Karnataka Times
Trending Stories, Viral News, Gossips & Everything in Kannada

BSNL: ಕಡಿಮೆ ಬೆಲೆಯ ರಿಚಾರ್ಜ್ ಮಾಡಿ ಹೆಚ್ಚಿನ ದಿನ ವ್ಯಾಲಿಡಿಟಿ ಸಿಗುವ ಬಿ.ಎಸ್.ಎನ್.ಎಲ್ ನ ಪ್ಲಾನ್ ನಿಮಗಾಗಿ!

advertisement

ಸರ್ಕಾರಿ ಸ್ವಾಮ್ಯದ ಟೆಲಿಫೋನ್ ನೆಟ್ವರ್ಕ್ ಆದ BSNL ಜನರ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಾ ಇರುತ್ತದೆ. ಬಿಎಸ್ಎನ್ಎಲ್ ಗೆ ಭಾರತದ ಅತ್ಯಂತ ದೊಡ್ಡ ನೆಟ್ವರ್ಕ್ ಇದೆ. ಹಳ್ಳಿ ಹಳ್ಳಿಗಳಲ್ಲೂ ಬಿಎಸ್ಎನ್ಎಲ್ ರೀಚ್ ಇದೆ. ಬೇರೆ ನೆಟ್ವರ್ಕ್ ಗಳು ಸಿಗದ ಜಾಗಗಳಲ್ಲಿಯೂ ಕೂಡ BSNL ಕವರೇಜ್ ಚೆನ್ನಾಗಿಯೇ ಇರುತ್ತದೆ. ಇದರಿಂದಾಗಿಯೇ BSNL ದೊಡ್ಡ ಕಸ್ಟಮರ್ ಬೇಸ್ ಅನ್ನು ಹೊಂದಿದೆ.

ಬಿಎಸ್ಎನ್ಎಲ್ ಈಗಾಗಲೇ ತಿಂಗಳಿಗೊಮ್ಮೆ ಮಾಡುವಂತಹ ರಿಚಾರ್ಜ್, ಮೂರು ತಿಂಗಳಿಗೆ ಒಮ್ಮೆ ಮಾಡುವಂತಹ ರಿಚಾರ್ಜ್ ಹಾಗೂ ವರ್ಷಕ್ಕೊಮ್ಮೆ ಮಾಡುವ ರಿಚಾರ್ಜ್ ಗಳನ್ನು ಹೊಂದಿದೆ. ಈಗ BSNL Talk Time ಕಡಿಮೆ ಇದ್ದರೂ ಹೆಚ್ಚಿನ ದಿನಗಳ ವ್ಯಾಲಿಡಿಟಿ ಇರುವ ಹೊಸ ಪ್ಲಾನ್ ಗಳನ್ನು ಲಾಂಚ್ ಮಾಡುತ್ತಿದೆ. ಇದು ಜನರ ಅಗತ್ಯಕ್ಕೆ ತಕ್ಕಂತೆ ಹೊಂದಿಸಲಾದ ಪ್ಲಾನ್ ಗಳು ಎನ್ನಲಾಗಿದೆ.

ಕಡಿಮೆ ಬೆಲೆಯ ಪ್ಲಾನ್ ಗಳನ್ನು ರಿಚಾರ್ಜ್ ಮಾಡಿಸಿ ಹೆಚ್ಚು ದಿನದ ವ್ಯಾಲಿಡಿಟಿ ಸಿಗಬೇಕು ಎಂದಾದರೆ ಇಂತಹ ರಿಚಾರ್ಜ್ ಗಳನ್ನು ನಾವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದು ಬಹಳ ಮಂದಿಯ ಅಗತ್ಯವೂ ಕೂಡ ಹೌದು. ಎರಡು ನಂಬರ್ ಗಳನ್ನು ಹೊಂದಿರುವವರು ಒಂದು ನಂಬರ್ ಅನ್ನು ಕೇವಲ ಒಳಬರುವ ಕರೆಗಳಿಗಾಗಿ ಬಳಸುತ್ತಿರುತ್ತಾರೆ. ಅಂತಹ ಬೆಳಕೆದಾರರಿಗೆ ಟಾಕ್ ಟೈಮ್ ಗಿಂತ ಹೆಚ್ಚಾಗಿ ವ್ಯಾಲಿಡಿಟಿ ಮುಖ್ಯ ಆಗಿರುತ್ತದೆ.

