Karnataka Times
Trending Stories, Viral News, Gossips & Everything in Kannada

Driving Licence: ಡ್ರೈವಿಂಗ್ ಲೈಸೆನ್ಸ್ ಇರುವವರಿಗೆ ಹೊಸ ನಿಯಮ; ಆಧಾರ್ ಲಿಂಕ್ ವಿಷಯವಾಗಿ ಹೊಸ ಸೂಚನೆ

advertisement

ದೇಶದಲ್ಲಿ ಸಾಕಷ್ಟು ಹೊಸ ಹೊಸ ಕಾನೂನುಗಳು ಜಾರಿಗೆ ಬರುತ್ತಿವೆ. ಆಧಾರ್ ಕಾರ್ಡ್ (Aadhaar Card), ಪ್ಯಾನ್ ಕಾರ್ಡ್ (PAN Card) ಮೊದಲಾದ ಗುರುತಿನ ಪುರಾವೆ ಇಟ್ಟುಕೊಂಡು ನಡೆಯುತ್ತಿರುವ ವಂಚನೆಯನ್ನು ತಪ್ಪಿಸುವ ಸಲುವಾಗಿ ಒಬ್ಬ ವ್ಯಕ್ತಿ ಎಲ್ಲಾ ವೈಯಕ್ತಿಕ ದಾಖಲೆಗಳನ್ನು ಆಧಾರ್ ಕಾರ್ಡ್ ಒಳಗೆ ಸೇರಿಸಲು ಸರ್ಕಾರ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಬ್ಯಾಂಕ್ ಖಾತೆಗೆ, ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಕಡ್ಡಾಯವಾಗಿದೆ ಅದೇ ರೀತಿ ಇದೀಗ ಡ್ರೈವಿಂಗ್ ಲೈಸೆನ್ಸ್ (Driving Licence) ನಲ್ಲಿ ಹೊಸ ರೂಲ್ಸ್ ತರಲಾಗಿದ್ದು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.

Driving Licence New Rule:

ನೀವು ಇನ್ನು ಮುಂದೆ ರಸ್ತೆಯಲ್ಲಿ ರಾಜಾರೋಷವಾಗಿ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡು ವಾಹನ ಚಲಾವಣೆ ಮಾಡಬೇಕು ಅಂದ್ರೆ ಈ ನಿಯಮ ಪಾಲನೆ ಮಾಡಲೇಬೇಕು ಅಂದರೆ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಕೊಳ್ಳಲೇಬೇಕು.

ಒಂದು ವೇಳೆ ಡ್ರೈವಿಂಗ್ ಲೈಸೆನ್ಸ್ ಹಾಗೂ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಕಳೆದುಕೊಳ್ಳುತ್ತೀರಿ. ಹಾಗಂದ ಮಾತ್ರಕ್ಕೆ ನೀವು RTO ಕಚೇರಿಗೆ ಹೋಗಿ ದಿನಗಟ್ಟಲೆ ಕಾದು ಡ್ರೈವಿಂಗ್ ಲೈಸೆನ್ಸ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್  ಮಾಡಿಕೊಳ್ಳುವ ಅಗತ್ಯವಿಲ್ಲ. ಕೈಯಲ್ಲಿ ಮೊಬೈಲ್ ಹಿಡಿದು ಅಥವಾ ಕಂಪ್ಯೂಟರ್ ಮೂಲಕ ಕ್ಷಣಮಾತ್ರದಲ್ಲಿ ಮನೆಯಲ್ಲಿ ಕುಳಿತು ಆಧಾರ್ ಕಾರ್ಡ್ ನೊಂದಿಗೆ ರೇಷನ್ ಕಾರ್ಡ್ (Ration Card) ಲಿಂಕ್ ಮಾಡಿಕೊಳ್ಳಬಹುದು.

advertisement

ಆನ್ಲೈನ್ ನಲ್ಲಿ ಲಿಂಕ್ ಮಾಡುವುದು ಹೇಗೆ?

