Karnataka Times
Trending Stories, Viral News, Gossips & Everything in Kannada

Rashmika Mandanna: ನಟಿ ರಶ್ಮಿಕಾ ಮಂದಣ್ಣ ಖಾಸಗಿ ವಿಷಯ ಬಯಲು ಮಾಡಿದ ಬಾಲಯ್ಯ

advertisement

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಕರ್ನಾಟಕಕ್ಕಿಂತಲೂ ಪರ ಭಾಷೆಯಲ್ಲೇ ತುಂಬಾ ಜನಪ್ರಿಯ ನಟಿಯಾಗುತ್ತಿದ್ದಾರೆ. ಕಿರಿಕ್ ಪಾರ್ಟಿ ಮೂಲಕ ಸಿನಿ ಜರ್ನಿ ಆರಂಭ ಮಾಡಿದ್ದ ಇವರು ಬಹುತೇಕ ಫೇಮಸ್ ನಟ ನಟಿಯರ ಜೊತೆ ತೆರೆ ಹಂಚಿಕೊಂಡಿದ್ದಾರೆ.ಅದೇ ರೀತಿ ಅನೇಕ ವಿಚಾರದಲ್ಲಿ ಟ್ರೋಲ್ ಕೂಡ ಆಗಿದ್ದಾರೆ. ಬಹುತೇಕ ಟ್ರೋಲ್ ಮತ್ತು ರೂಮರ್ಸ್ ಆದ ವಿಚಾರದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ನಡುವಿನ ಗಾಸಿಪ್ ತುಂಬಾನೇ ಹೈಲೈಟ್ ಆಗಿತ್ತು.

ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರ ಕೊಂಡ ಅವರು ಎರಡು ಸಿನೆಮಾದಲ್ಲಿ ಹಿಟ್ ಪೇರ್ ಆಗಿ ನಟಿಸಿದ್ದು ಸಿನೆಮಾ ಹೊರತಾಗಿ ಪ್ರವಾಸ, ಪಾರ್ಟಿ , ಅವಾರ್ಡ್ ಹಾಗೂ ಪ್ರಮೋಶನ್ ಎಲ್ಲ ಸಂದರ್ಭದಲ್ಲಿ ಒಟ್ಟಿಗೆ ಕಾಣಿಸಿದ್ದರು. ಇದೀಗ ಅದೇ ಜೋಡಿ ವಿಚಾರ ಮತ್ತೊಮ್ಮೆ ಆ ಒಂದು ಶೋ ಮೂಲಕ ಹೈಲೈಟ್ ಆಗಿದೆ. ಮುಚ್ಚಿಟ್ಟ ಸತ್ಯವೊಂದು ಈಗತಾನೇ ಹೊರಬಿದ್ದಿದೆ ಎಂದು ಹೇಳಬಹುದು.

ಯಾವುದು ಈ ಕಾರ್ಯಕ್ರಮ

ಅನ್ ಸ್ಪಾಪೆಬಲ್ ವಿತ್ ಎನ್ ಬಿಕೆ ಶೋ (NBK Show) ನಲ್ಲಿ ರಶ್ಮಿಕಾ ಮಂದಣ್ಣ ಅವರ ಪ್ರೀತಿಯ ಗುಟ್ಟು ಬಯಲಾಗಿದೆ. ಇದರ ನಿರೂಪಣೆ ಹೊತ್ತ ಬಾಲಕೃಷ್ಣ ಅವರ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ವಿಚಾರವೊಂದು ಸುದ್ದಿಯಾಗುತ್ತಿದೆ. ರಣಭೀರ್ ಕಪೂರ್ (Ranbir Kapoor) ಹಾಗೂ ರಶ್ಮಿಕಾ ಅವರು ಅನಿಮಲ್ (Animal) ಸಿನೆಮಾದಲ್ಲಿ ನಟಿಸಿದ್ದು ಡಿಸೆಂಬರ್ 1ರಂದು ರಿಲೀಸ್ ಆಗಲಿರುವ ಈ ಸಿನೆಮಾದ ಪ್ರಚಾರ ಕಾರ್ಯ ನಡೆಯುತ್ತಿದೆ. ನಂದಮೋರಿ ಬಾಲಕೃಷ್ಣ (Nandamuri Balakrishna) ತಮ್ಮ ಶೋ ಮೂಲಕ ರಶ್ಮಿಕಾ , ರಣಭೀರ್ ಮತ್ತು ಸಂದೀಪ್ ರೆಡ್ಡಿ ಅವರನ್ನು ಕರೆಸಿದ್ದರು. ಆಗ ರಶ್ಮಿಕಾ ಅವರ ಬಗ್ಗೆ ಒಂದು ಕುತೂಹಲ ಭರಿತ ಮಾಹಿತಿಯೊಂದು ಬೆಳಕಿಗೆ ಬಂದಿದೆ.

advertisement

ಕರೆ ಮಾಡಿ ಸಿಕ್ಕಿ ಬಿದ್ರಾ ರಶ್ಮಿಕಾ?

