Karnataka Times
Trending Stories, Viral News, Gossips & Everything in Kannada

WhatsApp: ಒಂದೇ ಫೋನ್ ಅಲ್ಲಿ ಎರಡು ವಾಟ್ಸಪ್ ಬಳಸೋದು ಹೇಗೆ ಗೊತ್ತಾ?

Two WhatsApp In One Phone

advertisement

ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಇಲ್ಲದವರು ವಾಟ್ಸಪ್ (WhatsApp) ಬಳಸದವರು ಯಾರೂ ಇಲ್ಲ. ಇಷ್ಟು ದಿನ ಒಂದು ಮೊಬೈಲ್ ಅಲ್ಲಿ ಒಂದೇ ವಾಟ್ಸಪ್ ಬಳಸಬಹುದಿತ್ತು. ಆದರೆ ಈಗ ಒಂದೇ ಫೋನ್ ನಲ್ಲಿ ಎರಡೆರಡು ವಾಟ್ಸಪ್ ಖಾತೆಗಳನ್ನು ಹೊಂದುವ ಬಳಕೆದಾರರ ಹಳೆಯ ಬೇಡಿಕೆಗೆ ಕೊನೆಗೂ ವಾಟ್ಸಪ್ ನ ಮಾತೃಸಂಸ್ಥೆ ಮೆಟಾ ಅಸ್ತು ಎಂದಿದೆ.

ಈ ಬಗ್ಗೆ ಸ್ವತಃ ವಾಟ್ಸಪ್ ಮಾಲೀಕತ್ವ ಇರುವ ಫೇಸ್ ಬುಕ್ ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಘೋಷಣೆ ಮಾಡಿದ್ದು, ಒಬ್ಬ ಬಳಕೆದಾರರು ಶೀಘ್ರದಲ್ಲೇ ತಮ್ಮ ಒಂದೇ ಮೊಬೈಲ್ ನಲ್ಲಿ ಎರಡು ವಾಟ್ಸಪ್ ಖಾತೆಗಳನ್ನು ಒಂದೇ ಸಮಯದಲ್ಲಿ ಲಾಗ್ ಇನ್ ಮಾಡಬಹುದು. ಮುಂಬರುವ ದಿನಗಳಲ್ಲಿ ವಾಟ್ಸಪ್ ಈ ನಿರ್ದಿಷ್ಟ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಬಳಕೆದಾರರಿಗೆ ಹೊರತರಲಿದೆ ಎಂದು ಮಾರ್ಕ್ ಜುಕರ್‌ಬರ್ಗ್ (Mark Zuckerberg) ಘೋಷಿಸಿದ್ದಾರೆ. ಅಲ್ಲಿ ನಾವು ನಮ್ಮ ಸಂಪರ್ಕ ದಲ್ಲಿರುವವರನ್ನು ಸಿಂಕ್ (Sync) ಮಾಡಬಹುದು ಹಾಗೂ ಬರುವ ಎಲ್ಲ ಸೂಚನೆಗಳು ಕೂಡ ಪ್ರತ್ಯೇಕವಾಗಿಯೇ ಬರುತ್ತವೆ.

ವೈಶಿಷ್ಟ್ಯಗಳು ಏನೇನು?

ವಾಟ್ಸಪ್ ಈ ನೂತನ ಕ್ರಮದಿಂದ ನಿಮ್ಮ ಪರ್ಸ್ನಲ್ ಮತ್ತು ವ್ಯವಹಾರಿಕ ನಡುವೆ ಅಂತರ ಕಾಯ್ದುಕೊಳ್ಳಲು ಮತ್ತು ಬಳಕೆಯನ್ನು ಸರಳೀಕರಣಗೊಳಿಸಲು ಸಹಾಯಕವಾಗಿದೆ. ಈಗ ನೀವು ಇನ್ನು ಮುಂದೆ ಮತ್ತೊಂದು ಖಾತೆಗೆ ಲಾಗಿನ್ ಆಗಲು ಪ್ರತಿ ಬಾರಿ ಲಾಗ್ ಔಟ್ ಮಾಡುವ ಅಗತ್ಯವಿಲ್ಲ, ಎರಡು ಫೋನ್‌ಗಳನ್ನು ಕೊಂಡೊಯ್ಯಬೇಕು ಅಥವಾ ತಪ್ಪು ಸ್ಥಳದಿಂದ ಸಂದೇಶ ಕಳುಹಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಕಂಪನಿಯು ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. ಹಾಗಾಗಿ ನಮ್ಮ ವಯಕ್ತಿಕ ಚಾಟ್ ಗಳನ್ನು ರಹಸ್ಯವಾಗಿ ಇಟ್ಟು ಕೊಳ್ಳಬಹುದಾಗಿದೆ.