advertisement

397 ರ ಹೊಸ ಹೆಚ್ಚು ವ್ಯಾಲಿಡಿಟಿಯ ಪ್ಲಾನ್:

 

 

ಈಗ BSNL ಬಿಡುಗಡೆ ಮಾಡಿರುವ ಹೊಸ ಪ್ಲಾನ್ ನಿಂದ ಒಮ್ಮೆ ವ್ಯಾಲಿಡಿಟಿ ಎಕ್ಸ್ ಟೆನ್ಶನ್ ಮಾಡಿಕೊಂಡರೆ ಮುಂದಿನ ಐದು ತಿಂಗಳುಗಳ ತನಕ ಯಾವುದೇ ರೀತಿಯ ರೀಚಾರ್ಜ್ ಬೇಕಾಗುವುದಿಲ್ಲ. ಇದು ಬೇರೆ ಕಂಪನಿಗಳಿಗೆ ಹೋಲಿಸಿದರೆ ತುಂಬಾ ಅಗ್ಗವಾದ ಪ್ಲಾನ್ ಆಗಿದೆ. ಇದರ ಬೆಲೆ ಕೇವಲ 397 ಆಗಿದೆ. ಕೇವಲ 397ಗಳನ್ನು ರಿಚಾರ್ಜ್ ಮಾಡಿಸುವುದರ ಮೂಲಕ ಮುಂದಿನ ಐದು ತಿಂಗಳಗಳ ಕಾಲ ವ್ಯಾಲಿಡಿಟಿ ಇರುತ್ತದೆ. ಈ ಅವಧಿಯಲ್ಲಿ ವ್ಯಾಲಿಡಿಟಿ ಎಕ್ಸಟೆನ್ಶನ್ ಜೊತೆಗೆ ಬೇರೆ ಯಾವೆಲ್ಲ ಪ್ರಯೋಜನಗಳು ಸಿಗುತ್ತವೆ ಈಗ ನೋಡೋಣ.

ರಿಚಾರ್ಜ್ ಮಾಡಿರುವ ಮುಂದಿನ 150 ದಿನಗಳ ತನಕ ಎಲ್ಲಾ ಇನ್ಕಮಿಂಗ್ ಕರೆಗಳು ಉಚಿತ ಆಗಿರುತ್ತವೆ. ಆದರೆ ಒಂದು ವಿಷಯವನ್ನು ಗಮನ ಇಡಿ. ಎರಡು ತಿಂಗಳಗಳ ನಂತರ ನಿಮ್ಮ ಔಟ್ ಗೋಯಿಂಗ್ ಕರೆಗಳನ್ನು ನಿಲ್ಲಿಸಲಾಗುತ್ತದೆ. ಹಾಗಾಗಿ ನಿಮಗೆ ಇನ್ಕಮಿಂಗ್ ಮಾತ್ರ ಬೇಕು ಹಾಗೂ ಕಡಿಮೆ ದರದಲ್ಲಿ ಪ್ಲಾನ್ ಬೇಕು ಎಂದಾದಲ್ಲಿ ಬಿ ಎಸ್ ಎನ್ ಎಲ್ ನ ಈ ಪ್ಲಾನ್ ಅನ್ನು ಖಂಡಿತ ನೀವು ಪರಿಗಣಿಸಬಹುದು.

advertisement

Leave A Reply

Your email address will not be published.