Karnataka Times
Trending Stories, Viral News, Gossips & Everything in Kannada

PAN-Aadhaar Card: ವ್ಯಕ್ತಿ ಮರಣದ ನಂತರ ಅವನ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಏನು ಮಾಡಬೇಕು ಗೊತ್ತಾ? ಮೊದಲು ಇದನ್ನು ತಿಳಿದುಕೊಳ್ಳಿ!

advertisement

ನಾವು ದೇಶಾದ್ಯಂತ ಯಾವುದೇ ಸರ್ಕಾರಿ ಹಾಗೂ ಖಾಸಗಿ ಕೆಲಸವನ್ನ ಮಾಡಿಕೊಳ್ಳಲು ಕೆಲವು ಪ್ರಮುಖ ದಾಖಲೆಗಳು ಬೇಕಾಗುತ್ತವೆ. ಅವುಗಳಲ್ಲಿ ಆಧಾರ್ ಕಾರ್ಡ್ (Aadhaar Card), ಪ್ಯಾನ್ ಕಾರ್ಡ್ (PAN Card), ವೋಟರ್ ಐಡಿ (Voter ID) ಪಾಸ್ಪೋರ್ಟ್ (Passport) ಮೊದಲ ಅದು ಪ್ರಮುಖವಾಗಿರುವ ಐಡೆಂಟಿಟಿ ಕಾರ್ಡ್ (Identity Card) ಆಗಿರುತ್ತವೆ. ಯಾವುದೇ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಅಥವಾ ಹಣಕಾಸಿಗೆ ಸಂಬಂಧಪಟ್ಟ ಪ್ರಮುಖ ಕೆಲಸಗಳನ್ನು ಮಾಡಿಕೊಳ್ಳಲು ನಾವು ಈ ದಾಖಲೆಗಳನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ.

ಮಕ್ಕಳನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು, ಮ್ಯಾರೇಜ್ ಸರ್ಟಿಫಿಕೇಟ್ (Marriage Certificate) ಮಾಡಿಸಲು, ಷೇರು ಮಾರುಕಟ್ಟೆ (Stock Market) ಅಥವಾ ಮ್ಯೂಚುವಲ್ ಫಂಡ್ಗಳಲ್ಲಿ (Mutual Fund) ಹೂಡಿಕೆ ಮಾಡಲು, ಆದಾಯ ತೆರಿಗೆ (Income Tax) ಪಾವತಿ ಮಾಡಲು ಹೀಗೆ ಪ್ರತಿಯೊಂದು ಕೂಡ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ವಿಶೇಷ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಅಂದ ಹಾಗೆ ಈ ಪ್ರಮುಖ ದಾಖಲೆಗಳನ್ನು ಹೊಂದಿರುವ ವ್ಯಕ್ತಿ ಆಕಸ್ಮಾತ್ ಮರಣ ಹೊಂದಿದರೆ ಆತನ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ (PAN-Aadhaar Card) ಏನಾಗುತ್ತೆ ಅಥವಾ ಏನು ಮಾಡಬೇಕು ಎಂಬುದು ನಿಮಗೆ ಗೊತ್ತಾ?

PAN Card:

 

 

ಮೊದಲನೆಯದಾಗಿ ಪ್ಯಾನ್ ಕಾರ್ಡ್ (PAN Card) ವಿಚಾರಕ್ಕೆ ಬರೋಣ. ಹಣಕಾಸು ಹಾಗೂ ಹಣಕಾಸೇತರ ಕೆಲಸಗಳಿಗೆ ಪಾನ್ ಕಾರ್ಡ್ ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಆದಾಯ ತೆರಿಗೆ ಇಲಾಖೆಗೆ ಸಂಬಂಧಪಟ್ಟ ಯಾವುದೇ ಕೆಲಸ ಮಾಡಿಕೊಳ್ಳುವುದಿದ್ದರೂ ಪ್ಯಾನ್ ಕಾರ್ಡ್ ಬೇಕು. ಪ್ಯಾನ್ ಕಾರ್ಡ್ ಪರ್ಮನೆಂಟ್ ನಂಬರ್ ಆಗಿದ್ದು 10 ಅಂಕೆಗಳ ಅಲ್ಫಾ ನ್ಯೂಮೆರಿಕ್ ಸಂಖ್ಯೆಯನ್ನು ಕೊಡಲಾಗುತ್ತದೆ. ಆದಾಯ ತೆರಿಗೆ ಇಲಾಖೆಯಿಂದ ಈ ಸಂಖ್ಯೆಯನ್ನು ಪಡೆದುಕೊಳ್ಳಬಹುದು.