ಶೋ ಮಧ್ಯದಲ್ಲಿ ರಶ್ಮಿಕಾ ಅವರಿಗೆ ವಿಜಯ್ ದೇವರ ಕೊಂಡ ಅವರಿಗೆ ಕರೆ ಮಾಡುವಂತೆ ತಿಳಿಸಿದ್ದಾರೆ. ಆಗ ರಶ್ಮಿಕಾ ಅವರಿಗೆ ಲೌಡ್ ಸ್ಪೀಕರ್ ಇಡುವಂತೆ ಹೇಳಿದ್ದಾರೆ. ಬಳಿಕ ಕರೆ ಸ್ವೀಕರಿಸುತ್ತಲೇ ವಾಟ್ಸಪ್ ರೇ ಎಂದು ಪ್ರೀತಿಯಿಂದ ಕೇಳಿದ್ದಾರೆ ಅದನ್ನು ಕೇಳಿದ್ದ ಆಕೆ ನಾಚಿ ನೀರಾಗಿದ್ದಾರೆ. ಐ ಲವ್ ಬಾಲಸರ್ ಎಂದು ವಿಜಯ್ ಅವರಿಗೆ ಹೇಳಿದ್ದಾರೆ. ಬಳಿಕ ವಿಜಯ್ ನೀವೇನು ಹೇಳ್ತೀರಿ ಅಂದಿದ್ದಾರೆ. ಬಳಿಕ ವಿಜಯ್ ಅವರು ಐ ಲವ್ ಸಂದೀಪ್ ರೆಡ್ಡಿ ವಂಗ ಎಂದು ತಿಳಿಸಿದ್ದಾರೆ. ಬಳಿಕ ಬಾಲಯ್ಯ ಕೂಡ ಐ ಲವ್ ರಶ್ಮಿಕಾ ಎಂದು ಬೇಕಂತಲೇ ಕೂಗಿದ್ದು ಪ್ರೇಕ್ಷಕರಿಗೆ ಇವರಿಬ್ಬರ ನಡುವೆ ಏನೊ ಇದೆ ಎಂಬ ಗೊಂದಲಕ್ಕೆ ಬಳಿಕ ಸರಿಯಾಗಿ ಉತ್ತರ ಸಿಕ್ಕಿದೆ ಎನ್ನಬಹುದು‌.

 

ಫನ್ನಿ ಆಯ್ತು ಈ ವೀಡಿಯೋ

ಸಂದೀಪ್ ವಂಗಾ ಮತ್ತು ರಶ್ಮಿಕಾ ಮಂದಣ್ಣ ಅವರು ಮೊದಲ ಬಾರಿ ಭೇಟಿ ಆದದ್ದು ಕೂಡ ವಿಜಯ್ ದೇವರಕೊಂಡ ಅವರ ಮನೆಯಲ್ಲಿ ಎಂಬ ಸತ್ಯ ಕೂಡ ವೈರಲ್ ಆಗಿದ್ದು ರಶ್ಮಿಕಾ ಇವೆಲ್ಲ ಡಿಸ್ಕಶನ್ ಬೇಕಾ ಎಂದು ಕೇಳಿದ್ದಾರೆ. ಅಂತೂ ದಿನೇ ದಿನೇ ವಿಜಯ್ ದೇವರಕೊಂಡ ಅವರ ಜೊತೆ ಕಾಣಿಸಿಕೊಳ್ಳುವ ಪ್ರಮಾಣ ಅಧಿಕವಾಗುತ್ತಲಿದೆ. ಈ ವೀಡಿಯೋ ಅಂತೂ ಜನರಿಗೆ ತುಂಬಾನೇ ಇಷ್ಟವಾಗಿದ್ದು ಫನ್ನಿ ಎಂಟಟೈನ್ ವೀಡಿಯೋ ಸಾಲಿಗೆ ಸೇರಿದೆ.

advertisement

Leave A Reply

Your email address will not be published.