Karnataka Times
Trending Stories, Viral News, Gossips & Everything in Kannada

Driving Licence: ಈಗ ನೀವು RTO ಕಛೇರಿಗೆ ತೆರಳದೆ ಮನೆಯಲ್ಲಿಯೇ ಈ ರೀತಿಯಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು,

advertisement

ಇಂದು ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ. ಪ್ರತಿ ಮನೆಯಲ್ಲೂ ಒಂದಾದರೂ ವಾಹನದ ಅವಶ್ಯಕತೆ ಇದ್ದೆ ಇರುತ್ತದೆ. ಅದೇ ರೀತಿ ವ್ಯಕ್ತಿಯು ವಾಹನ ಚಲಾವಣೆ ಮಾಡುದಾದ್ರೆ ಕೆಲವೊಂದು ನಿಯಮಗಳು ಕೂಡ ಇದ್ದು ವಾಹನ ಚಲಾವಣೆ ಮಾಡುವವರು ಚಾಲನಾ ಪರವಾನಗಿ ಪಡೆಯುದು ಕೂಡ ಮುಖ್ಯವಾಗುತ್ತದೆ. ಇಂದು ನೀವು ಸ್ವಂತ ಚಾಲನಾ ಪರವಾನಗಿಯನ್ನು ಪಡೆಯಬೇಕಾದರೆ ಹೆಚ್ಚು ಕಷ್ಟ ಪಡಬೇಕಾಗಿಲ್ಲ. ಈಗ ನೀವು ನಿಮ್ಮ ಸ್ವಂತ ಚಾಲನಾ ಪರವಾನಗಿ (Driving Licence) ಯನ್ನು ಮನೆಯಿಂದಲೇ ಪಡೆಯಬಹುದು.

ಅನ್ ಲೈನ್ ಮೂಲಕ ಪಡೆದುಕೊಳ್ಳಿ:

ಇಂದು ನೀವು ಅನ್ ಲೈನ್ ಮೂಲಕ ಚಾಲನಾ ‌ಪರವಾನಗಿ (Driving Licence) ಪಡೆದುಕೊಳ್ಳಲು ಅವಕಾಶ ಇದ್ದು 1300 ರಿಂದ ರೂ 1500 ಖರ್ಚು ಮಾಡಬೇಕಾಗುತ್ತದೆ, ಮೊದಲು ನೀವು ಕಲಿಕಾ ಪರವಾನಗಿಯನ್ನು ಪಡೆಯಬೇಕಾದರೆ ರೂ 450 ರಿಂದ 500, ಶಾಶ್ವತ ಪರವಾನಗಿ ಅಥವಾ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಲು, ಒಂದು ಸಾವಿರ ರೂಪಾಯಿಗಳವರೆಗೆ ಶುಲ್ಕವನ್ನು ಪಾವತಿಮಾಡಬೇಕು.

RTO ಕಚೇರಿಗೆ ತರಳದೆ ಡ್ರೈವಿಂಗ್ ಲೈಸೆನ್ಸ್ ಪಡೆಯಿರಿ:

 

advertisement

 

ಆರ್‌ಟಿಒ ಕಚೇರಿಗೆ ಹೋಗದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು, ಮೊದಲು ನೀವು ಸಾರಿಗೆ ಪೋರ್ಟಲ್‌ನಲ್ಲಿ ಕಲಿಕಾ ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕು. ಮೊಬೈಲ್‌ನಿಂದ ಅಥವಾ ಯಾವುದೇ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಹಾಕಬಹುದಾಗಿದೆ. ಆದ್ರೆ ಕಲಿಕೆಯ ಚಾಲನಾ ಪರವಾನಗಿ ಪ್ರಮಾಣಪತ್ರವು 6 ತಿಂಗಳವರೆಗೆ ಮಾನ್ಯವಾಗಿದ್ದು 6 ತಿಂಗಳೊಳಗೆ ನಿಮ್ಮ ಚಾಲನಾ ಪರವಾನಗಿಯನ್ನು ಮಾಡಬಹುದು.

ಹೀಗೆ ಅರ್ಜಿ ಹಾಕಿ

ಮೊದಲಿಗೆ https://parivahan.gov.in/parivahan/ ಗೆ ಹೋಗಿ. ಡ್ರೈವಿಂಗ್ ಲೈಸೆನ್ಸ್ (Driving Licence) ಸಂಬಂಧಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ , ನಿಮ್ಮ ರಾಜ್ಯದ ಮೇಲೆ ಆಯ್ಕೆ ಮಾಡಿ.ಇಲ್ಲಿ Learner s Licence Application ಆಯ್ಕೆ ಇರಲಿದ್ದು ವೈಯಕ್ತಿಕ ವಿವರಗಳನ್ನು ನಮುದಿಸಿ.ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ. ದಾಖಲೆಗಳನ್ನು ಅಪ್‌ಲೋಡ್ ಮಾಡಿ. ನಂತರದಲ್ಲಿ ನಿಮ್ಮ ಪರೀಕ್ಷೆಯ ದಿನಾಂಕವನ್ನು ಆಯ್ಕೆಮಾಡಿ ಹಣ ಪಾವತಿ ಮಾಡಿ.

advertisement

Leave A Reply

Your email address will not be published.