ವ್ಯಕ್ತಿ ಸತ್ತಾಗ ಪಾನ್ ಕಾರ್ಡ್ ಅನ್ನು ಬಳಸಿಕೊಂಡು ಬೇರೆಯವರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೆ, ಆಗ ಅವರ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಗೆ ಸರೆಂಡರ್ ಮಾಡಿ. ನಂತರ ಅದನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

advertisement

Aadhaar Card:

 

 

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಭಾರತದ ಪ್ರತಿಯೊಬ್ಬ ಪ್ರಜೆಗೂ ಕೂಡ ಆಧಾರ್ ಕಾರ್ಡ್ ಅನ್ನು ವಿಶೇಷ ಗುರುತಿನ ಪುರಾವೆಯಾಗಿ ನೀಡುತ್ತದೆ. ಯಾವುದೇ ಸರ್ಕಾರಿ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ ಅಥವಾ ಪಿಂಚಣಿ ಬ್ಯಾಂಕ್ ಖಾತೆ ತೆರೆಯುವುದು ಹೀಗೆ ಪ್ರತಿಯೊಂದು ಕೂಡ ಆಧಾರ್ ಕಾರ್ಡ್ ಬೇಕೇ ಬೇಕು. ಇನ್ನು ಆಧಾರ್ ಕಾರ್ಡ್ (Aadhaar Card) ಹೊಂದಿರುವ ವ್ಯಕ್ತಿ ಮರಣ ಹೊಂದಿದರೆ ಆ ಆಧಾರ್ ಕಾರ್ಡ್ ಅನ್ನು ನೀವು ಲಾಕ್ ಮಾಡುವುದು ಒಳ್ಳೆಯದು ಇಲ್ಲದೆ ಇದ್ದರೆ ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿ ಇರುವ ಆಧಾರ್ ಕಾರ್ಡ್ ಬಳಸಿಕೊಂಡು ಬೇರೆ ಯಾರಾದರೂ ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ.

Voter ID:

 

 

ಭಾರತದಲ್ಲಿ ಪ್ರತಿಯೊಬ್ಬ ಪ್ರಜೆ ತನ್ನ ಚುನಾವಣಾ ಮತ ಚಲಾವಣೆ ಹಕ್ಕನ್ನು ಸಲ್ಲಿಸಬೇಕು ಅಂದ್ರೆ ಆತನ ಬಳಿ ಮತದಾರರ ಗುರುತಿನ ಚೀಟಿ (Identity Card) ಇರಲೇಬೇಕು. ಮತಗಟ್ಟೆಯಲ್ಲಿ ಮತದಾರರ ಗುರುತಿನ ಚೀಟಿ ಇಲ್ಲದೆ ಇರುವ ಯಾವುದೇ ವ್ಯಕ್ತಿ ಮತ ಚಲಾಯಿಸಲು ಸಾಧ್ಯವಿಲ್ಲ. ಇನ್ನು ವೋಟರ್ ಐಡಿ (Voter ID) ಹೊಂದಿರುವ ವ್ಯಕ್ತಿ ಮರಣ ಹೊಂದಿದರೆ ಫಾರಂ ನಂಬರ್ 7 ಭರ್ತಿ ಮಾಡುವ ಮೂಲಕ ಆತನ ಮತದಾರರ ಗುರುತಿನ ಚೀಟಿಯನ್ನು ರದ್ದುಗೊಳಿಸಬಹುದು. ಯಾವುದೇ ವ್ಯಕ್ತಿ ಮೃತಪಟ್ಟಾಗ ಆತನ ಗುರುತಿನ ಚೀಟಿ ಬೇರೆ ಒಬ್ಬರ ಕೈ ಸೇರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಇಲ್ಲವಾದರೆ ಅದನ್ನ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

advertisement

Leave A Reply

Your email address will not be published.