Karnataka Times
Trending Stories, Viral News, Gossips & Everything in Kannada

Best Fertilizers: ಅಡಿಕೆ ತೋಟಕ್ಕೆ ಖರ್ಚಿಲ್ಲದೆ ತಯಾರಾಗುತ್ತೆ ಈ ಗೊಬ್ಬರ! ಇಳುವರಿ ಕೂಡ ಡಬಲ್, ಈ ರೀತಿ ತಯಾರಿಸಿ

advertisement

Best Fertilizers for Arecanut: ಕೃಷಿ ಭೂಮಿಯಲ್ಲಿ ಫಲವತ್ತತೆ ಹೆಚ್ಚಿಸುವತ್ತ ಮೊದಲ ಆದ್ಯತೆ ಪ್ರತಿಯೊಬ್ಬರು ಕೂಡ ನೀಡುತ್ತಾರೆ. ಕೃಷಿಯಲ್ಲಿ ಭೂಮಿ ಫಲವತ್ತಾದರೆ ಇಳುವರಿ ಕೂಡ ಚೆನ್ನಾಗಿ ಬರುವ ಕಾರಣಕ್ಕೆ ಅದಕ್ಕೆ ನಾವು ಆದ್ಯತೆ ನೀಡಲೇಬೇಕಾಗುತ್ತದೆ. ರಾಸಾಯನಿಕ ಮುಕ್ತವಾಗಿ ಸಾವಯವ ಗೊಬ್ಬರ ಬಳಕೆ ಮಾಡುವವರಿಗೆ ಹಸಿರೆಲೆ ಗೊಬ್ಬರವನ್ನು ಮಾರುಕಟ್ಟೆಯಲ್ಲಿ ಖರೀದಿ ಮಾಡುವ ಬದಲು ನೀವೇ ನಿಮ್ಮ ಮನೆಯಲ್ಲಿ ಹಸಿರೆಲೆ ಗೊಬ್ಬರ ತಯಾರು ಮಾಡಬಹುದು ಇದರಿಂದಾಗಿ ನಿಮಗೆ ಆರ್ಥಿಕ ಪ್ರಯೋಜನೆ ಸಿಗುವ ಜೊತೆಗೆ ಕೃಷಿ ವೆಚ್ಚ ಕೂಡ ತಗ್ಗಲಿದೆ.

ಫಲವತ್ತಾದ ರಸಗೊಬ್ಬರ
ರಸ ಗೊಬ್ಬರದ ಪರಿಕಲ್ಪನೆ ನೀವು ಓದಿರಬಹುದು. ಈ ರಸಗೊಬ್ಬರ ತಯಾರು ಆಗುವಾಗ ಮೊದಲೆರಡು ಹಂತಕ್ಕೆ ಬಹಳ ವಾಸನೇ ಎನಿಸಿದರು ಕಾಲ ಕ್ರಮೇಣ ಎಲ್ಲ ವಾಸನೆ ಮುಕ್ತವಾಗಲಿದೆ. ರಸಗೊಬ್ಬರವನ್ನು ಇಂದು ಸಣ್ಣ ತೋಟಗಾರಿಕೆಯಿಂದ ಹಿಡಿದು ದೊಡ್ಡ ತೋಟಗಾರಿಕೆ ವರೆಗೂ ಬಳಕೆ ಮಾಡಲಾಗುತ್ತದೆ. ಅದೇ ತರ ಕೈ ತೋಟ, ಹೂವಿನ ತೋಟಕ್ಕೂ ಕೂಡ ಇದರ ಪೋಷಣೆ ಬಹಳ ಉಪಯುಕ್ತ ಆಗಲಿದೆ. ಅಡಿಕೆ ತೋಟಕ್ಕಂತೂ ಹಲವರು ಇದನ್ನೇ ಬಳಸುತ್ತಿದ್ದಾರೆ.

Areca nut production in India is dominant in the coastal region within 400 kilometres
Image Source: ThePrint

