SSY: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಎಷ್ಟು ಹಣ ಠೇವಣಿ ಆಗಿದೆ ಅಂತ ಮನೆಯಲ್ಲಿಯೇ ಕುಳಿತು ಹೀಗೆ ಪರಿಶೀಲಿಸಿ!
![](https://karnatakatimes.com/wp-content/uploads/2024/01/SSY-Update.jpg)
advertisement
ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಹೆಣ್ಣು ಮಕ್ಕಳಿಗೆ ಕೇಂದ್ರ ಸರ್ಕಾರ ಆರಂಭಿಸಿದ ಯೋಜನೆ ಆಗಿದ್ದು, ಸಾಕಷ್ಟು ಪಾಲಕರು ತಮ್ಮ ಹೆಣ್ಣುಮಕ್ಕಳ ಹೆಸರಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ. ಹೆಣ್ಣು ಮಗು ಹುಟ್ಟಿದರೆ ಆಕೆಯನ್ನು ಲಕ್ಷ್ಮಿ ಎಂದು ಪರಿಗಣಿಸುವ ಕುಟುಂಬಗಳು ಇವೆ. ಅದರಂತೆ ಹೆಣ್ಣು ಮಕ್ಕಳಿಗೆ ಅಗತ್ಯವಾಗಿರುವ ಶಿಕ್ಷಣಕ್ಕಾಗಲಿ ಅಥವಾ ಹೆಣ್ಣು ಮಕ್ಕಳ ಮದುವೆ ಆಗಲಿ ಸಹಾಯಕವಾಗುವಂತೆ ಸರ್ಕಾರವು ಕೂಡ ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳಲ್ಲಿ ಎಸ್ ಎಸ್ ವೈ ಹೂಡಿಕೆ ಕೂಡ ಒಂದು.
ಸುಕನ್ಯಾ ಸಮೃದ್ಧಿ ಯೋಜನೆ (SSY)
ಹೆಣ್ಣು ಮಕ್ಕಳ ಭವಿಷ್ಯವನ್ನು ಬಂಗಾರವಾಗಿಸುವ ಕನಸು ತಂದೆ ತಾಯಿ ಕಾಣುವುದು ಸಹಜ. ಇದಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯುವುದರ ಮೂಲಕ ಮಗಳ ವಿದ್ಯಾಭ್ಯಾಸಕ್ಕೆ ಹಾಗೂ ಮದುವೆಯ ಸಂದರ್ಭದಲ್ಲಿ ದೊಡ್ಡ ಮೊತ್ತದ ಹಣವನ್ನು ಪಡೆದುಕೊಳ್ಳಲು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ರೂ. 250 ಗಳಿಂದ 1.50 ಲಕ್ಷಗಳವರೆಗೆ ವಾರ್ಷಿಕವಾಗಿ ಹೂಡಿಕೆ ಮಾಡಬಹುದು. ನಿಮ್ಮ ಹೆಣ್ಣು ಮಗು 10 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಇದ್ದರೆ ಆಕೆಯ ಹೆಸರಿನಲ್ಲಿ ಎಸ್ ಎಸ್ ವೈ ಖಾತೆಯನ್ನು ಆರಂಭಿಸಿ. ಆಕೆಗೆ 21 ವರ್ಷ ವಯಸ್ಸಾದಾಗ ದೊಡ್ಡ ಮೊತ್ತದ ಹಣವನ್ನು ಹಿಂಪಡೆಯುತ್ತೀರಿ.
SSY ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬುದನ್ನು ತಿಳಿದುಕೊಳ್ಳಬಹುದು ಗೊತ್ತಾ?
ನೀವು ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಆಕೆ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಇರುವಾಗಲೇ ಹೂಡಿಕೆ ಆರಂಭಿಸಿ. ಈಗ ಒಂದು 10 ವರ್ಷ ಕಳೆದಿದ್ದರೆ ಎಷ್ಟು ಹೂಡಿಕೆ ಮಾಡಿದ್ದೀರಿ ಎಂದು ತಿಳಿದುಕೊಳ್ಳುವ ಕುತೂಹಲ ಇರಬಹುದು. ನಿಮಗೆ ಹೂಡಿಕೆ ಮಾಡಿರುವ ಲೆಕ್ಕಾಚಾರ ಇಲ್ಲದೆ ಇರಬಹುದು. ಅಂತಹ ಸಂದರ್ಭದಲ್ಲಿ ನೀವು SSY ಖಾತೆಯ ಬ್ಯಾಲೆನ್ಸ್ ಅನ್ನು ಆನ್ಲೈನ್ ಮೂಲಕವೇ ಚೆಕ್ ಮಾಡಬಹುದು.
advertisement
ಆನ್ಲೈನ್ ಮೂಲಕ ಎಸ್ ಎಸ್ ವೈ ಖಾತೆ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
- ಸುಕನ್ಯಾ ಸಮೃದ್ಧಿ ಖಾತೆಗೆ ಲಾಗಿನ್ ಆಗಿ.
