Karnataka Times
Trending Stories, Viral News, Gossips & Everything in Kannada

Lioness: ಪ್ರವಾಸಿಗರ ಕಾರನ್ನೇ ಹತ್ತಿದ ಸಿಂಹಿಣಿ; ವಿಡಿಯೋ ವೈರಲ್

advertisement

ಜಂಗಲ್ ಸಫಾರಿ (Jungle Safari) ಮಾಡುವುದು ಅಂದರೆ ಹಲವರಿಗೆ ಬಹಳ ದೊಡ್ಡ ಕ್ರೇಜ್. ಆಗಾಗ ಬೇರೆ ಬೇರೆ ದೇಶಗಳಿಗೂ ಹೋಗಿ ಜಂಗಲ್ ಸಫಾರಿಯನ್ನು ಆನಂದಿಸುತ್ತಾರೆ ಆದರೆ ಹೀಗೆ ಜಂಗಲ್ ಸಫಾರಿಗೆ ಹೋಗುವ ಮೊದಲು ಅಲ್ಲಿರುವ ಕಾಡು ಪ್ರಾಣಿಗಳ (Wild Animals) ಬಗ್ಗೆಯೂ ಕೂಡ ತಿಳಿದುಕೊಳ್ಳಬೇಕು ಒಂದುವೇಳೆ ನೀವು ತೆರೆದ ಕಾರು ಅಥವಾ ಇತರ ವಾಹನಗಳಲ್ಲಿ ಪ್ರಯಾಣಿಸುವುದಾದರೆ ಯಾವುದೇ ಸಮಯದಲ್ಲಿ ಕಾಡುಪ್ರಾಣಿಗಳು ನಿಮ್ಮ ಮೇಲೆ ದಾಳಿ ಮಾಡಬಹುದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ಹೀಗೆ ಜಂಗಲ್ ಸಫಾರಿ (Jungle Safari) ಗೆ ಸ್ನೇಹಿತರೊಂದಿಗೆ ಖುಷಿಖುಷಿಯಲ್ಲಿ ಹೋಗಿರುವ ಸಂದರ್ಭದಲ್ಲಿ ಸಿಂಹಿಣಿ (Lioness) ಒಂದು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಛಂಗನೆ ಜಿಗಿದು ಪ್ರಯಾಣಿಕರ ಉಸಿರುಗಟ್ಟಿಸುವಂತಹ ದೃಶ್ಯ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನೀವು ನೋಡಿದರೂ ಕೂಡ ಒಂದು ಕ್ಷಣ ಉಸಿರಾಡುವುದನ್ನೇ ಬಿಡುತ್ತೀರಿ.

ಹಠಾತ್ ಬೆದರಿಕೆ ಹುಟ್ಟಿಸಿದ ಸಿಂಹ:

advertisement

ಜಂಗಲ್ ಸಫಾರಿ ಮಾಡುತ್ತಿರುವ ವೇಳೆ ವಾಹನ ಒಂದರಲ್ಲಿ ಕೆಲವು ಪ್ರಯಾಣಿಕರು ಕುಳಿತುಕೊಂಡು ಪ್ರಾಣಿಗಳನ್ನು ವೀಕ್ಷಿಸುತ್ತಿದ್ದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಪ್ರವಾಸಿಗರ ಕಾರಿಗೆ ಸಿಂಹಿಣಿ (Lioness) ಓಡಿ ಬಂದು ಮೇಲಕ್ಕೆ ಎಗರಿದೆ. ವಾಹನದಲ್ಲಿ ಇದ್ದ ಪ್ರತಿಯೊಬ್ಬರ ಜೀವ ಬಾಯಿಗೆ ಬಂದಂತೆ ಭಯಗೊಂಡಿದ್ದರು ಸ್ವಲ್ಪ ಘರ್ಜನೆ ಮಾಡಿ ನಂತರ ಯಾರಿಗೂ ತೊಂದರೆ ಕೊಡದೆ ಪ್ರಯಾಣಿಕರನ್ನು ತಬ್ಬಿಕೊಂಡು ಪ್ರೀತಿಯಿಂದ ನೆಕ್ಕಿ ಹಿಂತಿರುಗಿದ್ದನ್ನು ಈ ವಿಡಿಯೋದಲ್ಲಿ ನೋಡಬಹುದು.

@AMAZIGNATRUE ಹೆಸರಿನ ಖಾತೆ ಒಂದರಲ್ಲಿ ಈ ವಿಶೇಷವಾದ ವಿಡಿಯೋ ಹಂಚಿಕೊಳ್ಳಲಾಗಿದೆ. ಸಿಂಹಿಣಿಯ ವರ್ತನೆ ಒಂದು ಸಲ ಎದೆ ಝಲ್ ಎನಿಸಿದರೂ ನಂತರ ಅದು ಬಹಳ ಪ್ರೀತಿಯಿಂದ ಪ್ರವಾಸಿಗರನ್ನು ವಿಚಾರಿಸಿಕೊಂಡ ಪರಿ ನಿಜಕ್ಕೂ ಪ್ರಾಣಿಗಳಿಗೆ ಖುಷಿ ಕೊಡುತ್ತದೆ ಭಾರಿ ದೇಹವನ್ನು ಹೊಂದಿರುವ ಸಿಂಹಿಣಿ ಪ್ರಯಾಣಿಕನನ್ನ ಬಿಗಿದು ಪ್ರೀತಿಸುತ್ತಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದ್ದು ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ ‘ಇಂತಹ ಸಿಹಿಣಿಯನ್ನು ನಾನು ಎಂದೆಂದೂ ನೋಡಿರಲಿಲ್ಲ’ ಎಂದು ಕೆಲವರು ಕಮೆಂಟ್ ಮಾಡಿದರೆ ಮತ್ತೊಬ್ಬ ವ್ಯಕ್ತಿ ‘ಸಿಂಹಿಣಿ ದಾಳಿ ಮಾಡಿ ಬಿಡುತ್ತೆ ಎಂದು ಭಾವಿಸಿದ್ದೆ’ ಎನ್ನುವುದಾಗಿ ಕಮೆಂಟ್ ಹಾಕಿದ್ದಾರೆ. ಈ ಅದ್ಭುತ ವಿಡಿಯೋ ಇಲ್ಲಿಯವರಿಗೆ 17 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ.

 

advertisement

Leave A Reply

Your email address will not be published.