Karnataka Times
Trending Stories, Viral News, Gossips & Everything in Kannada

Aadhar Card: ಇನ್ನೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿದ್ದರೆ ಈ ಸಮಸ್ಯೆ ಗ್ಯಾರಂಟಿ!

advertisement

ಆಧಾರ್ ಕಾರ್ಡ್ ಭಾರತೀಯ ಗುರುತು ಕಾರ್ಡ್ ನಲ್ಲಿ ಒಂದಾಗಿದ್ದು ದೇಶದಲ್ಲಿ ಲಭ್ಯವಾಗುವ ಅನೇಕ ಯೋಜನೆಗಳಿಗೆ ಇಂದು ಆಧಾರ್ ಕಾರ್ಡ್ (Aadhar Card) ಅನ್ನು ಅಗತ್ಯ ದಾಖಲೆಯಾಗಿ ಕೇಳಲಾಗುತ್ತಿದೆ. ಇತ್ತೀಚಿನ ದಿನದಲ್ಲಿ ಶಕ್ತಿ ಯೋಜನೆಗೆ ಆಧಾರ್ ಅನ್ನು ಗುರುತು ಕಾರ್ಡ್ಆಗಿ ಪರಿಗಣಿಸಿದ್ದು ಅದರ ಮಾನ್ಯತೆ ಹೆಚ್ಚು ಮಾಡಿದೆ ಅದೇ ರೀತಿ ಜನರ ಬ್ಯಾಂಕ್ ಖಾತೆಗೆ ಕೂಡ ಆಧಾರ್ ಲಿಂಕ್ ಮಾಡಬೇಕು ಎಂಬ ನಿಯಮ ಈ ಹಿಂದಿನಿಂದಲೂ ಇದ್ದದ್ದೇ ಆಗಿದ್ದು ಇದೀಗ ಲಿಂಕ್ ಮಾಡಿಸದೇ ಇರುವವರಿಗೆ ದೊಡ್ಡ ಆಘಾತ ಎದುರಾಗಲಿದೆ.

ಆಧಾರ್ ಲಿಂಕ್ ಕಡ್ಡಾಯ

ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದ್ದು ಈಗಾಗಲೇ ಸಾಕಷ್ಟು ಬಾರಿ ಲಿಂಕ್ ಮಾಡಲು ಅವಕಾಶ ನೀಡಲಾಗಿ ಗಡುವನ್ನು ಸಹ ವಿಸ್ತರಣೆ ಮಾಡಿದೆ. ಆರ್ಥಿಕ ಚಟುವಟಿಕೆಗಳಿಗೆ ಈ ವ್ಯವಸ್ಥೆ ಸಾಕಷ್ಟು ತೊಂದರೆ ನೀಡುವುದಂತೂ ಗ್ಯಾರೆಂಟಿ. ಇದು ಕರ್ನಾಟಕಕ್ಕೆ ಮಾತ್ರ ವಿಧಿಸಿದ ನಿಯಮ ಆಗಿರದೇ ಇಡೀ ದೇಶದಲ್ಲಿ ಆರ್ಥಿಕ ವ್ಯವಸ್ಥೆ ಪ್ರಯೋಜನ ಪಡೆಯಲು ನಿಮ್ಮ ಬ್ಯಾಂಕ್ ಖಾತೆ ಸಕ್ರಿಯವಾಗಿರಿಸಲು ಆಧಾರ್ ಲಿಂಕ್ ಕಡ್ಡಾಯವಾಗಿದೆ.

