Karnataka Times
Trending Stories, Viral News, Gossips & Everything in Kannada

Pavithra Gowda: ಪವಿತ್ರಾ ಗೌಡ ಗಂಡ ಮದುವೆಯ ನಂತರ ಯಾವ ಕೆಲಸ ಮಾಡ್ತಿದ್ದರು ಗೊತ್ತಾ? ವಿಚ್ಛೇದನ ಕೊಟ್ಟಿದ್ದೇಕೆ?

advertisement

ನಟ ದರ್ಶನ್ ಅವರು ಅಭಿನಯಿಸಿದ ಕಾಟೇರಾ ಚಿತ್ರದ ಗೆಲುವಿನ ಬೆನ್ನಲ್ಲೇ ದರ್ಶನ್ ಕುರಿತಾದ ಸುದ್ದಿಯೊಂದು ವೈರಲ್ ಆಗ್ತಿದೆ. ದರ್ಶನ್ ಹಾಗೂ ವಿಜಯ ಲಕ್ಷ್ಮೀ ನಡುವೆ ಅರಳಿದ, ಮಾಗಿದ ಪ್ರೇಮ ಕಥೆ ಎಲ್ಲರಿಗೂ ಗೊತ್ತಿರುವಂಥಹದ್ದೇ. ಆದರೆ ದರ್ಶನ್ ಹಾಗೂ ಪವಿತ್ರಾ ಗೌಡ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ ಮತ್ತು ಯಾವಾಗ ಅನ್ನುವುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.

ಈ ಚಿತ್ರದ ಸಮಯದಲ್ಲಿ ಮೊದಲ ಭೇಟಿ

ಇನ್ನೂ ಪವಿತ್ರಾ ಗೌಡ (Pavithra Gowda) ಖುದ್ದು ನಮ್ಮ ಅಮರ-ಮಧುರ ಸಂಬಂಧಕ್ಕೆ ಹತ್ತು ವರ್ಷ ಆಗಿದೆ ಎಂದು ಘಂಟಾಘೋಷವಾಗಿ ಹೇಳಿರುವ ಕಾರಣಕ್ಕೆ ಈ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಒಂದಷ್ಟು ಮಾತು ಸದ್ಯಕ್ಕೆ ಗಾಂಧಿನಗರದಲ್ಲಿ ಕೇಳಿ ಬರ್ತಿವೆ. ಆ ಪ್ರಕಾರ ನಟಿಯಾಗುವ ಉತ್ಸಾಹದಲ್ಲಿದ್ದ ಪವಿತ್ರಾ ಗೌಡ ದರ್ಶನ್ ಅವರನ್ನ ಮೊಟ್ಟ ಮೊದಲು ಭೇಟಿಯಾಗಿದ್ದು ಜಗ್ಗು ದಾದಾ ಚಿತ್ರದ ಸಮಯದಲ್ಲಿ. ಆಗಷ್ಟೇ ನಟಿಯಾಗಿ ನೆಲೆ ನಿಲ್ಲುವ ಪ್ರಯತ್ನವನ್ನ ಮಾಡ್ತಿದ್ದ ಪವಿತ್ರಾ ಗೌಡ ಛತ್ರಿಗಳು ಸಾರ್ ಛತ್ರಿಗಳು ಸೇರಿ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅದೃಷ್ಟ ಕೈ ಹಿಡಿದಿರಲಿಲ್ಲ. ಹೆಸರು ಸಿಗಲಿಲ್ಲ. ಆ ಸಮಯದಲ್ಲಿಯೇ ಜಗ್ಗು ದಾದಾ ಚಿತ್ರದ ಚಿತ್ರೀಕರಣಕ್ಕೆ ಕ್ಷಣಗಣನೆ ಶುರುವಾಗಿತ್ತು. ಇದೇ ಸಮಯದಲ್ಲಿ ಆಡಿಷನ್ ಕೊಡಲು ಪವಿತ್ರಾ ಗೌಡ ಹೋಗಿದ್ದರು. ಅಲ್ಲಿಯೇ ದರ್ಶನ್ ಅವರನ್ನ ಮೊಟ್ಟ ಮೊದಲ ಬಾರಿಗೆ ಪವಿತ್ರಾ ಗೌಡ ನೇರ ನೇರವಾಗಿ ಭೇಟಿಯಾಗಿದ್ದರು ಅನ್ನುವುದು ಸದ್ಯಕ್ಕೆ ಕೇಳಿ ಬರ್ತಿರುವ ಮಾತು.

advertisement

ಜಗ್ಗುದಾದ ಚಿತ್ರದ ನೆಪದಲ್ಲಿ ಆದ ಪರಿಚಯ, ಆ ನಂತರ ಸ್ನೇಹದ ಸ್ವರೂಪ ಪಡೆಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ ಅನ್ನುವ ಗಾಂಧಿನಗರದ ಮಂದಿಗೆ ಆ ನಂತರ ಪವಿತ್ರಾ ಗೌಡ ಮೇಲಿಂದ ಮೇಲೆ ಕಾಣಿಸತೊಡಗಿದರು. ಮುಂದೆ ನಡೆದಿದ್ದು ಎಲ್ಲವೂ ಕಣ್ಮುಂದೆಯೇ ಇದೆ.

