Karnataka Times
Trending Stories, Viral News, Gossips & Everything in Kannada

Ration Card: ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ದಾರರಿಗೆ ರಾತ್ರೋರಾತ್ರಿ ಹೊಸ ರೂಲ್ಸ್, ಮತ್ತೆ ಇಂತವರ ಕಾರ್ಡ್ ರದ್ದು!

advertisement

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಪರಿಣಾಮ ರೇಷನ್ ಕಾರ್ಡ್​ (Ration Card) ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಬಹುದು. ರೇಷನ್ ಕಾರ್ಡ್ ಪಡೆದುಕೊಂಡರೆ ಸುಲಭವಾಗಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಆಗಬಹುದು ಅಂತ ಜನರು ರೇಷನ್ ಕಾರ್ಡ್​ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಕಾದು ಕುಳಿತಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಹಾರ ಇಲಾಖೆ ಸದ್ಯಕ್ಕೆ ಹೊಸ ರೇಷನ್​ ಕಾರ್ಡ್​ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಬಳಿಕ ಎಪಿಎಲ್​ ಹಾಗೂ ಬಿಪಿಎಲ್ ಕಾರ್ಡ್​​ಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಆದರೆ ಸದ್ಯಕ್ಕೆ ರೇಷನ್​ ಕಾರ್ಡ್​​ಗಳಿಗೆ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇಲ್ಲ ಎಂದು ಹೇಳುವ ಮೂಲಕ ಜನರಿಗೆ ಇಲಾಖೆ ಬ್ಯಾಡ್​ ನ್ಯೂಸ್ ಕೊಟ್ಟಿದೆ.

ಬಿಪಿಎಲ್ ಮತ್ತು ಎಪಿಎಲ್ ರೇಷನ್ ಕಾರ್ಡ್ ದಾರರಿಗೆ ಸರ್ಕಾರ ಹೇಳಿದ್ದೇನು ?

ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾದ ವೇಳೆ ಅವರಿಗೆ ಜನರಲ್ಲಿ ಹೆಚ್ಚು ಖ್ಯಾತಿ ತಂದ ಕೊಟ್ಟ ಯೋಜನೆ ಅಂತ ಎಂದರೇ ಅನ್ನಭಾಗ್ಯ. ಸಿದ್ದರಾಮಯ್ಯ ಅವರಿಗೆ ಬಡವರಿಗೆ ತಿಂಗಳಿಗೆ 10 ಕೆಜಿ ಅಕ್ಕಿ ಕೊಡಬೇಕು ಎಂಬ ಕನಸು ಹೊಂದಿದ್ದರು, ಅಧಿಕಾರಕ್ಕೆ ಬಂದ ಬಳಿಕ ಅದನ್ನು ನನಸು ಮಾಡಿ ಬಡವರಿಗೆ ಅಕ್ಕಿ ವಿತರಣೆ ಮಾಡುವ ಕಾರ್ಯ ಮಾಡಿದ್ದರು. ಕಳೆದ ಎರಡು ತಿಂಗಳಿನಲ್ಲಿ ಒಂದು ವಾರ, ಎರಡು ದಿನ ಕಾಲ ವಿಭಾಗವಾರು ರೇಷನ್ ಕಾರ್ಡ್ ಪಡೆದುಕೊಳ್ಳಲು ಅವಕಾಶ ನೀಡಲಾಗಿತ್ತು.

advertisement

ಅಲ್ಲದೇ ಈಗಾಗಲೇ ಪಡೆದಿರುವ ಕಾರ್ಡ್​ಗಳಲ್ಲಿ ಬದಲಾವಣೆಗೂ ಅವಕಾಶ ಮಾಡಿಕೊಡಲಾಗಿತ್ತು. ಕಳೆದ ಎರಡು ತಿಂಗಳಿನಿಂದ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿದೆ. ಈ ಹಿಂದೆ ಪೇಂಡಿಂಗ್ ಉಳಿದುಕೊಂಡಿದ್ದ ಅರ್ಜಿಗಳು ಕೂಡ ಇದೆ. ಅವುಗಳನ್ನು ವಿಲೇವಾರಿ ಮಾಡಬೇಕಿದೆ. ಈ ಅರ್ಜಿಗಳ ವಿಲೇವಾರಿ ಬಳಿಕ ಹೊಸ ಅರ್ಜಿಗಳ ಕರೆಯುವ ಅಥವಾ ತಿದ್ದುಪಡಿಗೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದ ಆರ್ಥಿಕ ಇಲಾಕೆಯಿಂದ ಅನುಮತಿ ಪಡೆದು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದೆ.

ರೇಷನ್ ಕಾರ್ಡ್ ರದ್ದು

6 ತಿಂಗಳಿನಿಂದ ರೇಷನ್‌ ಪಡೆಯದ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡುವ ಕುರಿತಂತೆ ಆಹಾರ ಇಲಾಖೆ ಚಿಂತನೆ ನಡೆಸಿದ್ದು, ಈ ಪೈಕಿ ಒಟ್ಟು 3.26 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿದೆ. ರಾಜ್ಯಾದ್ಯಂತ 3.26 ಲಕ್ಷ ಬಿಪಿಎಲ್‌ ಕಾರ್ಡುದಾರರು 6 ತಿಂಗಳಿಂದ ರೇಷನ್ ಪಡೆಯುತ್ತಿಲ್ಲ ಎಂದು ಇಲಾಖೆ ಹೇಳಿದೆ. ಇಂತಹ ಕಾರ್ಡ್‌ಗಳ ರದ್ದರ ಮಾಡಲಿ ಸರ್ಕಾರ ಸೂಚನೆ ಕೊಟ್ಟಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ ರೇಷನ್ ಕಾರ್ಡ್ ಕೇವಲ ಗುರುತಿಗಷ್ಟೆ ಬಳಸುವವರು. ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ (BPL Card) ಹೊಂದಿದ್ದರೆ ಈಗಲೇ ಹ್ಯಾಂಡ್ ಓವರ್ ಮಾಡಲು ಕೂಡ ಹೇಳಲಾಗಿದೆ.

ಅಲ್ಲದೆ ಆದರೆ, ಹೊಸ ಬಿಪಿಎಲ್ ಕಾರ್ಡ್​ ವಿತರಣೆ ಮಾಡಿದರೆ ಅನ್ನಭಾಗ್ಯ (Annabhagya) ಯೋಜನೆಯ ಫಲಾನುಭವಿಗಳು ಹೆಚ್ಚಳ ಆಗ್ತಾರೆ, ಆದರೆ ಐಪಿಎಲ್ ಕಾರ್ಡ್​ ಆದರೂ ನೀಡಬಹುದು ಅಲ್ವಾ ಎಂಬ ಜನರ ಪ್ರಶ್ನೆಗೆ ಆಹಾರ ಇಲಾಖೆ ಯಾವುದೇ ಪ್ರತಿಕ್ರಿಯೆಯನ್ನ ನೀಡಲ್ಲ. ಆಡಳಿತಾತ್ಮಕ ಕಾರಣಗಳನ್ನು ನೀಡಿ ಹೊಸ ಕಾರ್ಡ್​​ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಸದ್ಯಕ್ಕೆ ಅನುಮತಿ ನೀಡಲು ಅವಕಾಶವಿಲ್ಲ ಎಂದಷ್ಟೇ ಇಲಾಖೆ ತಿಳಿಸಿದೆ.

advertisement

Leave A Reply

Your email address will not be published.