ಯೋಜನೆಯ ಹಣವೇ ಬರುತ್ತಿಲ್ಲ

advertisement

ಆಧಾರ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಆಗಿರದೇ ಪಿಂಚಣಿ, ವಿಧವಾ ವೇತನ , ಅಂಗವಿಕಲ ವೇತನ ಬರದೇ ಸಮಸ್ಯೆ ಆಗಿದ್ದು ಇದೆ. ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದಲ್ಲಿ 12ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಂದಿಲ್ಲ ಅದಕ್ಕೆ ಮುಖ್ಯ ಕಾರಣ ಆಧಾರ್ ಮತ್ತು ಬ್ಯಾಂಕ್ ಲಿಂಕ್ ಮಾಡದೇ ಇರುವುದು ಕಾರಣ ಎನ್ನಬಹುದು. ಈ ಎಲ್ಲ ಸಮಸ್ಯೆ ನಡುವೆ ತಮ್ಮ ಬ್ಯಾಂಕ್ ಖಾತೆ ಆಧಾರ್ ಲಿಂಕ್ ಆಗಿದೆಯಾ ಅಥವಾ ಇಲ್ಲವೇ ಎಂಬ ಅನುಮಾನ ಇದ್ದರೆ ನೀವು ಈ ಕೆಳಕಂಡ ಸರಳ ವಿಧಾನ ಅನುಸರಿಸಿ.

ಹೀಗೆ ಮಾಡಿ

ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIADI) ವೆಬ್ಸೈಟ್ ಭೇಟಿ ನೀಡಬೇಕು. ಬಳಿಕ ಲಿಂಕ್ ಆಗಿದೆಯಾ ಎಂದು ತಿಳಿಯಬಹುದು. myaadhaar.uidai.gov.in ಗೆ ಮೊದಲು ಲಾಗಿನ್ ಆಗಬೇಕು. ಬಳಿಕ ನಿಮ್ಮ ಫೋನ್ ಸಂಖ್ಯೆ ನಮೋದಿಸಿದರೆ OTP ಜನರೇಟ್ ಆಗಲಿದೆ. ಹೀಗೆ ಲಾಗಿನ್ ಆಗಲಿದೆ. ಅದರಲ್ಲಿ ಬ್ಯಾಂಕ್ ಸೀಡಿಂಗ್ ಸ್ಥಿತಿ ತಿಳಿಯಲು ಆಪ್ಶನ್ ಒತ್ತಿ. ಬಳಿಕ ನಿಮ್ಮ ಆಧಾರ್ ಗೆ ಲಿಂಕ್ ಮಾಡಲಾಗಿದೆಯೇ ಇಲ್ಲವೇ ಎಂದು ವಿವರ ನೀಡಲಿದೆ. RBI ನಿಯಮದ ಪ್ರಕಾರ ಬಹು ಬ್ಯಾಂಕ್ ಹೊಂದಿದ್ದರೆ ಆಗ ಒಂದು ಖಾತೆಗೆ ಮಾತ್ರವೇ ಆಧಾರ್ ಲಿಂಕ್ ಆಗಲಿದೆ. ಇದೇ ವಿಧಾನದ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಪ್ರಸ್ತುತ ಸ್ಥಿತಿಯನ್ನು ಅರಿಯಬಹುದಾಗಿದೆ.

UIADI ಮಾಹಿತಿಯನ್ನು ಸಂಗ್ರಹಿಸಿ ಇಡಲಾರದು. ಇದು ಗ್ರಾಹಕರ ಸೇವೆಗೆ ಮಾತ್ರವೇ ಸಹಕಾರಿ ಆಗಲಿದೆ. ಈ ಬಗ್ಗೆ ಯಾವುದೇ ಅನುಮಾನ ಪಡುವ ಅಗತ್ಯ ಇಲ್ಲ ಎಂದು ಆರ್ ಬಿಐ ಕೂಡ ಸ್ಪಷ್ಟೀಕರಣ ನೀಡಿದೆ. ಒಟ್ಟಾರೆಯಾಗಿ ಆಧಾರ್ ಲಿಂಕ್ ಮಾಡಿಸದಿದ್ದರೆ ಸರಕಾರಿ ಸೌಲಭ್ಯ ಸಿಗುವುದು ಮಾತ್ರ ತೊಂದರೆ ಆಗಿರದು ಬದಲಿಗೆ ನಿಮ್ಮ ದೈನಿಕ ಆರ್ಥಿಕ ಚಟುವಟಿಕೆಗೆ ಸಹ ಸಾಕಷ್ಟು ತೊಂದರೆ ಆಗಲಿದೆ ಎಂದು ಹೇಳಬಹುದು.

advertisement

Leave A Reply

Your email address will not be published.