿ ಕಚೇರಿಗೆ ಭೇಟಿ ನೀಡುವಾಗ ತಪ್ಪದೇ ರೇಷನ್ ಕಾರ್ಡ್ (Ration Card), ಆಧಾರ್ ಕಾರ್ಡ್ (Aadhaar Card) ಹಾಗೂ ಅರ್ಜಿ ಸಲ್ಲಿಸಿದಾಗ ಕೊಟ್ಟಿರುವ ಸ್ವೀಕೃತಿ ಪ್ರತಿ ಕೂಡ ತೆಗೆದುಕೊಂಡು ಹೋಗಿ. ಇಲ್ಲಿನ ಅಧಿಕಾರಿಗಳು ನಿಮ್ಮ ಗೃಹಲಕ್ಷ್ಮಿ ಖಾತೆಯನ್ನು ಪರಿಶೀಲಿಸಿ ಯಾಕೆ ಹಣ ಜಮಾ ಆಗುತ್ತಿಲ್ಲ ಎನ್ನುವ ಸ್ಪಷ್ಟ ಕಾರಣವನ್ನು ತಿಳಿಸುತ್ತಾರೆ ಹಾಗೂ ಪರಿಹಾರವನ್ನು ಸೂಚಿಸುತ್ತಾರೆ.

ಪೇಟಿಎಂ ವ್ಯಾಲೆಟ್ ಇದ್ದರೆ ಹಣ ಸಿಗುವುದಿಲ್ಲ:

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿರ್ಬಂಧ ಹೇರಿದೆ. ಹಾಗಾಗಿ ಫೆಬ್ರವರಿ 29 ಕ್ಕೆ ಪೇಟಿಎಂ ವ್ಯಾಲೆಟ್ ಅಂತ್ಯವಾಗಲಿದೆ. ಹಾಗಾಗಿ ನೀವೇನಾದರೂ ಗೃಹಲಕ್ಷ್ಮಿ ಯೋಜನೆ (Gruha Lakshmi) ಗೆ ಪೇಟಿಎಂ ಖಾತೆಯನ್ನು ನೀಡಿದ್ದರೆ ಈಗಲೇ ಬದಲಾಯಿಸಿ ಇಲ್ಲವಾದರೆ ನಿಮ್ಮ ಹಣ ನಿಮ್ಮ ಕೈ ತಪ್ಪಿ ಹೋಗುತ್ತದೆ. ಹಾಗಾಗಿ ನಿಮ್ಮ ಬ್ಯಾಂಕ್ ಖಾತೆ ಇದಕ್ಕೆ ಅಟ್ಯಾಚ್ ಆಗಿದ್ದರೆ ಈಗಲೇ ಬದಲಾಯಿಸಿ. ಪಡೆದುಕೊಂಡವರಿಗೆ ಇದು ಅನ್ವಯಿಸುವುದಿಲ್ಲ.

ಗೃಹ ಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಸುವ ವೇಳೆ ಯಾವ ಬ್ಯಾಂಕ್ ಖಾತೆಯ (Bank Account) ಸಂಖ್ಯೆ ನೀಡಿದ್ದೀರೋ ಆ ಬ್ಯಾಂಕ್ಗೆ ಖುದ್ದಾಗಿ ತೆರಳಿ ಎನ್ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಬಹುದು. ಇಲ್ಲದೆ ಇದ್ದಲ್ಲಿ ಹತ್ತಿರದ ಗ್ರಾಮ್ ಒನ್, ಬಾಪೂಜಿ ಸೇವಾ ಕೇಂದ್ರ, ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ತೆರಳಿ ಸಹ ಎನ್ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಬಹುದಾಗಿದೆ.ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಹಲವಾರು ಮಹಿಳೆಯರ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಂಡಿದೆ. ಇದರಿಂದಾಗಿ ಅವರ ಖಾತೆ ಹಣ ಜಮಾ ಮಾಡಲು ಆಗುತ್ತಿಲ್ಲ. ಹಾಗಾಗಿ ಬ್ಯಾಂಕ್ ಖಾತೆಯ ಸ್ಟೇಟಸ್ ಸಮಸ್ಯೆ ಇದ್ದವರು ಕೂಡಲೇ ಬ್ಯಾಂಕ್ ತೆರಳಿ ಪರಿಶೀಲನೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.

advertisement

Leave A Reply

Your email address will not be published.