  • ಮೊದಲಿಗೆ ನಿಮ್ಮ ಗೂಗಲ್ ಕ್ರೋಮ ಬ್ರೌಸರ್ (Google Chrome Browser) ತೆರೆಯಿರಿ. ಅಲ್ಲಿ ನಿಮ್ಮ ರಾಜ್ಯಕ್ಕೆ ಸಂಬಂಧಿಸಿದ ರಸ್ತೆ ಸಾರಿಗೆ ಪೋರ್ಟಲ್ (transport.karnataka.gov.in) ಅನ್ನು ಓಪನ್ ಮಾಡಿ.
  • ಪೋರ್ಟಲ್ ನ ಹೊಸ ಪುಟ ತೆಗೆದುಕೊಂಡ ನಂತರ ‘ಲಿಂಕ್ ಆಧಾರ್’ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ನಂತರ ಕೆಳಗಡೆ ಮೆನುವಿನಲ್ಲಿ ಚಾಲನಾ ಪರವಾನಿಗಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು
  • ಈಗ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆ ಯನ್ನು ನಮೂದಿಸಿ ವಿವರಗಳನ್ನು ಪಡೆಯಿರಿ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ
  • ಈಗ ಪರದೆಯ ಮೇಲೆ ನಿಮ್ಮ ಡ್ರೈವಿಂಗ್ ಪರಮಾನಿಗೆ ಎಲ್ಲ ವಿವರಗಳು ಕಾಣಿಸುತ್ತವೆ. ವಿವರಗಳ ಕೆಳಭಾಗದಲ್ಲಿ ಒಂದು ಬಾಕ್ಸ್ ನಲ್ಲಿ ಆಧಾರ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಲು ಕೇಳಲಾಗುತ್ತದೆ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿ ಸಬ್ಮಿಟ್ ಎಂದು ಕ್ಲಿಕ್ ಮಾಡಿ.
  • ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ ಅದನ್ನು ನಮೂದಿಸಿ. ಮಾಡಿದ್ರೆ ನಿಮ್ಮ ಡಿಎಲ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗುತ್ತದೆ.

ಆಫ್ ಲೈನ್ ನಲ್ಲಿಯೂ ಮಾಡಬಹುದು DL ಹಾಗೂ Aadhaar Card ಲಿಂಕ್:

ನೀವು ನಿಮ್ಮ ಚಾಲನಾ ಪರವಾನಿಗೆಯ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಪ್ರಾದೇಶಿಕ ಸಾರಿಗೆ ಕಚೇರಿ ಅಂದರೆ RTO Office ಗೆ ಹೋಗಿ ಅಲ್ಲಿಯ ಸಿಬ್ಬಂದಿಗಳನ್ನ ಸಂಪರ್ಕಿಸಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಲು ಒಂದು ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ಅರ್ಜಿಯನ್ನು ಭರ್ತಿ ಮಾಡಿ ಅರ್ಜಿಯಲ್ಲಿ DL Number ಹಾಗೂ Aadhaar Card Number ಯನ್ನು ಸರಿಯಾಗಿ ನಮೂದಿಸಿ ಸಿಬ್ಬಂದಿಗಳಿಗೆ ಕೊಡಬೇಕು.

ನೀವು ಈ ರೀತಿ ಅರ್ಜಿ ಸಲ್ಲಿಸುವಾಗ ಡ್ರೈವಿಂಗ್ ಲೈಸೆನ್ಸ್ ನ ಸ್ವಯಂ ದೃಢೀಕರಿಸಿದ ಪ್ರತಿಯನ್ನು ಲಗತ್ತಿಸಬೇಕು. ಮಾಡಿದ ನಂತರ RTO ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿ ಕೊಡುತ್ತದೆ ಲಿಂಕ್ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ (Mobile Number) ಗೆ ಲಿಂಕ್ ಆಗಿರುವ ಬಗ್ಗೆ SMS ಬರುತ್ತದೆ.

advertisement

Leave A Reply

Your email address will not be published.