advertisement

ಅದೇ ಫೋನ್ ಅಲ್ಲಿ ಎರಡನೇ ವಾಟ್ಸಪ್ ಖಾತೆ ಬಳಸಲು ಮಾಡಬೇಕಾದದ್ದು ಇಷ್ಟೇ ಅಪ್ಲಿಕೇಶನ್ ತೆಗೆದ ನಂತರ ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳನ್ನು ಒತ್ತಿ ಮತ್ತು ಸೆಟ್ಟಿಂಗ್ ಅನ್ನು ಆಯ್ಕೆ ಮಾಡಿ . ಅಲ್ಲಿ ಹೆಸರಿನ ಪಕ್ಕದಲ್ಲೇ ನಿಮ್ಮ ಪ್ರೊಫೈಲ್ ಫೋಟೋ ಹಾಗೂ ಕ್ಯೂ ಆರ್ ಕೊಡ್ ಇರುತ್ತದೆ. ಅದರ ಪಕ್ಕದಲ್ಲೇ ಒಂದು ಗುರುತು ಇದೆ. ಅಲ್ಲಿ ನೀವು ಕ್ಲಿಕ್ ಮಾಡಿದರೆ ಸಾಕು ಅಲ್ಲಿ ನೀವು ನಿಮ್ಮ ಎರಡನೇ ವಾಟ್ಸಪ್ ಖಾತೆಯನ್ನು ಸೇರಿಸಬಹುದು.

ಒಂದು ವೇಳೆ ಈ ಪ್ರಕ್ರಿಯೆ ನೀವು ಮೊದಲ ಬಾರಿ ಮಾಡುತ್ತಿದ್ದರೆ ಆಗ ಮೊದಲ ಖಾತೆಯನ್ನು ಒಮ್ಮೆ ಸೈನ್ ಆಫ್ ಮಾಡಬೇಕಾಗುತ್ತದೆ.
ನಿಮ್ಮ ಫೋನ್ ಗೆ ಎರಡನೇ ವಾಟ್ಸಪ್ ಖಾತೆ ಸೇರಿದ ನಂತರ ಚಾಟ್ ಗಳು, ನವೀಕರಣಗಳು, ಸಮುದಾಯಗಳು ಮತ್ತು ಕರೆಗಳು ಬರುವಂತೆ ಪ್ರತಿಖಾತೆಯ ಸೆಟ್ಟಿಂಗ್ ಅಲ್ಲಿ ಅನುವು ಮಾಡಿಕೊಡಬೇಕಾಗುತ್ತದೆ.

ಖಾತೆಗಳ ವಿನಿಮಯ ಮಾಡಿ ಕೊಳ್ಳುವುದು ಹೇಗೆ?

ಇನ್ನು, ಆರಂಭಿಕ ಪರಿಶೀಲನೆಯ ನಂತರ ಎರಡನೇ ಸಾಧನ ಅಥವಾ ಸಿಮ್ ಇಲ್ಲದೆ ಎರಡೂ ಖಾತೆಗಳಿಗೆ ಅಪ್ಲಿಕೇಶನ್ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ. ಒನ್‌ ಟೈಮ್‌ ಪಾಸ್‌ಕೋಡ್ ಸ್ವೀಕರಿಸಲು ಬಳಕೆದಾರರಿಗೆ ದ್ವಿತೀಯ ಸಾಧನ ಅಥವಾ ಪರ್ಯಾಯ ಸಿಮ್ ಕಾರ್ಡ್ ಅಗತ್ಯವಿದೆ. ಬಳಕೆದಾರರು ತಮ್ಮ ಎರಡನೇ ಖಾತೆಯನ್ನು ಬೇರೆ ಸಾಧನದಲ್ಲಿ ಪ್ರವೇಶಿಸಲು ಅನುಮತಿಸಲು ವಾಟ್ಸಪ್ ಈ ಕೋಡ್‌ಗಳನ್ನು SMS ಮೂಲಕ ಕಳುಹಿಸುತ್ತದೆ. ಆಗ ಬರುವ ಖಾತೆಗಳ ಬದಲಿಸಿ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಹಾಗಾಗಿ ಬಯಸಿದಾಗೆಲ್ಲ ಒಟ್ಟೊಟ್ಟಿಗೆ ಎರಡೂ ಖಾತೆಗಳನ್ನು ಬಳಸಲಾಗುವುದಿಲ್ಲ.

advertisement

Leave A Reply

Your email address will not be published.