Karnataka Times
Trending Stories, Viral News, Gossips & Everything in Kannada

Maruti Suzuki Baleno: 22Km ಮೈಲೇಜ್ ಕೊಡುವ ಮಾರುತಿ ಸುಜುಕಿ ಬಲೆನೊ ಕಾರಿನ ದರ ಹೆಚ್ಚಳ! ಈಗಿನ ಬೆಲೆ ಎಷ್ಟು?

advertisement

ಭಾರತೀಯರ ಮನಗೆದ್ದ ಮಾರುತಿ ಸುಜುಕಿಯ ಕೆಲವು ಕಾರುಗಳ ಬೆಲೆಯನ್ನು ಏರಿಸಿದೆ. ಹೌದು ಕೆಲ ದಿನಗಳ ಹಿಂದಷ್ಟೇ ಮಾರುತಿ ಸುಜುಕಿ ಬಲೆನೊ (Maruti Suzuki Baleno) ಕಾರಿನ ರೂಪಾಂತರಗಳ ಬೆಲೆ ರೂ.5,000 ಹೆಚ್ಚಳಗೊಂಡಿದ್ದು, ಈ ಕಾರು ರೂ.6.66 ಲಕ್ಷ ಎಕ್ಸ್ ಶೋರೂಂ ಆರಂಭಿಕ ಬೆಲೆಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಕಳೆದ ವರ್ಷ ದೇಶದಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿಯಲ್ಲಿ ಬಲೆನೊ ಸಹ ಇದ್ದು, 2023ರಲ್ಲಿ 1,93,989 ಯುನಿಟ್ ಕಾರುಗಳನ್ನು ಸೇಲ್ ಮಾಡಲಾಗಿದ್ದು, 2022ಕ್ಕೆ ಹೋಲಿಕೆ ಮಾಡಿದರೆ 1,85,665 ಯುನಿಟ್ ಶೇಕಡ 4% ಹೆಚ್ಚಳವಾಗಿದೆ.

Maruti Suzuki Baleno Design:

 

 

ಈ ಮಾರುತಿ ಸುಜುಕಿ ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, 5 ಜನರು ಆರಾಮದಾಯವಾಗಿ ಪ್ರಯಾಣಿಸಬಹುದು. ಇದೊಂದು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಆಗಿರುವುದರಿಂದ ನೆಕ್ಸಾ ಡೀಲರ್ ಮೂಲಕ ಮಾರಾಟಗೊಳಿಸಲಾಗುತ್ತದೆ. ಸಿಗ್ಮಾ, ಡೆಲ್ಟಾ, ಜಿಟಾ, ಆಲ್ಪಾ ರೂಪಾಂತರ ಹಾಗೂ ನೆಕ್ಸಾ ಬ್ಲೂ, ಆರ್ಕ್ಟಿಕ್ ವೈಟ್, ಗ್ರೈಂಡರ್ ಗ್ರೇ ಒಳಗೊಂಡಂತೆ 7-ಮೊನೊಟೋನ್ ಬಣ್ಣಗಳ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Maruti Suzuki Boleno Engine:

ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ (Maruti Suzuki Baleno), ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1.2-ಲೀಟರ್ ಪೆಟ್ರೋಲ್ ಎಂಜಿನ್ 90 PS ಗರಿಷ್ಠ ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ವೀಡ್ ಮ್ಯಾನುವಲ್/ 5-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.

advertisement

ಸಿಎನ್‌ಜಿ ಚಾಲಿತ ಬಲೆನೊ ಸಹ ಈ ರೀತಿಯ ಪವರ್‌ಟ್ರೇನ್ ಅನ್ನು ಪಡೆದಿದೆ. ಆದರೆ, 77.49 PS ಪವರ್, 98.5 Nm ಪೀಕ್ ಟಾರ್ಕ್ ಹೊರಕಾಕುತ್ತದೆ. ಕೇವಲ 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಸಿಗುತ್ತದೆ. ಇಂಧನ ದಕ್ಷತೆ ವಿಚಾರಕ್ಕೆ ಬರುವುದಾದರೆ, ಪೆಟ್ರೋಲ್ ರೂಪಾಂತರಗಳು 22.35 kmpl – 22.94 kmpl, ಸಿಎನ್‌ಜಿ ರೂಪಾಂತರಗಳು 30.61 km/kg ಮೈಲೇಜ್ ನೀಡುತ್ತವೆ.

Maruti Suzuki Bolaeno Features:

 

 

ಮಾರುತಿ ಸುಜುಕಿ ಬಲೆನೊ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಐಡಲ್ ಸ್ಟಾರ್ಟ್/ ಸ್ಟಾಪ್ ತಂತ್ರಜ್ಞಾನವನ್ನು ಹೊಂದಿದೆ. ಇದರೊಟ್ಟಿಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಯಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 4-ಸ್ಪೀಕರ್‌ಗಳನ್ನು ಒಳಗೊಂಡ ಸೌಂಡ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿಯನ್ನು ಪಡೆದಿದೆ..

ಮಾರುತಿ ಸುಜುಕಿ, ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಬಲೆನೊ ಕಾರನ್ನು ಕಳುಹಿಸುವುದಾಗಿ ನಿನ್ನೆ ಘೋಷಣೆ ಮಾಡಿತ್ತು. ಸುರಕ್ಷತೆಯ ದೃಷ್ಟಿಯಿಂದ ಈ ಹ್ಯಾಚ್‌ಬ್ಯಾಕ್‌ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ISOFIX ಆಂಕಾರೇಜ್‌, ರೇರ್ ಪಾರ್ಕಿಂಗ್ ಸೇನಾರ್ಸ್, 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಮಾರುತಿ ಸುಜುಕಿ (Maruti Suzuki) ಈ ಜನವರಿ ತಿಂಗಳು ಅರೆನಾ ಹಾಗೂ ನೆಕ್ಸಾ ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸುವ ವಿವಿಧ ಜನಪ್ರಿಯ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಅದಕ್ಕೆ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಬಲೆನೊ (Baleno) ಕೂಡ ಹೊರತಾಗಿಲ್ಲ ಎಂದು ತಿಳಿದುಬಂದಿದೆ

advertisement

Leave A Reply

Your email address will not be published.