ಪವಿತ್ರಾ ಗೌಡ ಮೊದಲು ಮದುವೆ ಆಗಿದ್ದು ಯಾರನ್ನ?

ಪವಿತ್ರಾ ಗೌಡ 18ರ ಪ್ರಾಯದಲ್ಲಿಯೇ ಮದುವೆಯಾಗಿದ್ದರು. ಇನ್ನು ಇವರ ಮಾಜಿ ಗಂಡ ಸಂಜಯ್ ಸಿಂಗ್ (Sanjay Singh) ಕನ್ನಡದವರು ಕೂಡ ಅಲ್ಲ.ಪವಿತ್ರಾ ಗೌಡ ಹಾಗೂ ಸಂಜಯ್ ಅವರದ್ದು ಅರೆಂಜ್ ಮ್ಯಾರೇಜ್ ಅಲ್ಲ ಬದಲಿಗೆ ಲವ್ ಮ್ಯಾರೇಜ್ ಅನ್ನುವುದನ್ನೂ ಕೂಡ ಸಂಶೋಧಿಸಿರುವ ಅನೇಕರು, ಚಾಮರಾಜಪೇಟೆಯಲ್ಲಿ ಈ ಜೋಡಿ ವಾಸವಾಗಿತ್ತು ಅನ್ನುವ ವಿಚಾರವನ್ನೂ ಕೂಡ ಹುಡುಕಿ ತೆಗೆದಿದ್ದಾರೆ. ದಿನಸಿ ಅಂಗಡಿ ವ್ಯಾಪಾರ ಮಾಡ್ತಿದ್ದ ಸಂಜಯ್ ಸಿಂಗ್ ಹಾಗೂ ಪವಿತ್ರಾ ಗೌಡ ಆರಂಭದಲ್ಲಿ ಚೆನ್ನಾಗಿಯೇ ಇದ್ದರು ಆದರೆ ಆ ನಂತರ ದಾಂಪತ್ಯ ಗೀತೆ ಶ್ರುತಿ ತಪ್ಪಿತು ಎಂಬ ಮಾತು ಕೂಡ ರಾಜರಾಜೇಶ್ವರಿ ನಗರದ ಸುತ್ತ ಮುತ್ತ ವ್ಯಾಪಕವಾಗಿ ಕೇಳಿ ಬರ್ತಿದೆ.

ಪವಿತ್ರಾ ಗೌಡ ಖುದ್ದು ಹೇಳಿದಂತೆ ಖುಷಿ ಗೌಡ ಇವರಿಬ್ಬರ ಪ್ರೀತಿಯ ಸಂಕೇತ ಅನ್ನುವ ಮಾತನ್ನ ಕೂಡ ಅನೇಕರು ಹೇಳ್ತಿದ್ದಾರೆ. ಸದ್ಯಕ್ಕೆ ಪವಿತ್ರಾ ಗೌಡ ಸಂಜಯ್ ಸಿಂಗ್ ಅವರಿಂದ ದೂರ ಇದ್ದಾರೆ. ವಿಚ್ಚೇದನ ಪಡೆದು ಪುತ್ರಿ ಜೊತೆ ನೆಮ್ಮದಿಯ ಬದುಕನ್ನ ನಡೆಸುತ್ತಿದ್ದಾರೆ. ಪವಿತ್ರಾ ಗೌಡ ಈ ಮಾತನ್ನ ಖುದ್ದು ಹೇಳಿದ್ದಾರೆ ಕೂಡ. ನಿಜಾ, ಪವಿತ್ರಾ ಗೌಡ ಅವರಿಗೆ ಈ ವಿಚಾರ ದೊಡ್ಡದು ಮಾಡುವ ಮನಸಿಲ್ಲ. ಆದರೂ ಮನಸಿಲ್ಲದಿದ್ದರೂ ವಿಚಾರ ದಿನದಿಂದ ದಿನಕ್ಕೆ ದೊಡ್ಡದಾಗ್ತಿದೆ. ವಿಜಯ ಲಕ್ಷ್ಮೀ ದರ್ಶನ್ (Vijayalakshmi Darshan) ಹಾಗೂ ಪವಿತ್ರಾ ಗೌಡ ನಡುವಿನ ಈ ಸಮರ ಅಂತ್ಯವಾಗುವುದು ಯಾವಾಗ ಅನ್ನುವುದನ್ನ ಈಗ ಕಾದು ನೋಡಬೇಕಿದೆ.

advertisement

Leave A Reply

Your email address will not be published.