Karnataka Times
Trending Stories, Viral News, Gossips & Everything in Kannada

Old Pension Scheme: ಇಂತಹ ರಾಜ್ಯ ಸರಕಾರಿ ನೌಕರರಿಗೆ ಮಾತ್ರ ಹಳೆ ಪಿಂಚಣಿ ಯೋಜನೆ ಜಾರಿ, ಸರ್ಕಾರದ ಹೊಸ ಆದೇಶ!

advertisement

ಇಂದು ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಆರಂಭ ಮಾಡುವ ಮೂಲಕ ಬಡ ವರ್ಗದ ಜನತೆಗೆ ಗುಡ್ ನ್ಯೂಸ್ ನೀಡಿದೆ. ಆದೇ ರೀತಿ ಚುನಾವಣೆ ಮೊದಲು ಹೇಳಿದ ಪ್ರಣಾಳಿಕೆ ‌ಯಂತೆ ಕೆಲವೊಂದು ಸೌಲಭ್ಯ ಗಳನ್ನು ಸಹ ಜಾರಿಗೆ ತರುತ್ತಿದೆ. ಇದೀಗ ರಾಜ್ಯ ಸರಕಾರ ಸರಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದು 2006ರ ನಂತರ ನೇಮಕವಾದ ರ 13 ಸಾವಿರ ಸರ್ಕಾರಿ ನೌಕರರನ್ನು ಹಳೆ ಪಿಂಚಣಿ ಯೋಜನೆ (Old Pension Scheme) ವ್ಯಾಪ್ತಿಗೆ ಸೇರಿಸಬೇಕೆಂದು ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಟ್ವೀಟ್:

 

 

ಚುನಾವಣೆ ನಡೆಯುವ ಮೊದಲು NPS ನೌಕರರು ಮುಷ್ಕರು ಮಾಡುವ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿನೀಡಿ ನಾವು ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೆ, ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ ಎಂದು ಟ್ವೀಟ್ (Tweet) ಮಾಡಿದ್ದಾರೆ. 2006 ಏಪ್ರಿಲ್‌ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006 ರ ನಂತರ ನೇಮಕಾತಿ ಆದ ರಾಜ್ಯ ಸರ್ಕಾರದ ಸುಮಾರು 13,000 ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ (Old Pension Scheme) ವ್ಯಾಪ್ತಿಗೆ ಒಳಪಡಿಸಿ ಆದೇಶ ವನ್ನು ಪ್ರಕಟಿಸಿದ್ದಾರೆ.

 

advertisement

 

ಮುಷ್ಕರ ‌ಮಾಡಿದ್ದರು:

2006 ರ ನಂತರ ನೇಮಕವಾದ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ (Old Pension Scheme) ಯನ್ನು ಜಾರಿಗೆ ಮಾಡಲಾಗಿದ್ದು ಈ ಬಗ್ಗೆ ವಿರೋಧಿಸಿ ರಾಜ್ಯ ಸರ್ಕಾರಿ ನೌಕರರು ಹೋರಾಟ ಮಾಡುತ್ತಲೆ ಬಂದಿದ್ದಾರೆ. ಈ ನಿಯಮದಿಂದ ಸರಕಾರಿ ನೌಕರರು ನಿವೃತ್ತಿ ಸಂದರ್ಭದಲ್ಲಿ ಯಾವುದೇ ಸೌಲಭ್ಯವಿಲ್ಲದೇ ಮನೆಗೆ ಹೋಗಬೇಕಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರು ಆಕ್ರೋಶ ವ್ಯಕ್ತಪಡಿಸಿ ಮುಷ್ಕರ ಮಾಡಿದ್ದರು. ಈ ಬಗ್ಗೆ ನೌಕರರು ವೋಟ್‌ ಫಾರ್‌ ಒಪಿಎಸ್‌ ಅಭಿಯಾನ ಮಾಡಿ ಯಾವ ಪಕ್ಷ ಎನ್‌ಪಿಎಸ್‌ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಲಿದ್ದರೋ ಆ ಪಕ್ಷಕ್ಕೆ ನಮ್ಮ ಬೆಂಬಲ ಎಂದು ಹೇಳಿದ್ದರು. ಆ ಸಂಧರ್ಭದಲ್ಲಿ ಬೇಡಿಕೆ ಈಡೇರಿಸುತ್ತೇನೆ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದರು. ಇದೀಗ ಹೇಳಿದಂತೆ ನಡೆದುಕೊಂಡಿದ್ದಾರೆ. ಆದ್ರೆ ಈ ಅವಕಾಶವು ಏಪ್ರಿಲ್ 2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿದವರಿಗೆ ಮಾತ್ರ ಆಗಿದೆ.

advertisement

Leave A Reply

Your email address will not be published.