advertisement

ಹೇಗೆ ತಯಾರು ಮಾಡುವುದು?
ಡ್ರಮ್ ಅಥವಾ ಕಂಟೈನರ್ ನಲ್ಲಿ ಅದಕ್ಕೆ ನಿಮ್ಮ ತೋಟದ ಹಸಿ ಸೊಪ್ಪನ್ನು ಹಾಕಬೇಕು. ಆ ಬಳಿಕ ಅದಕ್ಕೆ ನಮ್ಮ ಜಮೀನಿನ ಅಥವಾ ಇತರ ಕಾಡು ಪ್ರದೇಶದ ಸ್ವಲ್ಪ ಮಣ್ಣನ್ನು ಹಾಕಬೇಕು. ಹೀಗೆ ಮಾಡಿಟ್ಟು ತಂಪಾದ ಜಾಗದಲ್ಲಿ ಶೇಖರಣೆ ಮಾಡಬೇಕು. ಅದಕ್ಕೆ ನೀರು ಹಾಗೂ ಹುಳಿ ಮಜ್ಜಿಗೆಯನ್ನು ಸಹ ಹಾಕಬೇಕು. ಹುಳಿ‌ಮಜ್ಜಿಗೆಯಲ್ಲಿ ಲ್ಯಾಕ್ಟೋ ಕಂಪೋಸ್ ಎಂಬ ಬ್ಯಾಕ್ಟೀರಿಯಾ ಇರಲಿದ್ದು ಅವುಗಳು ಹಸಿರೆಲೆ ಗೊಬ್ಬರವನ್ನು ಮಾಡಲಿವೆ. ಅಗತ್ಯ ಇದ್ದಲ್ಲಿ ಟ್ರೈಕೊಡೊಮಾ ಮತ್ತು ಕ್ರೊಡೊಮಾ ಕಾಲಾ ಪೌಡರ್ ಅನ್ನು ಹಾಕಬಹುದು ಹೀಗೆ ಹಸಿರೆಲೆ ರಸಗೊಬ್ಬರ ತಯಾರಾಗಲಿದೆ.

ಎಷ್ಟು ಸಮಯ ಬೇಕು?
ಈ ಹಸಿರೆಲೆ ರಸಗೊಬ್ಬರಕ್ಕೆ ದನದ ಶೆಗಣಿ ಕೂಡ ಹಾಕಬಹುದು ಅದು ಇಲ್ಲದೆಯೂ ಕೂಡ ಗೊಬ್ಬರವಾಗಿ ಪರಿವರ್ತನೆ ಮಾಡಬಹುದು. ಇದು ತಯಾರು ಆಗಲು 1-2ವಾರ ಬೇಕಾಗಲಿದೆ. ಆಗ ಸೊಪ್ಪೆಲ್ಲ ಕರಗಿ ಹೋಗಲಿದೆ. ಹೀಗೆ ಹಸಿರೆಲೆ ರಸಗೊಬ್ಬರದ ನೀರನ್ನು ವಾರಕ್ಕೆ ಒಮ್ಮೆ ಗಿಡದ ಬುಡಕ್ಕೆ ಹಾಕಬಹುದು. ಇದರಲ್ಲಿ ಸಾಕಷ್ಟು ಸೂಕ್ಷ್ಮಾಣು ಜೀವಿಗಳು ಇರಲಿದ್ದು ಮಣ್ಣಿನೊಂದಿಗೆ ಬೆರೆತು ಮಣ್ಣಿನ ಪೋಷಕಾಂಶ ಹೆಚ್ಚಾಗಲಿದೆ.

Areca nut production in India is dominant in the coastal region within 400 kilometres
Image Source: ThePrint

ಸಗಣಿ ಅಗತ್ಯ ಇಲ್ಲ
ಹೆಚ್ಚಾಗಿ ಸಾವಯವ ಗೊಬ್ಬರ ತಯಾರಿ ಮಾಡುವಾಗ ದನದ ಸಗಣಿ ಬಳಕೆ ಮಾಡುತ್ತಾರೆ ಆದರೆ ಇಲ್ಲಿ ಸಗಣಿ ಇಲ್ಲದೆಯೂ ಕೂಡ ಹಸಿರೆಲೆ ಗೊಬ್ಬರ ತಯಾರಿ ಮಾಡಬಹುದು. ದನ , ಆಕಳು ಇಲ್ಲ ಎನ್ನುವವರು ಸುಲಭಕ್ಕೆ ಹಸಿರೆಲೆ ಗೊಬ್ಬರ ತಯಾರಿಸಬಹುದು. ಸಂಗ್ರಹದ ತೊಟ್ಟಿಯ ಖರ್ಚು ಬಿಟ್ಟರೆ ಮತ್ತೆ ಯಾವುದೇ ಖರ್ಚು ಇಲ್ಲ ಎನ್ನಬಹುದು. ಹಸಿರು ಸೊಪ್ಪನ್ನು ಮರದ ಬುಡಕ್ಕೆ ನೇರವಾಗಿ ಹಾಕಿದರೆ ಅದು ಒಣಗಿ ಹೋಗಲಿದೆ. ಹಾಗಾಗಿ ಹೀಗೆ ರಸಗೊಬ್ಬರ ಮಾಡಬಹುದು

advertisement

Leave A Reply

Your email address will not be published.