- ಬಳಿಕ ನಿಮ್ಮ ಬ್ಯಾಂಕ್ ನ ಇಂಟರ್ನೆಟ್ ಬ್ಯಾಂಕಿಂಗ್ ಲಾಗಿನ್ ಕೂಡ ಆಗಬೇಕು.
- ನಿಮ್ಮ ಖಾತೆಗೆ ಲಾಗಿನ್ ಆದ ನಂತರ ಮುಖಪುಟದಲ್ಲಿ ಬ್ಯಾಲೆನ್ಸ್ ಪರಿಶೀಲಿಸಿಕೊಳ್ಳಲು ಡ್ಯಾಶ್ ಬೋರ್ಡ್ ನಲ್ಲಿ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ ಯಶಸ್ವಿ ಖಾತೆಯ ಸಂಪೂರ್ಣ ವಿವರ ಕಾಣಿಸುತ್ತದೆ. ಇಲ್ಲಿ ನೀವು ಯಾವಾಗ ಎಸ್ಎಸ್ ವೈ ಯೋಜನೆ ಆರಂಭಿಸಿದ್ದೀರಿ, ಈಗ ಎಷ್ಟು ಬ್ಯಾಲೆನ್ಸ್ ಇದೆ ಎಲ್ಲವನ್ನೂ ಕೂಡ ಪರಿಶೀಲಿಸಬಹುದು. ಆದರೆ ಈ ಹಣವನ್ನು ತೆಗೆಯುವುದು ಅಥವಾ ಇತರ ಹಣಕಾಸಿನ ವ್ಯವಹಾರ ಇಲ್ಲಿ ನಡೆಸಲು ಸಾಧ್ಯವಿಲ್ಲ.
ಆಫ್ಲೈನ್ ಮೂಲಕವೂ ಬ್ಯಾಲೆನ್ಸ್ ಪರಿಶೀಲಿಸಿ!
ಇನ್ನು ನೀವು ಆಫ್ಲೈನ್ ಮೂಲಕ ಎಸ್ ಎಸ್ ವೈ ಖಾತೆಯಲ್ಲಿ ಎಷ್ಟು ಠೇವಣಿ ಮಾಡಿದ್ದೀರಿ ಎಂಬುದನ್ನು ತಿಳಿದುಕೊಳ್ಳಲು ಬಯಸಿದರೆ ಬ್ಯಾಂಕ್ನ ಪಾಸ್ ಬುಕ್ ಮಾಹಿತಿಯನ್ನು ತಿಳಿದುಕೊಳ್ಳಲು ಹತ್ತಿರದ ಬ್ಯಾಂಕ್ ಗೆ ಹೋಗಿ ನಿಮ್ಮ ಬ್ಯಾಂಕ್ ಪಾಸ್ ಬುಕ್ ಅನ್ನು ಅಪ್ಡೇಟ್ ಮಾಡಿಸಿ. ಆಗ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿರುವ ಮೊತ್ತ ನಿಮಗೆ ಕಾಣಿಸುತ್ತದೆ.
ನಿಮ್ಮ ಹೆಣ್ಣು ಮಗು 21 ವರ್ಷಕ್ಕೆ ಬಂದಾಗ ಲಕ್ಷಾಧಿಪತಿ ಆಗುತ್ತಾಳೆ!
ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana)ಯ ಲೆಕ್ಕಾಚಾರದ ಪ್ರಕಾರ ನಿಮ್ಮ ಮಗುವಿಗೆ ಒಂದು ವರ್ಷ ವಯಸ್ಸಿರುವಾಗ ಖಾತೆ ತೆರೆದಿದ್ದೀರಿ. ಹಾಗೂ ಪ್ರತಿ ವರ್ಷ 1.50 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದೀರಿ ಎಂದು ಭಾವಿಸಿ. ಆಗ ಯೋಚನೆ ಮುಕ್ತಾಯದ ಹೊತ್ತಿಗೆ 69.27 ಲಕ್ಷ ರೂಪಾಯಿ ಸಂಗ್ರಹವಾಗಿರುತ್ತದೆ. ಇದಕ್ಕೆ 8.20% ಬಡ್ಡಿದರ ಎಂದು ಸರ್ಕಾರ ನಿಗದಿಪಡಿಸಿದೆ. ಅಲ್ಲಿಗೆ ಕೊಟ್ಟು 22.50 ಲಕ್ಷ ರೂಪಾಯಿಗಳ ಹೂಡಿಕೆಯ ಮೇಲೆ ನೀವು ಪಡೆಯುವ ಬಡ್ಡಿ ದರ 46.77 ಲಕ್ಷ ರೂಪಾಯಿ. ಅಂತೂ ನಿಮ್ಮ ಮಗಳನ್ನ ಮಿಲೀನಿಯರ್ ಮಾಡೇಬಿಟ್ರಿ ನೋಡಿ!
advertisement