Vijayalakshmi Darshan: ದರ್ಶನ ಸಂಬಂಧಿತ ಪವಿತ್ರ ಗೌಡ ಪೋಸ್ಟ್ ಗೆ ತಿರುಗೇಟು ಕೊಟ್ಟ ವಿಜಯಲಕ್ಷ್ಮಿ ದರ್ಶನ್, ವೈರಲ್ ಪೋಸ್ಟ್ ಇಲ್ಲಿದೆ.
ಸದ್ಯ ದರ್ಶನ್ ಅಭಿನಯದ ಕಾಟೇರ ಚಿತ್ರ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಕಲೆಕ್ಷನ್ ವಿಚಾರದಲ್ಲೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಟಿಕೆಟ್ ಸೇಲ್ ನಲ್ಲೂ ಟಾಪ್ ಅಲ್ಲಿಯೇ ಇತ್ತು. ಚಿತ್ರದ ಕಂಟೆಂಟ್ ಕೂಡ ಸೂಪರ್ ಎಂದು ಸಿನಿಪ್ರೀಯರು ಕಾಮೆಂಟ್ ಮಾಡಿದ್ದರು.ಆದರೆ ಹೆಚ್ಚು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಗಾಗ್ಗೆ ಕಾಟ್ರವರ್ಸಿ ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಸದ್ಯ ಈಗಲೂ ಮತ್ತೊಂದು ಸುದ್ದಿ ವೈರಲ್ ಆಗುತ್ತಿದೆ.
ಪೋಟೋ ವೈರಲ್
ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡರ ಒಟ್ಟಿಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಿಂದೆಯು ಬಹಳಷ್ಟು ವೈರಲ್ ಆಗಿತ್ತು. ಈ ಹಿಂದೆಯೂ ಹಲವು ಸಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧದ ಕುರಿತು ಚರ್ಚೆಗಳಾಗಿದ್ದು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಮೊನ್ನೆಯಷ್ಟೆ ದರ್ಶನ್ ಪವಿತ್ರ ಗೌಡ (Pavitra Gowda) ಮಗಳು ಖುಷಿ ಗೌಡ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾಗಿಯಾದ ವಿಡಿಯೋವನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲೂ ದರ್ಶನ್ ಮತ್ತು ಖುಷಿ ಗೌಡ ಡ್ಯಾನ್ಸ್ ಮಾಡುವ ದೃಶ್ಯವಿದ್ದು ಈ ವಿಡಿಯೋ ಕೂಡ ಬಹಳಷ್ಟು ವೈರಲ್ ಆಗಿತ್ತು.
View this post on Instagram
ದರ್ಶನ್ ಪತ್ನಿ ಆಕ್ರೋಶ
ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರು ಪವಿತ್ರಾ ಗೌಡ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಪತಿಯೊಂದಿಗೆ ಇದ್ದ ಪೋಟೋಗಳನ್ನು ಹಂಚಿಕೊಂಡ ಪವಿತ್ರಾ ಗೌಡ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ಸಹ ನೀಡಿದ್ದಾರೆ. ವಿಜಯಲಕ್ಷ್ಮಿ ಅವರು ದರ್ಶನ್ ಹಾಗೂ ತಮ್ಮ ಪುತ್ರ ಜೊತೆಗಿನ ಪೋಟೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಕುಟುಂಬವೇ ಎಲ್ಲ ಎಂದು ಕ್ಯಾಪ್ಷನ್ ಕೊಟ್ಟು ಪೋಸ್ಟ್ ಮಾಡಿದ್ದರು.ಆದೇ ಸಂದರ್ಭದಲ್ಲಿ ಪವಿತ್ರ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ನನ್ನ ಮತ್ತು ದರ್ಶನ್ ಅವರ 10ವರ್ಷದ ಜರ್ನಿ ಹೀಗೆ ಇರಲಿ ಎಂದು ಪೋಸ್ಟ್ ಮಾಡಿದ್ದಾರೆ.
View this post on Instagram
ಕಾನೂನು ಕ್ರಮ
ಈ ಬಗ್ಗೆ ದರ್ಶನ್ ಪತ್ನಿ ಬೇರೆಯವರ ಗಂಡನ ಜೊತೆ ಇರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವಾಗ ಪವಿತ್ರಾ ಗೌಡ ಅವರು ಯೋಚಿಸಿ ಹಾಕಬೇಕು. ಮದುವೆಯಾಗಿರುವ ಪುರುಷ ಎಂದು ಗೊತ್ತಿದ್ದರೂ ವೈಯಕ್ತಿಕ ಖುಷಿಗೊಸ್ಕರ ಅವರು ಈ ರೀತಿ ಮಾಡಿದ್ದಾರೆ. ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಕಾಲ ಬಂದಿದೆ. ಇಡೀ ಸಮಾಜಕ್ಕೆ ತಪ್ಪು ಸಂದೇಶ ನೀಡಲು ಬರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.